ಸುದ್ದಿಲೈವ್/ತೀರ್ಥಹಳ್ಳಿ
ಸಂಘ ಸಂಸ್ಥೆಯಲ್ಲಿ ಎರಡು ಲಕ್ಷ ಹಾಗೂ ಇತರೆ ಕೈ ಸಾಲ ಮಾಡಿಕೊಂಡಿದ್ದ ರೈತನೋರ್ವ ಇತ್ತ ಬೆಳೆಯಲ್ಲೂ ನಷ್ಟ ಅನುಭವಿಸಿದ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಣ್ಣದಮನೆಯ ನೇಮನಾಯ್ಕ (60 ವರ್ಷ) ಎಂಬ ರೈತ ಅಡಿಕೆಗೆ ಎಲೆಚುಕ್ಕಿ ರೋಗ ಹಾಗು ಕೊಳೆ ರೋಗದಿಂದ ಬೇಸತ್ತು ಜೀವನ ನಿರ್ವಹಣೆಗಾಗಿ ಸಂಘ ಸಂಸ್ಥೆಯಲ್ಲಿ ಹಾಗೂ ಕೈ ಸಾಲ ತೀರಿಸಲು ದಿಕ್ಕು ತೋಚದೇ ಬುಧವಾರ ಸಂಜೆ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದಾರೆ.
ನಂತರ ನೇಮನಾಯ್ಕ್ ಅವರನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ ನಿನ್ನೆ ರಾತ್ರಿ 10 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.