ಸುದ್ದಿಲೈವ್/ಶಿವಮೊಗ್ಗ
ರಾಜ್ಯದ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದ ಎನ್ ಮಂಜುನಾಥ್ ಅವರಿಗೆ ಹನುಮಂತರಾಯ ಪ್ರಶಸ್ತಿ ಲಭಿಸಿದೆ. ಇನ್ನೋರ್ವ ಪತ್ರಕರ್ತ ಹೊನ್ಬಾಳಿ ಚಂದ್ರುವಿಗೆನಾಟಕ ಅಕಾಡೆಮಿ ಲಭಿಸಿದೆ. ಇವರಿಗೆ ಸನ್ಮಾನಿಸಲು ತೀರ್ಮಾನಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘ ಮತ್ತು ಪ್ರೆಸ್ ಟ್ರಸ್ಟ್ ಜಂಟಿಗೋಷ್ಠಿ ನಡೆಸಿ ಅ.27 ರಂದು ಆರ್ ಟಿ ಒ ರಸ್ತೆಯಲ್ಲಿರುವ ಟ್ರಸ್ಟ್ ನ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಲಿದೆ. ಮಾಜಿ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಸನ್ಮಾನಿಸಲಿದ್ದಾರೆ. ಹಬ್ಬದಂತೆ ಆಚರಣೆಗೆ ತೀರ್ಮಾನವಾಗಿದೆ.
ಈ ಮೊದಲು ಹನುಮಂತರಾಯ ಪ್ರಶಸ್ತಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿತ್ತು. ಈಗ ಮೊದಲಬಾರಿಗೆ ಜಿಲ್ಲಾ ಮಟ್ಟದ ಪತ್ರಕರ್ತರಿಗೆ ಲಭಿಸಲಿದೆ.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ನ ಗೋಪಾಲ ಯಡಗೆರೆ, ಎಚ್ಚರಿಕೆ ಪತ್ರಿಕೆಯ ಸೂರ್ಯನಾರಾಯಣ್, ಮಲೆನಾಟು ಟುಡೆ ವೆಬ್ ಸೈಟ್ ನ ಮಾಲೀಕ ಜೇಸುದಾಸ್, ಸಂಘದ ಪ್ರಧಾನ ಕಾರ್ಯದರ್ಶಿ ವಿ.ಟಿ ಅರುಣ್ ಉಪಸ್ಥಿತರಿದ್ದರು.