ಮಣ್ಣಿನಿಂದ ಮೂಡಿದ ಆನೆ, ಸಿಂಹ, ಹಾವುಗಳು...



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಹುಲಿ ಮತ್ತು ಸಿಂಹಧಾಮದಲ್ಲಿ ಅ.02 ರಿಂದ ನಡೆಯುತ್ತಿರುವ ವನ್ಯ ಜೀವಿ ಸಪ್ತಾಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಸಪ್ತಾಹದಲ್ಲಿ ಅದ್ಬುತವಾಗಿ ಚಟುವಟಿಕೆಗಳು ಸಾಗಿಬಂದಿದೆ. 

ವನ್ಯ ಜೀವಿಗಳ ಕುರಿತು ಜಾಗೃತಿಗಾಗಿ ಟಬ್ಲೋಗಳ ವಾಹನ ಈಗಾಗಲೇ ನಗರದಾದ್ಯಂತ ಸುತ್ತುವರೆದು ಇಂದು ಸಾಗರ ಮತ್ತು ಜೋಗಕ್ಕೆ ತಲುಪಿದೆ. ವನ್ಯ ಜೀವಿಗಳು ನಮ್ಮ ತರಹನೆ ಜೀವಿಗಳಾಗಿದ್ದು ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಕಲೆಗಳನ್ನ ಹೊತ್ತು ವಾಹನವು ಜಿಲ್ಲೆ, ತಾಲೂಕು, ಹೋಬಳಿಗಳನ್ನ ಸುತ್ತು ಹಾಕುತ್ತಿದೆ. 

ಇಂದು ನಡೆದ ಮಣ್ಣಿನ ಮೂಲಕ ವನ್ಯ ಜೀವಿಗಳ ಮಾದರಿ ನಿರ್ಮಾಣದ ಚಟುವಟಿಕೆ ಗಮನ ಸೆಳೆದಿದೆ. ಮಕ್ಕಳಲ್ಲಿನ ಕಲೆಗಳನ್ನ ಇಂದಿನ ಚಟುವಟಿಕೆ ಹೊರಹೊಮ್ಮಿಸಿದೆ. ಹಾವು, ಬಾತುಕೋಳಿ, ಆನೆ, ಸಿಂಹ ಹುಲಿಗಳನ್ನ ಮಣ್ಣಿನಲ್ಲಿ ತಯಾರಿಸುವ ಮೂಲಕ ಮಕ್ಕಳು ಇಂದು ವನ್ಯ ಜೀವಿ ಸಪ್ತಾಹದಲ್ಲಿ ಭಾಗಿಯಾಗಿದ್ದರು.‌ 

ಸುಮಾರು 35 ಜನ ಮಕ್ಕಳು ಭಾಗಿಯಾಗಿದ್ದರು. ಇವರಿಗೆ ವನ್ಯ ಜೀವಿಗಳನ್ನ ಮಣ್ಣಿನ ತಯಾರಿಸುವುದು ಹೇಗೆ ಎಂಬುದರ ಬಗ್ಗೆ ನುರಿತ ತಜ್ಞರು ಭಾಗಿಯಾಗಿದ್ದರು‌. ಈ ಚಟುವಟಿಕೆಯನ್ನ ಮುಂದಿನ ದಿನಗಳಲ್ಲಿ ಮಕ್ಕಳಿಗಾಗಿ ಪ್ರತಿ ಭಾನುವಾರ ನಡೆಸಲು ನಿರ್ಧರಿಸಲಾಗಿದೆ. 

ನಾಳೆ ಮತ್ತೊಂದಿಷ್ಟು ಚಟುವಟಿಕೆಗಳು ಸಿಂಹಧಾಮದಿಂದ ನಡೆಯಲಿದೆ. ನಾಳೆ ಮಕ್ಕಳುಗಳು ಸಫಾರಿಯಲ್ಲೇ ಎರಡು ಕಿಮಿ ನಡೆಯಲಿದ್ದು ಒನ್ ಹೆಲ್ತ್ ಅಭಿಯಾನದ ಅಡಿ ಅನೇಕ ವೈದ್ಯರು ನಗರದ ಹೊಳೆ ಬಸ್ ನಿಲ್ದಾಣದಿಂದ ಮಾಲ್ ವರೆಗೂ ವಾಕಾಥಾನ್ ನಡೆಸಲಿದ್ದಾರೆ. ಹೀಗೆ 8 ದಿನಗಳ ಕಾಲ ಚಟುವಟಿಗೆಗಳು ನಡೆಯಲಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close