ಸುದ್ದಿಲೈವ್/ಶಿವಮೊಗ್ಗ
ಕೆಲವರಿಗೆ ಅನ್ಯ ಕೋಮಿನ ವಿಚಾರದಲ್ಲಿ ತಲೆ ಹಾಕಲಿಲ್ಲವೆಂದರೆ ತಿನ್ನುವ ಅನ್ನ ಕರಗೊಲ್ಲ ಅನಿಸುತ್ತದೆ. ತಿರುಪತಿ ಲಡ್ಡು ವಿಚಾರದಲ್ಲಿ ಪ್ರಾಣಿಗಳ ಕೊಬ್ಬು ಬೆರಸುವ ವಿಚಾರದಲ್ಲಿ ಅನ್ಯಕೋಮಿನ ಯುವಕನೋರ್ವ ಫೇಸ್ ಬುಕ್ ನಲ್ಲಿ ಮಾಡಿರುವ ಫೋಸ್ಟ್‌ವೊಂದು ತುಂಗ ನಗರ ಪೊಲೀಸ್ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಾಗಿದೆ.
ಫೇಸ್ ಬುಕ್ ನಲ್ಲಿ ತಿರುಪತಿ ಲಡ್ಡು ಸಾಮಾನ್ಯವಲ್ಲ ಗೋಮಾತೆಯ ಕೊಬ್ಬಿನಿಂದ ತಯಾರಾಗಿದೆ. ಲಡ್ಡು ಜಿಹಾದ್ ಎಂದು ಅಹ್ಮದ್ ಖಾನ್ ಶಿವಮೊಗ್ಗ ಎಂಬ ಯುವಕನ ವಿರುದ್ಧ ಸುಮೋಟೋ ದೂರು ದಾಖಲಾಗಿದೆ.
ಇದು ಎರಡು ಕೋಮಿನ ನಡುವೆ ಕೋಮು ಸೌಹಾರ್ಧತೆಯನ್ನ ಹಾಳು ಮಾಡುವಂತೆ ಪೋಸ್ಟ್‌ಮಾಡಿ ಭಯವನ್ನ ಸೃಷ್ಠಿಸುವ ರೀತಿ ಸುದ್ದಿಯನ್ನ ಪೋಸ್ಟ್ ಮಾಡಿರುವುದಾಗಿ ದೂರು ದಾಖಲಾಗಿದೆ.