ಭಗ್ನ ಪ್ರೇಮಿಯಿಂದ ಯುವತಿಯ ಮೇಲೆ ಹಲ್ಲೆ

 


ಸುದ್ದಿಲೈವ್/ಶಿವಮೊಗ್ಗ

ಭಗ್ನ ಪ್ರೇಮಿಯ ಕೈಗೆ ಸಿಲುಕಿದ ಯುವತಿ ಆತನಿಂದ ಕೊಲೆ ಬೆದರಿಗೆ ಒಳಗಾಗಿ, ಆಕೆಯ ಕೈಗಳನ್ನ ಟೈಲ್ಸ್ ಕಲ್ಲಿನಿಂದ ಜಜ್ಜಿರುವ ಘಟನೆ ನಗರದ ಗಾಂಧಿ ಪಾರ್ಕ್ ನಲ್ಲಿ ನಡೆದಿದೆ.

ಗಾಂಧಿ ಪಾರ್ಕ್‌ಗೆ ಲವರ್ ಗಳ ಕೊಡುಗೆ ಅಧಿಕವಿದೆ. ಪ್ರಯಣಯಕ್ಕೆ ಬಿದ್ದ ಲವರ್ ಗಳು ಗಾಂಧಿ ಪಾರ್ಕ್‌ಗೆ ವಿಸಿಟ್ ಮಾಡಿಯೇ ಇರ್ತಾರೆ.   ಹಾಗೆ ಭಗ್ನ ಪ್ರೇಮಿಗಳು ಏಕಾಂತಕ್ಕಾಗಿ ಪಾರ್ಕ್‌‌ಗೆ ಭೇಟಿ ನೀಡಿರುತ್ತಾರೆ. ಆದರೆ ಇಲ್ಲೊಬ್ಬ ಭಗ್ನ ಪ್ರೇಮಿಯ ಮುಖವಾಡ ಹಾಕಿಕೊಂಡಿದ್ದ ಯುವಕ ಯುವತಿಯ ಮೇಲೆ ಹಲ್ಲೆ ಮಾಡಿರುವ ಘಟನೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿಕಾರಿಪುರ ತಾಲೂಕಿನ 23 ವರ್ಷದ ಯುವತಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಂತಿಮ ಸ್ನಾತಕೋತ್ತರ ಪದವಿಯನ್ನ ಓದುತ್ತಿದ್ದಾರೆ. ಅದರಂತೆ ರಟ್ಟೇಹಳ್ಳಿಯ ಹನುಮಂತು ಯುವತಿಗೆ ಪರಿಚಯವಾಗಿದ್ದು ಪ್ರಣಯದ ಮನವಿ ನಿವೇನೆಯನನ ಮಾಡಿರುತ್ತಾನೆ.
ಆದರೆ ಯುವತಿ ಆತನ ಪ್ರೀತಿಯನ್ನ ತಿರಸ್ಕರಿಸಿ ಸ್ನೇಹಿತನಾಗಿರೋಣ ಎಂದು ಹೇಳಿರುತ್ತಾಳೆ. ಯಾವಾಗ ಪ್ರೀತಿ ನಿರಾಕರಣೆ ಮಾಡಿ ಸ್ನೇಹಕ್ಕೆ ಕೈಚಾಚಿದ ಯುವತಿಯನ್ನ ಹನುಮಂತು ಊರಿಗೆ ಬಂದವಳು ನೀರಿಗೆ ಬರಲ್ವಾ ಎಂದು ಮನಸ್ಸಿನಲ್ಲಿ ಪ್ರೀತಿಯನ್ನ ಅವಿಚಿಟ್ಟು ಕೊಂಡಿರುತ್ತಾನೆ.

ಹೀಗೆ ದಿನ ಸಾಗ್ತಾ ಇದ್ದಹಾಗೆ ನಿನ್ನೆ ಯುವತಿ ತಾನು ಊರಿಗೆ ಹೋಗುತ್ತಿರುವುದಾಗಿ ಫೊನ್ ಕರೆ ಮಾಡಿ ತಿಳಿಸಿರುತ್ತಾಳೆ ನಾಳೆ ಬರ್ತ್ ಡೇ ಇದೆ ಊರಿಗೆ ಹೋಗ್ತಿದ್ದೀನಿ ಬರ್ತ್ಯಾ ಹನುಮಂತು ಎಂದಿರುತ್ತಾಳೆ. ಊರಿಗೆ ನಾನು ಬರಬೇಕು. ಹೋಗುವ ಮುಂಚೆ ಭೇಟಿಯಾಗಿ ಹೋಗಿ ಎಂದಿರುತ್ತಾನೆ ಹನುಮಂತು.

ಯಾವಾಗ ಯುವತಿಯನ್ನ ಭೇಟಿಯಾಗ್ತಾನೆ ಆಗ ನಾಳೆ ನಿನ್ನ ಹುಟ್ಟುಹಬ್ಬ ಇದೆ. ಇವತ್ತು ನಿನ್ನ ಹುಟ್ಟುಹಬ್ಬ‌ಆಚರಿಸೋಣ ನನ್ನ ಸ್ನೇಹಿತ ಕೇಕ್ ತರ್ತಾನೆ ಅಲ್ಲಿಯ ವರೆಗೂ ಪಾರ್ಕ್ ನಲ್ಲಿರೊಣ ಎಂದು ಹೇಳಿರುತ್ತಾಳೆ. ಹನುಮಂತುವಿನ ಸ್ನೇಹಿತ ಕೇಕ್ ತಾರದೆ ತಡಮಾಡಿದ ಪರಿಣಾಮ ಪಾರ್ಕ್ ನಲ್ಲಿ ಹನುಮಂತುವಿನ ಒಟ್ಟಿಗೆ ಇದ್ದ ಯುವತಿ ಊರಿಗೆ ತಲುಪುವುದು ತಡವಾಗುತ್ತಿದೆ ನಾನು ಹೊರಡುತ್ತೀನಿ ಎಂದಿದ್ದಾಳೆ.

ಯಾವಾಗ ಯುವತಿಯನ್ನ ಬಿಟ್ಟು ಹೋಗುತ್ತಿದ್ದಾಳೆ ಎನಿಸುತ್ತೆ. ಹನುಮಂತುವಿನಲ್ಲಿದ್ದ ಹುಡುಗಿ ಬಗ್ಗೆ ಇದ್ದ ಪೊಸೆಸಿವ್ ನೆಸ್ ಜಾಗೃತಗೊಂಡಿದೆ. ಯುವತಿಯನ್ನ ಬೈದು ಆಕೆಯ ಕೈ ಎಳೆದು. ಬಿಟ್ಟು ಹೋದರೆ ಕೊಲೆ ಮಾಡುವುದಾಗಿ ಟೈಲ್ಸ್ ಕಲ್ಲನ್ನ ಹಿಡಿದುಕೊಂಡು ಬಿಡ್ತಾನೆ. ಆಕೆಯ ಕೈಗಳನ್ನ ಟೈಲ್ಸ್ ಕಲ್ಲಿನಿಂದ ಹಲ್ಲೆ ಮಾಡಿ ರಕ್ತಪಡಿಸಿದ್ದಾನೆ. ಮಾಹಿತಿ ಪ್ರಕಾರ ಯುವತಿಯ ಕೈ ಮುರಿದಿರುವುದಾಗಿ ತಿಳಿದು ಬಂದಿದೆ. ಆಕೆಯನ್ನ‌ ಮೆಗ್ಗಾನ್ ಗೆ ದಾಖಲಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close