ಶಿವಮೊಗ್ಗ ರೈತ ದಸರಾದಲ್ಲಿ ಗ್ರಾಮೀಣ ಸೊಬಗಿನ ಅನಾವರಣಗೊಂಡಿದೆ. ದೇಶದ ಬೆನ್ನೆಲುಬು ರೈತನಾಗಿದ್ದು, ದಸರಾದಲ್ಲಿ ರೈತ ದಸರಾವನ್ನ ಆಚರಿಸಿಕೊಂಡು ಬರಲಾಗುತ್ತಿದೆ. ರೈತರ ಜೀವನ ವಿಶಿಷ್ಟ ಇಂತಹಾ ರೈತರ ಜೀವನ ತೋರಿಸುವ ಕಾರ್ಯ ಶಿವಮೊಗ್ಗ ದಸರಾದಲ್ಲಿ ಕಙಡು ಬಂದಿದೆ.
ಶಿವಮೊಗ್ಗ ದಸರಾ ಮಹೋತ್ಸವ ಅಂಗವಾಗಿ ಇಂದು ನಗರದಲ್ಲಿ ಸಡಗರ, ಸಂಭ್ರಮದಿಂದ ರೈತ ದಸರಾ ನಡೆದಿದೆ. ಅಲಂಕೃತ ಎತ್ತಿನ ಗಾಡಿಗಳು, ಟಿಲ್ಲರ್, ಕಲಾತಂಡಗಳೊಂದಿಗೆ ನಗರದ ಸೈನ್ಸ್ ಫಿಲ್ಡ್ ನಿಂದ ಕುವೆಂಪು ರಂಗಮಂದಿರದವರೆಗೆ ಮೆರವಣಿಗೆಯಲ್ಲಿ ರೈತರು ಆಗಮಿಸಿದ್ದಾರೆ.
ಮೆರವಣಿಗೆಯಲ್ಲಿ ಮೇಳಸಿದ ಹಸಿರು. ಸುತ್ತಮುತ್ತಲಿನ ನೂರಾರು ರೈತರು, ರೈತ ದಸರಾ ಕಾರ್ಯಕ್ರಮದಲ್ಲಿ ಭಾಗಿದ್ದರು. ರೈತ ದಸರಾ ಜಾಥವನ್ ಶಿವಮೊಗ್ಗ ಶಾಸಕ ಎಸ್ ಎನ್ ಚನ್ನಬಸಪ್ಪ ಉದ್ಘಾಟಿಸಿದ್ದರು.
ಶಿವಮೊಗ್ಗ ಮಹಾನಗರ ಪಾಲಿಕೆಯ ಮಾಜಿ ಸದಸ್ಯರು ಭಾಗಿಯಾಗಿ,ಎತ್ತಿನ ಗಾಡಿಯಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು. ಮೆರವಣಿಗೆ ಕುವೆಂಪು ರಂಗಮಂದಿರ ತಲುಪಿದ ನಂತರ ವೇದಿಕೆ ಕಾರ್ಯಕ್ರಮ ನಡೆಯಿತು.
ನಂತರ ಮಾತನಾಡಿದ ರೈತ ರಮೇಶ್, ರೈತರಿಗೆ ಶುಭದಿನವಾಗಿದೆ. ರೈತರನ್ನ ಗುರುತಿಸಿ ವೇದಿಕೆ ನೀಡಲಾಗಿದೆ. ಅಡಿಕೆ ಬೆಳೆದು ರೈತರಾಗಿರುವ ಮಲೆನಾಡಿನ ರೈತರು ಇತರೆ ಬೆಳೆಯನ್ನ ಬೆಳೆಯಬೇಕು. ನಾವೇ ಮೌಲ್ಯವರ್ಧನೆ ಮಾಡಬೇಕು. ಗುಣಮಟ್ಟದಲ್ಲಿ ಸಂಸ್ಕರಿಸಿ ಮಾರುಕಟ್ಟೆ ಮಾಡಬೇಕು. ಕೃಷಿ ಭೂಮಿಯನ್ನ ಉಳಿಸಿಕೊಂಡು ವಾರದಲ್ಲಿ ಎರಡು ಮೂರು ದಿನ ಕಳೆಯಬೇಕು ಎಂದರು.
ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪ ಮಾತನಾಡಿ, ದಸರಾದಲ್ಲಿ ಪ್ರತಿವರ್ಷ ರೈತರ ದಸರಾ ನಡೆಸಲಾಗುತ್ತಿದೆ. ಶಿವಮೊಗ್ಗದಲ್ಲಿ ಮಾತ್ರ ರೈತರು ಎತ್ತಿನಗಾಡಿ, ಟ್ರಿಲ್ಲರ್ ನಲ್ಲಿ ಬರುವುದು ವಿಶೇಷವಾಗಿದೆ. ಒಕ್ಕಲುತನವೆಂಬುದು ಒಂದು ಸಂಸ್ಕೃತಿಯಾಗಿದೆ. ಲಾಲ್ ಬಹದ್ದೂರು ಶಾಸ್ತ್ರಿ ಪ್ರಧಾನಿಯಾಗಿದ್ದಾಗ ದೇಶದಲ್ಲಿ ಬಡತನವಿತ್ತು. ವಾರದಲ್ಲಿ ಸೋಮವಾರ ಉಪವಾಸಕ್ಕೆ ಕರೆ ನೀಡಲಾಗಿತ್ತು. ಜೈಜವಾನ್ ಜೈಕಿಸಾನ್ ಎಂಬ ಘೋಷಣೆ ಮಾಡಿದವರು ಶಾಸ್ತ್ರಿಗಳು. ದೇಶ ಕಾಯುವನು ಸೈನಿಕನು ಹೇಗೋ ದೇಶಕ್ಕೆ ರೈತ ಆರ್ಥಿಕ ಬೆನ್ನಲುಬು ಎಂಬುದು ಅದರ್ಥ ಎಂದರು.
ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಶಾಸಕ ಚೆನ್ನಬಸಪ್ಪ ಮಾತನಾಡಿ, ಗ್ರಾಮೀಣ ಭಾರತ ಮತ್ತು ಸಂಸ್ಕೃತಿಯನ್ನ ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗುವವನು ರೈತನೊಬ್ಬನು. ರೈತರಿಗೆ ಬೆಳೆದ ಬೆಳೆಗೆ ಮಾರುಕಟ್ಟೆ ದರ ನಿಗದಿಪಡಿಸುವಂತಾಗಬೇಕು. ರೈತನ ಹೆಸರಿನಲ್ಲಿ ದೇಶವನ್ನ ಕಟ್ಟಲಾಗಿದೆ. ಇಂದು ಗೊಬ್ಬರ ಸಿಗದಂತಹ, ಮೇವು ಸಿಗದಂತಹ ಪರಿಸ್ಥಿತಿ ನಿರ್ಮಾಷವಾಗಿದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಕೃಷಿ ಹೇಗಿರಬೇಕು ಎಂಬುದು ಇದೆ. ಅದನ್ನ ಬೆಳೆಯಬೇಕಿದೆ. ಇದೆ ಮುಂದುವರೆದರೆ ಆಹಾರಕ್ಕೂ ಕಷ್ಟವಾಗಲಿದೆ. ರೈತರು ಈ ಬಗ್ಗೆ ಯೋಚಿಸಬೇಕಿದೆ ಎಂದರು.
ರೈತ ದಸರಾ ಕಾರ್ಯಕ್ರಮ ಕುವೆಂಪು ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಭೀಕರಾಗಿ ಬಂದಿದ್ದವರಿಗಿಂತ ವೇದಿಕೆಯ ಮೇಲೆ ಇದ್ದವರ ಸಂಖ್ಯೆ ಹೆಚ್ಚಿತ್ತು.