Girl in a jacket

ಸ್ಮಶಾನ ಜಾಗಕ್ಕೆ ಜಾಮೀಯ ಮಸ್ಜಿದ್ ಕಮಿಟಿ ಮನವಿ


ಸುದ್ದಿಲೈವ್/ಶಿವಮೊಗ್ಗ

ಮುಸ್ಲೀಂ ಸಮುದಾಯಕ್ಕೆ ಚೋರಡಿಯಲ್ಲಿ  ಅಧಿಕೃತ ಸ್ಮಶಾನ ಜಾಗ ಒದಗಿಸುವಂತೆ ಆಗ್ರಹಿಸಿ ಅಲ್ಲಿನ  ಜಾಮೀಯ ಮಸ್ಜಿದ್ ಕಮಿಟಿ ಇಙದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿಸಲ್ಲಿಸಿತು. 

ಶಿವಮೊಗ್ಗ ತಾಲ್ಲೂಕು, ಚೋರಡಿ ಗ್ರಾಮದಲ್ಲಿ ಸುಮಾರು 100 ರಿಂದ 150 ಮುಸ್ಲಿಂ ಸಮುದಾಯದ ಮನೆಗಳಿದ್ದು, ಸಮುದಾಯದಲ್ಲಿ ಮರಣ ಹೊಂದಿದ ಮುಸ್ಲಿಂ ಬಾಂಧವರಿಗೆ ದಫನ್ ಮಾಡಲು/ ಹೂಳಲು ಅಧಿಕೃತ ಜಾಗವಿಕ್ಲದಂತಾಗಿದೆ ಎಂದು ಸಮಿತಿ ಮನವಿಯಲ್ಲಿ ಆಗ್ರಹಿಸಲಾಗಿದೆ.‌  

ಈ ಹಿಂದೆ ಸುಮಾರು 5 ತಲೆಮಾರಿನಿಂದಲೂ ಸಹ ಕುಮುದ್ವತಿ ನದಿಯ ದಡದ ಪಕ್ಕದಲ್ಲಿ ನಮ್ಮ ಪೂರ್ವಜರು ದಫನ್ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಇದಕ್ಕೆ ಯಾವುದೇ ತರಹದ ದಾಖಲಾತಿಗಳು ಇರುವುದಿಲ್ಲ. 

ಆದುದರಿಂದ ಸುಮಾರು 1995 ಇಸವಿ ನಂತರದಿಂದ ಜನಸಂಖ್ಯೆ ಬೆಳೆದುಕೊಂಡು ಬರುತ್ತಿದ್ದು, ಮಳೆಯ ಅತಿವೃಷ್ಟಿಯಿಂದ ಹೊಳೆಯ ಪಕ್ಕದಲ್ಲಿರುವ ಅನಧಿಕೃತ ಖಬರಸ್ಥಾನದ ಗೋರಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಉದಾಹರಣೆಗಳು ಇವೆ. ದಫನ್ ಮಾಡಿರುವಂತಹ ಶವವು ನದಿಯು ಸೇತುವೆ ಮಟ್ಟಕ್ಕೆ ನೀರು ತಲುಪಿದಾಗ ಅಂಜನಾಪುರ ಜಲಾಶಯಕ್ಕೆ ಕೊಚ್ಚಿಕೊಂಡು ಹೋಗಿರುವ ಉದಾಹರಣೆಗಳಿವೆ.

ಆದರೆ 2000 ಇಸವಿಯಿಂದಲೂ ಇದಕ್ಕೆ ಸತತವಾಗಿ ಸರ್ಕಾರಕ್ಕೆ ಅಧಿಕೃತವಾಗಿ ಖಬರಸ್ಥಾನ (ಸ್ಮಶಾಣ) ಕ್ಕಾಗಿ ಮನವಿ ನೀಡಿಕೊಂಡು ಬರುತ್ತಿದ್ದರೂ  ಯಾವುದೇ ಸರ್ಕಾರಿ ಕಂದಾಯ ಭೂಮಿಯಲ್ಲಿ ಜಾಗದ ಬೇಡಿಕೆಯನ್ನು ಅಂದಿನಿಂದಲೂ ಈಡೇರಿಸಿಲ್ಲ.  

ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸ್ಮಶಾನ ಜಾಗವನ್ನ ಕಮಿಟಿಗೆ ನೀಡಬೇಕು. ಮೊನ್ನೆ ಬಿದ್ದ ಮಳೆಯಿಂದಾಗಿ ಖಬರ್ ಸ್ಥಾನವು ನೀರಿನಿಂದ ತುಂಬಿಕೊಂಡಿವೆ. ಇಂತಹ ಸಂದರ್ಭದಲ್ಲಿ ಆಕಸ್ಮಾತ್ ಯಾರಾದರೂ ಮರಣ ಹೊಂದರೆ ಅವರಿಗೆ ದಫನ್ ಮಾಡಲು (ಹೂಳಲು) ಸಾಧ್ಯವಾಗುವುದಿಲ್ಲ ಎಂದು ದೂರಲಾಗಿದೆ.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು