ಭದ್ರಾವತಿಯಲ್ಲಿ ಗಾಂಜಾ ರೈಡ್



ಸುದ್ದಿಲೈವ್/ಶಿವಮೊಗ್ಗ/ಭದ್ರಾವತಿ

ಶಿವಮೊಗ್ಗದ ಎರಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ದಾಳಿ ನಡೆದಿದೆ. ಗಾಂಜಾ ದಾಳಿಯಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. 

ಭದ್ರಾವತಿಯ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಗರದಹಳ್ಳಿ ಕ್ಯಾಂಪ್ ನಲ್ಲಿ ಗಾಂಜಾ ಮಾರಾಟಕ್ಕಾಗಿ ಮನೆಯಲ್ಲಿ ಸಂಗ್ರಹಿಸಿದ್ದನ್ನ ದಾಳಿ ನಡೆಸಿದ ಹೊಳೆಹೊನ್ನೂರು ಪೊಲೀಸರು ಸಂಜೀವ ಮತ್ತು ಗುರುಪ್ರಸಾದ್ ಎಂಬುವನನ್ನ ವಶಕ್ಕೆ ಪಡೆದಿದ್ದಾರೆ. 

ದಾಳಿಯ ವೇಳೆ 5 ಕೆಜಿ 574 ಗ್ರಾಂ ಗಾಂಜಾ ಪತ್ತೆಯಾಗಿದೆ. ಇದರ ಮೌಲ್ಯ 2,80,000 ಎಂದು ಅಂದಾಜಿಸಲಾಗಿದೆ. ಅವರ ಮೊಬೈಲ್ ನ್ನ ಸಹ ಸೀಜ್ ಮಾಡಲಾಗಿದೆ. ಈ ದಾಳಿಯಲ್ಲಿ ಭದ್ರಾವತಿ ಡಿವೈಎಸ್ಪಿ ನಾಗರಾಜ್ ಹೊಳೆಹೊನ್ನೂರು ಪೊಲೀಸ್ ಠಾಣೆಯ ಪಿಐ ಲಕ್ಷ್ಮೀಪತಿ, ಪಿಎಸ್ಐ ರಮೇಶ್, ಹೊಸಮನೆ ಪಿಎಸ್ಐ ಕೃಷ್ಣಕುಮಾರ್ ಮಾನೆ ಹಾಗೂ ಸಿಬ್ವಂದಿಗಳು ಭಾಗಿಯಾಗಿದ್ದರು. 

ಭದ್ರಾವತಿಯ ಸೀಗೆಬಾಗಿಯಲ್ಲಿ ಹಳೇ ಬಸ್ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮೊಹಮದ್ ಅಬ್ಬಾಸ್ ಎಂಬ ಯುವಕನನ್ನ ಬಂಧಿಸಿ 1 ಕೆಜಿ 37 ಗ್ರಾಂ ಒಣ ಗಾಂಜಾ ಹಾಗೂ 350 ರೂ ನಗದನ್ನ ವಶಕ್ಕೆ ಪಡೆಯಲಾಗಿದೆ. ಸೆನ್ ಠಾಣೆ ಪಿಐ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close