ಸುದ್ದಿಲೈವ್/ಶಿವಮೊಗ್ಗ
ದಸರಾ ಹಬ್ಬದ ನಿಮಿತ್ತ ಆಗಮಿಸಿದ್ದ ಸಕ್ರೆಬೈಲಿನ ಗಜಪಡೆ ಮತ್ತು ಕಲಾ ದಸರದ ಅಂಗವಾಗಿ ನಡೆದ ಕಲಾತಂಡದ ಮೆರವಣಿಗೆ ಮುಖಾಮುಖಿಯಾದಾಗ ಕಲಾತಂಡ ಸೈಲೆಂಟಾಗಿರುವ ಪ್ರಸಂಗ ನಡೆದಿದೆ.
ವೀರಗಾಸೆ, ಡೊಳ್ಳು ಢಕ್ಕೆ ಮೊದಲಾದ ವಾದ್ಯಗಳನ್ನ ಬಾರಿಸಿಕೊಂಡು ಬರುತ್ತಿದ್ದ ಕಲಾತಂಡಕ್ಕೆ ಇದೇ ಸಂದರ್ಭದಲ್ಲಿ ಎದುರಾದ ಗಜಪಡೆಗೆ ತೊಂದರೆ ಉಂಟು ಮಾಡದಂತೆ ಕಲತಂಡ ಮುಂಜಾಗೃತ ಕ್ರಮವಾಗಿ ವಾದ್ಯಗಳನ್ನ ಬಾರಿಸುವುದನ್ನ ನಿಲ್ಲಿಸಿ ಗಜಪಡೆ ಸಾಗಿದ ನಂತರ ಕಲಾತಂಡ ವಾದ್ಯಗಳ ಮೂಲಕ ಮುಂದೆ ಸಾಗಿದೆ.
ಈ ಘಟನೆಯಲ್ಲಿ ಕಲಾತಂಡದ ಸಮಯೋಚಿತ ನಿಲುವು ತೆಗೆದುಕೊಂಡು ಮುಂದೆಸಾಗಿದೆ. ಆದರೆ ಆನೆಗೆ ತಾಲೀಮು ಕೊಡ್ತಾ ಇರುವುದೇ ನಗರದ ಜಿಗಿಜಿಗಿತನ, ಶಬ್ದಗಳ ಮಾಲಿನ್ಯವನ್ನ ಹೊಂದಿಕೊಳ್ಳುವುದಕ್ಕಾಗಿ ತಾಲೀಮು ನಡೆಸಲಾಗುತ್ತಿದೆ. ಆದರೆ ಇಲ್ಲಿ ಗಜಪಡೆ ಮತ್ತು ಕಲಾತಂಡ ಮುಖಾಮುಖಿ ಯಾದಾಗ ತಕಲಾತಂಡ ಸೈಲೆಂಟಾಗಿವೆ. ಈ ವಾಕ್ಯಕ್ಕೆ ಓದುಗರಲ್ಲಿ ಕಲಾತಂಡ ವೈಲೆಂಟಾಗಿ ಮುಂದೆ ಸಾಗಬೇಕಿತ್ತಾ? ಎಂಬ ಪ್ರಶ್ನೆ ಮೂಡಿಸುತ್ತದೆ. ಆದರೆ ಈ ಸನ್ನಿವೇಶ ಮಾತ್ರ ಮೆರವಣಿಗೆ ಮತ್ತು ಗಜಪಡೆಯ ತಾಲೀಮು ನೋಡುಗರಿಗೆ ಕುತೂಹಲ ಮೂಡಿಸಿದ್ದು ನಿಜ. ಕಲಾತಂಡ ಗಜಪಡೆಯನ್ನ ಸಾಗುವುದು ಹೇಗೆ ಎಂಬುದನ್ನ ಕುತೂಹಲ ಮೂಡಿಸಿದ್ದು ನಿಜ. ಗಜಗಾಂಭೀರ್ತೆಯನ್ನ ಗಜಪಡೆ ಎತ್ತಿ ಹಿಡಿದಿತ್ತು.
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ಮೂರು ಆನೆಗಳ ಪಡೆ ಗಾಂಧಿ ಬಜಾರ್ ಮಾರ್ಗವಾಗಿ ಬಂದಿದೆ, ಅದೇ ಸಂದರ್ಭದಲ್ಲಿ ಶಿವಪ್ಪ ನಾಯಕ ವೃತ್ತದಿಂದ ವಿವಿದ ಕಲಾತಂಡಗಳಿಂದ ಹೊರಟಿದ್ದ ಕಲಾಜಾತ ದಸರಾದ ಮೆರವಣಿಗೆ ಇದೇ ಬಜಾರ್ ರಸ್ತೆಯಲ್ಲಿ ಸಾಗಿದೆ. ಬಜಾರಿನ ಮದ್ಯಭಾಗಕ್ಕೆ ಬಂದಾಗ ದಸರಾ ತಾಲಿಮು ನಡೆಸುತ್ತಿದ್ದ ಗಜಪಡೆ ಕಲಾತಂಡ್ಕೆ ಎದುರಾಗಿದೆ.
ದೈತ್ಯಾಕಾರದ ಗಜಪಡೆಯನ್ನು ನೋಡಿದ ಕಲಾತಂಡಗಳು ಒಮ್ಮೆಲೆ ಪಕ್ಕಕ್ಕೆ ಸರಿದವು. ಇದೇ ಅಲ್ವಾ ಗಜಗಾಂಭಿರ್ಯ ಅಂದ್ರೆ. ಇಂದು ಗಾಂದಿ ಬಜಾರ್ ನಲ್ಲಿ ಮುಖಾಮುಖಿಯಾದ ಮಹಿಳಾ ವೀರಾಗಾಸಿ ಮತ್ತು ದಸರಾಗೆ ಆಗಮಿಸಿದ್ದ ಗಜಪಡೆ ಗಜಗಾಂಭೀರ್ಯದಲ್ಲಿ ಸಾಗಿದರೆ ಕಲಾ ತಂಡ ಆನೆಗಳಿಗೆ ತೊಂದರೆಯಾಗದಂತೆ ಸೈಲಂಟಾಗಿ ಮುಂದೆ ಸಾಗಿದೆ.