ಸುದ್ದಿಲೈವ್/ಹೊಳೆಹೊನ್ನೂರು
ಸಮೀಪದ ಹಂಚಿನ ಸಿದ್ದಾಪುರದ ಬಳಿ ಖಾಸಗಿ ಬಸ್ ಡಿಕ್ಕಿಯಾಗಿ ಎರಡು ಎಮ್ಮೆಗಳು ಸ್ಥಳದಲ್ಲೆ ಮೃತಪಟ್ಟಿವೆ ಘಟನೆ ವರದಿಯಾಗಿದೆ.
ಶನಿವಾರ ಸಂಜೆ ಈ ಅಪಘಾತ ಸಂಭವಿಸಿದೆ. ಕತ್ತಲಲ್ಲಿ ಎಮ್ಮೆಗಳು ಕಾಣದ ಕಾರಣ ಈ ಘಟನೆ ಸಂಭವಿಸಿದೆ ಎಂದು ಅನುಮಾನಿಸಲಾಗಿದೆ. ಖಾಸಗಿ ಬಸ್ ಚಿತ್ರದುರ್ಗ ದಿಂದ ಶಿವಮೊಗ್ಗದ ಕಡೆ ಪ್ರಯಾಣಿಸುಚ ವೇಳೆ ಈ ಘಟನೆ ನಡೆದಿದೆ.
ಹಂಚಿನ ಸಿದ್ದಾಪುರದ ಸಿದ್ದಪ್ಪ ಎಂಬುವರಿಗೆ ಈ ಎರಡು ಎಮ್ಮೆಗಳು ಸೇರಿದ್ದು, ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಂಜೆ 7-30 ರಿಂದ 8 ಗಂಟೆಯ ವೇಳೆ ಘಟನೆ ಸಂಭವಿಸಿದೆ ಎನ್ನಲಾಗಿದೆ.