ಚೌಡೇಶ್ವರಿ ದೇವಿಗೆ ಬೆಣ್ಣೆ ಅಲಂಕಾರ



ಸುದ್ದಿಲೈವ್/ಶಿವಮೊಗ್ಗ 

ಚಾಲುಕ್ಯ ನಗರದ ಚೌಡೇಶ್ವರಿ ದೇವಸ್ಥಾನದಲ್ಲಿ ಅ.7ರಂದು ದೇವಿಗೆ ಮುಕಾಂಬಿಕಾ ಅಶೋಕ್ ಕುಟುಂಬದವರಿಂದ ಬೆಣ್ಣೆ ಅಲಂಕಾರ, ಜ್ಯೋತಿ ಶೇಖರ್ ಕುಟುಂಬದವರಿಂದ ಲಲಿತಾ ಹೋಮವನ್ನು ನೆರವೇರಿಸಲಾಯಿತು.

ಅ. 8ರಂದು ದೇವಿಗೆ ಮಹಾಕಾಳಿ ಅಲಂಕಾರ, ಚಂಡಿಕಾ ಹೋಮವನ್ನು ಹಮ್ಮಿಕೊಳ್ಳಲಾಗಿದೆ.12.30ಕ್ಕೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ವಿರುತದೆ.

ಸಂಜೆ 6.30ರಿಂದ ಸುಷ್ಮಾ ಶ್ರೀಧರ್ ತಂಡದವರಿಂದ ಭಾರತನಾಟ್ಯ ಕಾರ್ಯಕ್ರಮ, 8ಗಂಟೆಗೆ ಸರಸ್ವತಿ ಹಾಗೂ ವಿನಾಯಕ ಕುಟುಂಬದವರಿಂದ ಉಯ್ಯಲೆ ಸೇವೆ 8.30ಕ್ಕೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.

ಭಕ್ತದಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ. ಹೆಚ್ಚಿನ ಮಾಹಿತಿಗಾಗಿ 9980247081, 9448888129 ಸಂಪರ್ಕಿಸಲು ಕೋರಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close