ಬೈಕ್ ಗೆ ಪ್ರವಾಸಿ ಬಸ್ ಡಿಕ್ಕಿ-ಸ್ಥಳದಲ್ಲಿಯೇ ಬೈಕ್ ಸವಾರ ಸಾವು



ಸುದ್ದಿಲೈವ್/ಶಿವಮೊಗ್ಗ

ಬೈಕ್ ಸವಾರನಿಗೆ ಪ್ರವಾಸಿ ಬಸ್ ವೊಂದು ಡಿಕ್ಕಿಹೊಡೆದಿದೆ.‌ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. 


ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿಯಲ್ಲಿ ಈ ಘಟನೆ ನಡೆದಿದೆ. ಬೈಕ್ ನಲ್ಲಿ ಬರುತ್ತಿದ್ದ ಪ್ರಥಮ್ ಎಂಬ (19) ವಿದ್ಯಾರ್ಥಿ ಮೃತವಾಗಿದ್ದಾನೆ. ಪ್ರಥಮ ವರ್ಷದ ಡಿಪ್ಲಮೋ ವಿದ್ಯಾರ್ಥಿಯಾಗಿದ್ದ ಪ್ರಥಮ್ ಕಾಲೇಜಿಗೆ ಹೋಗುವಾಗ ಈ ಘಟನೆ ಸಂಭವಿಸಿದೆ. 


ಮೃತ ಪ್ರಥಮ್‌, ತೀರ್ಥಹಳ್ಳಿ ತಾಲೂಕಿನ ತನಿಕಲ್‌ ಪಾಂಡ್ಯ ಗ್ರಾಮದ ನಿವಾಸಿಯಾಗಿರುವುದಾಗಿ ತಿಳಿದು ಬಂದಿದೆ.ಬಸ್ ಢಿಕ್ಕಿಯೊಡೆಯುವ ಸಿಸಿ ಟಿವಿಯಲ್ಲಿ ದೃಶ್ಯ ಸೆರೆ ಘಟನಾ ಸ್ಥಳಕ್ಕೆ ಮಾಳೂರು ಠಾಣೆ ಪೊಲೀಸರು ಭೇಟಿ ನೀಡಿ  ಪರಿಶೀಲನೆ ನಡೆಸಿದ್ದಾರೆ. 

https://blogger.googleusercontent.com/img/b/R29vZ2xl/AVvXsEhufGfYtw6481yoAMOXEy72X-GZ32mhFLlfb1vdeBEAI5ypkG0jRQpyqwYdB7PFK5IOjZFlbxDMP7DxxMS3IOuLRQGAP3mgvvtlHXNJ5Fd6wvhqd_PQws5Xkt5h7al5QEkXrW3HYt2vVDLDy4Ogj6eW_ASnDB7426RpXopNBYUYUrp4abzv3Z7jn_rEDSs/s1600/InShot_20240621_224305466-300x169.jpg

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close