Girl in a jacket

ಮಾವುತರಿಗೆ ಎಸ್ ಟಿ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ



ಸುದ್ದಿಲೈವ್/ಶಿವಮೊಗ್ಗ

ಸಕ್ರೆಬೈಲಿನಲ್ಲಿ ಆನೆಗಳನ್ನು ಪಳಗಿಸುವ ಮಾವುತರಿಗೆ ಎಸ್ ಟಿ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ವತಿಯಿಂದ ಡಿಸಿ ಕಚೇರಿಯ ಎದುರು ಪ್ರತಿಭಟನೆ ನಡೆದಿದೆ.

ಸಕ್ರೆಬೈಲಿನ ಆನೆಗಳನ್ನು ಪಳಗಿಸುವ ಜೇನು ಕುರುಬ ಮಾವುತರಿಗೆ ಎಸ್ ಟಿ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಆಗ್ರಹಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಜೇನುಕುರುಬ ಜನಾಂಗಕ್ಕೆ ಎಸ್ಟಿ ಜನಾಂಗ ಎಂದು ಗುರುತಿಸಲಾಗಿದೆ. 

ಅದೇ ರೀತಿ ಶಿವಮೊಗ್ಗದ ಸಕ್ರೆಬೈಲ್ಲಿನಲ್ಲಿ ವಾಸವಾಗಿರುವ ಹಲವು ಕುಟುಂಬಗಳಿಗೆ ಎಸ್‌ಟಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಲಾಗಿದೆ. ಇದರ ಜೊತೆ ಆಧಾರ್ ಕಾರ್ಡ್ ರೇಷನ್ ಕಾರ್ಡ್ ವೋಟರ್ ಐಡಿ ಎಲ್ಲವನ್ನು ಕೂಡ ನೀಡುವಂತೆ ಆಗ್ರಹಿಸಲಾಗಿದೆ. 

ಮಾವುತರನ್ನ ದಸರಾ ಸಮಯಕ್ಕೆ ಮಾತ್ರ ಉಪಯೋಗ ಮಾಡಿಕೊಳ್ಳದೆ ಅವರಿಗೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿಯೂ ಸಹಕಾರಿ ಆಗುವಂತೆ ಈ ಕೆಲಸ ಮಾಡಲು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ರಾಜ್ಯ ಸಂಘಟಿತ ಕಾರ್ಮಿಕರ ಸಂಘ ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕಾಗಿ ಮನವಿ ಸಲ್ಲಿಸಿದೆ. 

ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಜಿಲ್ಲಾಧ್ಯಕ್ಷೆ ಸುರೇಖಾ ಪಾಲಾಕ್ಷಪ್ಪ ನೇತೃತ್ವದಲ್ಲಿ ನಡೆದ ಪ್ರತಿಭಟನೆ ನಡೆದಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close