ಶಿವಮೊಗ್ಗದ ಶೆಟ್ಟಿಹಳ್ಳಿ ಅಭಯಾರಣ್ಯ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರದ ಮೊದಲ ಹೆಜ್ಜೆ



ಸುದ್ದಿಲೈವ್/ಬೆಂಗಳೂರು, ಅ.7

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಎರಡು ಮಹತ್ತರ ನಿರ್ಧಾರವನ್ನ ಕೈಗೊಳ್ಳಲಾಗಿದೆ. 

ಭದ್ರಾವತಿ ವಿಭಾಗದ ಚೋರಡೇನಹಳ್ಳಿ ರಾಜ್ಯ ಅರಣ್ಯ ಮತ್ತು ಕಾಯಿತೊಟ್ಲು ಕಿರು ಅರಣ್ಯ ಪ್ರದೇಶಗಳನ್ನು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಪ್ರದೇಶಕ್ಕೆ ಸೇರಿಸಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಮ್ಮತಿಸಿದೆ.

ಈ ಕುರಿತು  ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಭೆಯ ಬಳಿಕ ಸುದ್ದಿಗಾರರಿಗೆ ವಿವರ ನೀಡಿದ ಅವರು, ಇದರ ಜೊತೆಗೆ ಶಿವಮೊಗ್ಗ ನಗರದ ಜನರ ಹಿತ ಕಾಯುವ ನಿಟ್ಟಿನಲ್ಲಿ ಶೆಟ್ಟಿಹಳ್ಳಿ ಅಭಯಾರಣ್ಯದ ಗಡಿಯ ಪರಿಷ್ಕೃತ ಪ್ರಸ್ತಾವನೆ ಪರಿಶೀಲಿಸಿ ಒಟ್ಟು 395.64 ಚದರ ಕಿಲೋ ಮೀಟರ್ ಗೆ ನಿಗದಿ ಪಡಿಸಲಾಗಿದೆ, ಇದಕ್ಕೆ ಮಂಡಳಿ ತನ್ನ ಅಂಗೀಕಾರ ನೀಡಿದ್ದು, ಕೇಂದ್ರೀಯ ವನ್ಯಜೀವಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.

ಇದರಿಂದ ಶಿವಮೊಗ್ಗ ಜನತೆಗೆ ಎದುರಾಗಿದ್ದ ಅರಣ್ಯ ಗಡಿ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇದೆ. ಈ ನಿರ್ಣಯವನ್ನ ಕೇಂದ್ರ ವನ್ಯಜೀವಿ ಮಂಡಳಿಯು ಪ್ರಧಾನಿ‌ಮೋದಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಅಂಗೀಕೃತಗೊಂಡಲ್ಲಿ ಶಿವಮೊಗ್ಗ ನಗರದ ಒಳಗೆ ಇರುವ ಗಡಿ ಸಮಸ್ಯೆಗೆ ಫುಲ್ ಸ್ಟಾಪ್ ಇಟ್ಟಂತಾಗುತ್ತದೆ.  

ಅನುಮೋದನೆ ಗೊಂಡರೆ ಶಿವಮೊಗ್ಗ ಸೇಫ್, ಖಾಸಗಿ ಕಾಲೇಜುಗಳು, ಶಿವಮೊಗ್ಗ ಬಸ್ ನಿಲ್ದಾಣವೂ ಒಳಗೊಂಡಂತೆ  ಹಲವು ಕಟ್ಟಡಗಳು ಬಜಾವ್ ಆಗಲಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close