ಸುದ್ದಿಲೈವ್/ಶಿವಮೊಗ್ಗ
ಡಿಎಫ್ಒ ವನ್ನ ತರಾಟೆಗೆ ತೆಗೆದುಕೊಂಡ ಪರಿಸರವಾದಿ ಜೋಸೆಫ್ ಹೂವರ್ ಸಾಮಾಜಿಕ ಜಾಲತಾಣದಲ್ಲಿ ಸಕ್ರೆಬೈಲಿನಲ್ಲಿ ಆನೆ ಸಾವರಿಯ ಬಗ್ಗೆ ನಿಷೇಧವಿದ್ದರೂ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಅರಿವಿಲ್ಲದಂತೆ ಡಿಎಫ್ ಒ ನಡೆದುಕೊಂಡಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ.
ಆನೆ ಸವಾರಿಯನ್ನ ದುಬಾರೆ, ಮೈಸೂರು ಜ್ಯೂನಲ್ಲಿ ನಿಷೇಧಿಸಲಾಗಿದೆ. ಎಲ್ಲೂ ಆನೆ ಸವಾರಿ ಇಲ್ಲವಾದರೂ ಸಕ್ರೆಬೈಲಿನಲ್ಲಿ ಆನೆ ಸವಾರಿಯ ಬಗ್ಗೆ ಬೋರ್ಡ್ ನೇತು ಹಾಕಲಾಗಿದೆ. ತುಂಗ ನದಿಯ ದಡದಲ್ಲಿ ಆನೆ ಸವಾರಿ ಮಾಡಿದ ಫೊಟೊಗಳನ್ನ ಪರಿಸರವಾದಿ ಹೂವರ್ ವೈರಲ್ ಮಾಡಿದ್ದಾರೆ.
ಆನೆ ಸವಾರಿಯ ನಿಷೇಧವನ್ನ ನ್ಯಾಯಾಲಯ ತೀರ್ಪಿನಲ್ಲಿ ನೀಡಿದೆ. ಆ ಬಗ್ಗೆ ನಿಮ್ಮ ಗಮನವಿಲ್ವಾ ಎಂದು ಪರಿಸರವಾದಿಗಳು ಅಧಿಕಾರಿಯನ್ನ ಕೇಳಿದ್ದಾರೆ. ಅಧಿಕಾರಿಯು ಹೌದಾ..! ಇಂತಹ ಆದೇಶವಿದೆಯಾ ಎಂದು ಅಚ್ಚರಿಪಡುವಂತೆ ಉತ್ತರಿಸಿದ್ದು, ಈ ಬಗ್ಗೆ ಪರಿಸರವಾದಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಐಎಎಫ್ ಅಧಿಕಾರಿಯೊಬ್ಬರಿಗೆ Animal welfare Board ನಿಂದ ಆದೇಶ ಪಡೆದು ಸವಾರಿ ನಡೆಸುವ ಬಗ್ಗೆ ಮಾಹಿತಿ ಇಲ್ಲದಂತೆ ಹೇಳಿರುವುದನ್ನ ಹೂವರ್ ವಿಡಿಯೋದಲ್ಲಿ ವಿವರವಾಗಿ ತಿಳಿಸಿದ್ದಾರೆ. ಇಷ್ಟು ವರ್ಷಗಳಿಂದ ಆನೆಗಳ ರೈಡ್ ಮಾಡುವ ಬಗ್ಗೆ ಡಿಎಫ್ ಓ ಪಟೆಗಾರ್ ನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಾಣಿಗಳ ಕಲ್ಯಾಣಕ್ಕೆ ಇರಬೇಕಾದ ಇಲಾಖೆಗಳು ಪ್ರಾಣಿಗಳಿಗೂ ಒತ್ತಡದಲ್ಲಿ ಬದುಕುವಂತೆ ಮಾಡಿವೆ. ಜನಜಂಗುಳಿಯಾದಾಗ ಆನೆಗಳಿಗೆ ಒತ್ತಡ ಹೆಚ್ಚುತ್ತವೆ. ಆನೆಗಳಿಗೆ ಒತ್ತಡ ಹೆಚ್ಚದಂತೆ ಮಾಡಲು ಪ್ರಶಾಂತತೆ ಅವಾಶ್ಯಕತೆ ಇದೆ. ಆದರೆ ಇಲಾಖೆಗಳು ಕಮರ್ಷಿಯಲ್ ನ ಹಿಂದೆ ಬಿದ್ದ ಪರಿಣಾಮ ಈ ಎಲ್ಲಾ ಕಾನೂನು, ನ್ಯಾಯಾಲಯದ ಆಶದೇಶವನ್ನ ಉಲ್ಲಂಘಿಸುತ್ತಿರುವುದು ಬಹಿರಂಗವಾಗಿದೆ.
ಎಲ್ಲಾ ಆನೆ ಬಿಡಾರದಲ್ಲಿ ಜನರ ಆಗಮನವನ್ನ ನಿಯಂತ್ರಿಸಬೇಕು. ಸುಪ್ರೀಂ ಕೋರ್ಟ್ ಮೊದಲು ಆನೆ ಸವಾರಿಗೆ ಅವಕಾಶ ನೀಡಿತ್ತು. ಅದನ್ನ ಸರ್ಕಾರವು ದುರುಪಯೋಗ ಪಡಿಸಿಕೊಂಡು ಎಲ್ಲೆಡೆ ಸವಾರಿಗೆ ಅವಕಾಶಕೊಟ್ಟಿದೆ. ಈಗ ಆ ಆದೇಶವಿಲ್ಲವೆಂದು ಹೂಗಾರ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ಪಾಲಿಕೆಯ ಆನೆಗಳ ಜಂಬು ಸವಾರಿಯಲ್ಲಿ ಯಡವಟ್ಟು, ಸಕ್ರೇಬೈಲಿನಲ್ಲಿ ಡಬ್ಬಲ್ ಬಿಲ್ಲಿಂಗ್, ಯೂಟೂಬರ್ ಗಳಿಗೆ ಸಕ್ರೆಬೈಲಿನಲ್ಲಿ ನಿಷೇಧಿತ ಜಾಗದಲ್ಲಿ ಶೂಟಿಂಗ್ ಗೆ ಅವಕಾಶ ಹೀಗೆ ಸಾಲು ಸಾಲು ಯಡವಟ್ಟು ಮಾಡಿಕೊಂಡು ಬರುತ್ತಿರುವ ಶಿವಮೊಗ್ಗ ವನ್ಯ ಜೀವಿ ವಿಭಾಗ, ಮಾಧ್ಯಮಗಳ ಪ್ರಶ್ನೆಗಳಿಗೆ ಕುಪಿತಗೊಳ್ಳುತ್ತವೆ. ಅಧಿಕಾರಿಗಳಿಗೆ ಇವೆಲ್ಲಾ ಕಾನೂನು ಬಾಹಿರ, ನ್ಯಾಯಾಂಗದ ಉಲ್ಲಂಘನೆ ಅನಿಸದೆ ಇರುವುದು ದುರಂತವೇ ಸರಿ..!