Girl in a jacket

ಮೂಡ ಹಗರಣವನ್ನ ನೆನಪಿಸುತ್ತದೆ ಈ ಡಬ್ಬಲ್ ಬ್ಯಾರಲ್ ಗನ್ ಕಳುವಿನ ಕಥೆ!



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಸಿರಿಗೆರೆ ಅರಣ್ಯ ವ್ಯಾಪ್ತಿಯಲ್ಲಿ ಬಂದೂಕು ಕಳ್ಳತನದ ಕಥೆ ಮತ್ತೊಂದಿಷ್ಟು ಸತ್ಯ ಬಹಿರಂಗಗೊಂಡಿದೆ.  ರೇಂಜ್ ಫಾರೆಸ್ಟ್ ಆಫೀಸರ್ (ಆರ್‌ಎಫ್‌ಒ) ಕಚೇರಿಯಲ್ಲಿ ಚಾಲಕನಾಗಿದ್ದ ಪವನ್ ಆಚಾರ್ ಡಬಲ್ ಬ್ಯಾರೆಲ್ ಗನ್ ಅನ್ನು ಕದ್ದು ಎರಡು ತಿಂಗಳ ಕಾಲ ಬಚ್ಚಿಟ್ಟಿರುವ ಬಗ್ಗೆ ಒಂದೊಂದೆ ಸತ್ಯ ಹೊರಬೀಳುತ್ತಿದೆ. 

ಆಗಸ್ಟ್‌ನಲ್ಲಿ, ಹೊಸ ಆರ್‌ಎಫ್‌ಒ ಅರವಿಂದ್ ಅವರು ಈ ಕಚೇರಿಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರ ವಹಿಸಿಕೊಳ್ಳುವ ವೇಳೆಯೇ ಬಂದೂಕು ನಾಪತ್ತೆಯಾಗಿರುವುದು ಬಹಿರಂಗಗೊಂಡಿದೆ. ಆಗಸ್ಟ್ ತಿಂಗಳಿಗೆ ಆರ್ ಎಫ್ ಒ ಅರವಿಂದ್ ವರ್ಗಾವಣೆ ಆದಾಗ ವರ್ಗಾವಣೆಗೊಂಡ ಆರ್ ಎಫ್ ಒ‌ ಎಲ್ಲಾವನ್ನೂ ಒಪ್ಪಿಸಿ ಹೋಗುವುದು ನಿಯಮ.  ಅದರಂತೆ ಒಪ್ಪಿಸುವ ವೇಳೆ ಬಹಿರಂಗಗೊಂಡಿರುವುದೇ ಬಂದೂಕಿನ ನಾಪತ್ತೆ ಕಥೆ.

ಚಾಲಕ ಪವನ್ ಆಚಾರ್ ಮತ್ತು ಡಿಆರ್‌ಎಫ್‌ಒ ಶಿವಕುಮಾರ್ ಅವರೊಂದಿಗಿನ ಮನಸ್ತಾಪ ಗನ್ ಕಳುವಿಗೆ ಕಾರಣವಿರಬಹುದು ಎಂಬುದು ಮೂಲಗಳಿಂದ ಬಹಿರಂಗಗೊಂಡಿದೆ. ಮದ್ಯ ಸೇವಿಸಿ ಬಂದು ಕಚೇರಿಯಲ್ಲೇ ಮಲಗಿದ್ದ ಪವನ್ ಆಚಾರ್ ಗೆ ತರಾಟಗೆ ತೆಗೆದುಕೊಂಡ ಶಿವಕುಮಾರ್ ವಿರುದ್ಧ ಚಾಲಕ  ಹಠಕ್ಕೆ ನಿಂತುಬಿಡ್ತಾನೆ.

ಗನ್ ಇಟ್ಟು ಮರೆತುಬಿಟ್ಟಿದ್ದ ಶಿವಕಮಾರ್ ಗೆ ವರ್ಗಾವಣೆಗೊಂಡಾಗಲೆ ನೆನಪಾಗಿದ್ದು.  ಅಷ್ಟರೊಳಗೆ, ಪವನ್ ಸ್ನೇಹಿತ ಸುಧೀಶ್ ಮೂಲಕ ಮಾರಾಟ ಮಾಡಿಸಿಬಿಟ್ಟಿದ್ದ. ಇಲಾಖೆ ವಿಚಾರಣ ನೆಡಿಸಿದಾಗಲೂ ಪವನ್ ನನಗೆ ಗೊತ್ತಿಲ್ಲ ಅಂತನೆ ಹೇಳಿದ್ದಾನೆ. ಆದರೆ ಪೊಲೀಸರ ವಿಚಾರಣೆಯಲ್ಲಿ ಪವನ್ ಸ್ನೇಹಿತ ಸುಧೀಶ್  ಕಳ್ಳತನವನ್ನು ಬಯಲಿಗೆಳೆದಿದ್ದಾನೆ. 6,000 ಇಟ್ಟುಕೊಂಡು 26,000 ರೂಪಾಯಿಗೆ ಬಂದೂಕನ್ನು  ಮಾರಾಟ ಮಾಡಿದ್ದಾನೆ ಎನ್ನಲಾಗಿದೆ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ ಅವರು ಆರ್‌ಎಫ್‌ಒ ಕಚೇರಿಗೆ ಭೇಟಿ ನೀಡಿ ಆಗಸ್ಟ್ ಮಧ್ಯಭಾಗದಲ್ಲಿ ಸಿಬ್ಬಂದಿಗೆ ಎಚ್ಚರಿಕೆ ಸಹ ನೀಡಿದ್ದರು. 

ಆರ್‌ಎಫ್‌ಒ ಅರವಿಂದ್ ಕುಂಸಿ ಪೊಲೀಸರಿಗೆ ದೂರು ನೀಡಿದ್ದು, ಪವನ್ ಅವರ ಗುತ್ತಿಗೆಯನ್ನು ರದ್ದುಗೊಳಿಸಲಾಗಿದೆ. ಹಿರಿಯ ಅಧಿಕಾರಿಗಳ ಮೌನ ಹೊಣೆಗಾರಿಕೆಯು  ಈ ಪ್ರಕರಣದಲ್ಲಿ ಆತಂಕವನ್ನ ಹುಟ್ಟುಹಾಕಿರುವ ಸಾಧ್ಯತೆಯೂ ಅಲ್ಲಗಳೆಯುವಂತಿಲ್ಲ. 

ಪೊಲೀಸರು ಸುಧೀಶ್‌ನನ್ನು ಮಾತ್ರ ವಿಚಾರಣೆ ನಡೆಸಿದ್ದಾರೆ, ಪವನ್‌ ಇನ್ನೂ ಪೊಲೀಸರ ಮುಂದೆ ಬಂದಿಲ್ಲ. ಪ್ರಕರಣದಲ್ಲಿ ಗನ್ ಸಿಕ್ಕಿರುವುದರಿಂದ ಎಫ್ಐಆರ್ ಗೋಜಿಗೆ ಹೋದಂತೆ ಕಾಣುತ್ತಿಲ್ಲ. ಆದಾಗ್ಯೂ, ಕುಂಸಿ ಪೊಲೀಸ್ ಇನ್ಸ್‌ಪೆಕ್ಟರ್ ದೀಪಕ್ ಹೆಗ್ಡೆ ಆರೋಪಿಯು ಬಂದೂಕನ್ನು ಹಿಂದಿರುಗಿಸುವುದರೊಂದಿಗೆ ವಿಷಯವನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಹೇಳಿದ್ದಾರೆ. 

ಗನ್ ವಾಪಾಸ್ ಕೊಟ್ಟಿದ್ದೇ ಹ್ಯಾಪಿ ಎಂಡಿಂಗ್ ಅನ್ನೋದಾದರೆ ಸರ್ಕಾರಿ ಆಸ್ತಿಯನ್ನ ಯಾವನೋ ಯಾರಬೇಕಾದರೂ  ಮಾರಾಟ ಮಾಡಿ ಕಳವು ಬಹಿರಂಗಗೊಂಡಾಗ ಹಿಂದಿರುಗಿಸಬಹುದಾ? ಇದು ಒಂದು ತರ ಮೂಡಾ ಹಗರಣವನ್ನ ನೆನಪಿಸುವಂತೆ ಮಾಡಿದೆ. ಎನಿವೇ...! ಕಚೇರಿ ಒಳಗಿನ ಗನ್ ನ್ನ ರಕ್ಷಣೆ ಮಾಡಲಿಕ್ಕೆ ಆಗದ ಅರಣ್ಯ ಇಲಾಖೆ ಅಧಿಕಾರಿಗಳು ಇನ್ನೇಂಥ ಪ್ರಾಣಿ ಮತ್ತು ಅರಣ್ಯವನ್ನ ರಕ್ಷಿಸುತ್ತಾರೆ ಎಂಬುದೇ ಕೊನೆಗೆ ಉಳಿಯುವ ಪ್ರಶ್ನೆಯಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು