ಸುದ್ದಿಲೈವ್/ಶಿವಮೊಗ್ಗ
ಸೊರಬದಲ್ಲಿ ಬಂಗಾರಪ್ಪನವರ ಹುಟ್ಟು ಹಬ್ಬ ಆಚರಣಗೆ ಬಂದಿದ್ದೆನೆ.ನಮ್ಮ ಇಲಾಖೆಯಲ್ಲಿ ಕೆಲವು ಕಟ್ಟಡ ಉದ್ಘಾಟನೆಗೆ ಭಾಗವಹಿಸಲು ಬಂದಿದ್ದೆನೆ ಎಂದು ಗೃಹ ಸಚಿವರು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಮಾಧ್ಯಮದ ಜೊತೆ ಮಾತನಾಡಿ, ಉಪ ಚುನಾವಣೆಯಲ್ಲಿ ನಮ್ಮ ಹೈಕಮಾಂಡ್ ಅಭ್ಯರ್ಥಿಗಳನ್ನು ಹಾಕಿದ್ದಾರೆ. ಮೂರು ಕ್ಷೇತ್ರದಲ್ಲಿ ಗೆಲ್ಲುತ್ತೆವೆ. ಬಿಜೆಪಿ- ಜೆಡಿಎಸ್ ಎನ್ ಡಿ ಎ ಅಂತ ಒಂದಾಗಿದ್ದಾರು ಸಹ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಯ ಮೂಲಕ ಜನಪರ ಕೆಲಸ ಮಾಡುತ್ತಿದ್ದೆವೆ ಎಂದರು.
ಖಾದ್ರಿ ರವರು ಹಿಂದೆ ಚುನಾವಣೆಗೆ ಸ್ಪರ್ಧಿ ಮಾಡಿದ್ದರು. ಈಗ ಅವರ ಮನವೊಲಿಸುವ ಕೆಲಸ ನಡೆಯಿತ್ತಿದೆ. ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲವಿಲ್ಲ. ವಿಜಯಪುರ ವಕ್ಫ್ ರೈತರಿಗೆ ನೀಡುವ ನೋಟಿಸ್ ಕುರಿತು ರಾಜ್ಯ ಸರ್ಕಾರ ಪರಿಶೀಲನೆ ನಡೆಸಲಿದೆ.
ಆರ್ಥಿಕ, ಸಾಮಾಜಿಕ ಜಾತಿ ಗಣತಿಯನ್ನು ಮುಂದಿನ ಸಂಪುಟದಲ್ಲಿ ವರದಿ ಮಂಡನೆ ಮಾಡಲಿದ್ದೆವೆ. ಸಂಪುಟದಲ್ಲಿ ವರದಿ ಮಂಡನೆಯಾದ ನಂತರ ಮುಂದೆ ಚರ್ಚೆ ನಡೆಯಲಿದೆ ಎಂದರು.
ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣ ಇನ್ನೂ ಅಂತಿಮವಾಗಿಲ್ಲ. ವರದಿಯ ಆಧಾರದ ಮೇಲೆ ತೀರ್ಮಾನವಾಗಲಿದೆ. ಈ ಕುರಿತು ಡಿಜಿಸಿಎ ರವರು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ. ನಾನು ತುಮಕೂರಿನಲ್ಲಿ ಮಾಡಬೇಕೆಂದು ಹೇಳುತ್ತೆನೆ.ಆದರೆ ತಜ್ಞರ ವರದಿಯೇ ಅಂತಿಮವಾಗಲಿದೆ.
ಶರಾವತಿ ನದಿ ನೀರು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಕುರಿತು ಹಿಂದೆ ನಾನು ಡಿಸಿಎಂ ಆದಾಗ ಚರ್ಚೆ ನಡೆಸಿದ್ದೆ. ಆದರೆ ,ಅದರ ಕುರಿತು ಇನ್ನೂ ಅಂತಿಮವಾದ ತೀರ್ಮಾನವಾಗಿಲ್ಲ . ಅಂತಹ ಪ್ರಸ್ತಾಪ ಇನ್ನೂ ನಮ್ಮ ಮುಂದೆ ಇಲ್ಲ ಎಂದರು.
ಮೂರು ಕ್ಷೇತ್ರದ ಉಪಚುನಾವಣೆಯು ಹೈವೋಲ್ಡೇಜ್ ಕ್ಷೇತ್ರವಾಗಿದ್ದು, ಚುನಾವಣಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಬಹುಮತದಿಂದ ಗೆಲ್ಲುವ ನಿರೀಕ್ಷೆ ಇದೆ ಎಂದರು. ನಂತರ ಡಿಎಆರ್ ಮೈದಾನದಲ್ಲಿರುವ ಪೊಲೀಸ್ ಭವನದ ಉದ್ಘಾಟನೆಯನ್ನ ಗೃಹಸಚಿವರು ನೆರವೇರಿಸಿದರು.