ರಕ್ತದ ಪರೀಕ್ಷೆಯ ವರದಿಗಾಗಿ ಕಸಯುತ್ತಿದ್ದ ಮಗ ಮೆಗ್ಗಾನ್ ನಿಂದಲೇ ನಾಪತ್ತೆ



ಸುದ್ದಿಲೈವ್/ಶಿವಮೊಗ್ಗ

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಗೆ ಮೆಗ್ಗಾನ್ ಗೆ ಕರೆತಂದು ಚಿಕಿತ್ಸೆಗೆ ಮುಂದಾದ ತಂದೆಗೆ ಶಾಕ್ ಆಗಿದೆ. ಊಟ ಮಾಡಿಕೊಂಡು ಬರುವಷ್ಟರಲ್ಲಿ ಮಗ ನಾಪತ್ತೆಯಾಗಿದ್ದಾನೆ. 

ಕುಡಿತದ ವ್ಯಸನಿಯಾಗಿದ್ದ ಚನ್ನಗಿರಿ ತಾಲೂಕಿನ ಉಂಬ್ರಾಣಿ ಗ್ರಾಮದ ನಿವಾಸಿ ದಿಲೀಪ ಎಂಬ 35 ವರ್ಷದ ಯುವಕನಿಗೆ ಹೊಟೆನೋವಿನಿಂದ ಬಳಲುತ್ತಿದ್ದರಿಂದ ಅವರ ತಂದೆ ಮೆಗ್ಗಾನ್ ಗೆ ಕರೆತಂದು ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. 

ಚಿಕಿತ್ಸೆ ನೀಡಲು ಮುಂದಾದ ವೈದ್ಯರು ವ್ಯಕ್ತಿಗೆ ರಕ್ತಪರೀಕ್ಷೆಗೆ ಸೂಚಿಸಿದ್ದಾರೆ. ರಕ್ತಪರೀಕ್ಷೆಗೆ ಕೊಟ್ಟು ವರದಿಗಾಗಿ ಕಾಯುತ್ತಿದ್ದ ತಂದೆ ಮಧ್ಯಾಹ್ನದ ಊಟ ಮುಗಿಸಿಕೊಂಡು ಬರುವುದಾಗಿ ಮಗನನ್ನ ಕೂರಿಸಿ ಹೋಗಿದ್ದಾರೆ. ಊಟ ಮುಗಿಸಿ 45 ನಿಮಿಷಕ್ಕೆ ವಾಪಾಸ್ ಆದಾಗ ಮಗ ನಾಪತ್ತೆಯಾಗಿದ್ದಾನೆ. 

ದಿಲೀಪ 5 ಅಡಿ 7 ಇಂಚು ಎತ್ತರವಿದ್ದು, ಸಾದಾರಣ ಮೈಕಟ್ಟು, ಕಪ್ಪು ಬಿಳಿ ಮಿಶ್ರಿತ ಕುಚಲುಗಡ್ಡ ಬಿಟ್ಟಿದ್ದು ನೀಲಿ ಬಣ್ಣ ತುಂಬು ತೋಳಿನ ಷರ್ಟು, ಹಸಿರು ಬಣ್ಣದ ಜೀನ್ಸ್, ಪ್ಯಾಂಟ್ ಹಾಕಿಕೊಙಡಿರುವ ದಿಲೀಪನಿಗರ ಎಡಕಾಲಿನ ಹೆಬ್ಬಟ್ಟು ಅರ್ಧ ತುಂಟಾಗಿದೆ ಎಂದು ತಂದೆ ಓಂಕಾರಪ್ಪ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close