ಸುದ್ದಿಲೈವ್/ರಿಪ್ಪನ್ ಪೇಟೆ
ರೈಲ್ವೆ ಹಳಿಯ ಮೇಲೆ ಅನುಮಾನಸ್ಪದ ರೀತಿಯಲ್ಲಿ ಪುರುಷನೊಬ್ಬನ ಶವ ಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಅಂದಾಸುರ ರೈಲ್ವೆ ಗೇಟ್ ಬಳಿ ನಡೆದಿದೆ.
ಅಂದಾಸುರ ರೈಲ್ವೆ ಗೇಟ್ ಸಮೀಪದಲ್ಲಿರುವ ದೇವಸ್ಥಾನವೊಂದರ ಮುಂಭಾಗದಲ್ಲಿ ಮೃತದೇಹ ಪತ್ತೆಯಾಗಿದ್ದು , ಮೃತ ವ್ಯಕ್ತಿಯನ್ನು ಕೋಡೂರು ಮೂಲದ ಜೆಸಿಬಿ ಆಪರೇಟರ್ ಬಸವರಾಜ್ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದುಬರಬೇಕಾಗಿದೆ.
ರೈಲು ಹಳಿಯ ಮೇಲೆ ಮೃತದೇಹ ಪತ್ತೆಯಾಗಿದ್ದು ಮುಖದ ಭಾಗದಲ್ಲಿ ಗಾಯವಾಗಿದೆ. ಮೃತ ವ್ಯಕ್ತಿಗೆ ಸಂಬಂಧಿಸಿದ ಬೈಕ್ ಹಾಗೂ ವಸ್ತುಗಳು ರೈಲೆ ಹಳಿಯ ಪಕ್ಕದಲ್ಲಿ ಪತ್ತೆಯಾಗಿದೆ. ಈ ದೃಶ್ಯ ಸ್ಥಳೀಯರಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ತನಿಖೆ ಮೂಲಕ ಆತನ ಸಾವಿನ ಬಗ್ಗೆ ಮಾಹಿತಿ ಹೊರಬೀಳಬೇಕಿದೆ. ರೈಲಿಗೆ ಸಿಲುಕಿ ಮೃತಪಟ್ಟಂತೆ ಆತನ ಮೃತ ಮೃತದೇಹ ಪತ್ತೆಯಾಗಿದ್ದು. ಈತನ ಸಾವು ಆತ್ಮಹತ್ಯೆಯಲ್ಲ ಕೊಲೆ ಎಂಬ ಅನುಮಾನವೂ ಸಹ ವ್ಯಕ್ತವಾಗಿರುವುದರಿಂದ ತನಿಖೆ ಚುರುಕುಗೊಳ್ಳಬೇಕಿದೆ.