ಸ್ವಯಂಸೇವಕರಿಂದ ಪಥ ಸಂಚಲನ


ಸುದ್ದಿಲೈವ್/ಸೊರಬ

ವಿಜಯದಶಮಿ ಅಂಗವಾಗಿ ಹಾಗೂ ಆರ್‌ಎಸ್‌ಎಸ್ ಸ್ಥಾಪನೆಯಾಗಿ ಶತಮಾನ ಪೂರೈಸಿದ ಹಿನ್ನೆಲೆ ಪಟ್ಟಣದಲ್ಲಿ ಶನಿವಾರ ಸಂಘದ ಸ್ವಯಂಸೇವಕರಿಂದ ಪಥ ಸಂಚಲನ ನಡೆಸಲಾಯಿತು. 

ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಕರು ಆಕರ್ಷಕ ಹಾಗೂ ಶಿಸ್ತು ಬದ್ಧವಾಗಿ ಪಥಸಂಚಲನ ನಡೆಸುವ ಮೂಲಕ ಸಂಚಲನ ಮೂಡಿಸಿದರು. ಜನರಲ್ಲಿ ರಾಷ್ಟçಪ್ರೇಮ ಮೂಡಿಸುವ ಉದ್ದೇಶದಿಂದ ನಡೆಸಲಾದ ಪಥಸಂಚಲನದಲ್ಲಿ ಸುಮಾರು ೨೦೦ಕ್ಕೂ ಅಧಿಕ ಸ್ವಯಂಸೇವಕರು ಭಾಗಿಯಾಗಿದ್ದರು. ಚಿಕ್ಕ ಮಕ್ಕಳು ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಚಾಮರಾಜಪೇಟೆಯ ಕಾನುಕೇರಿ ಮಠದಿಂದ ಆರಂಭವಾದ ಪಥ ಸಂಚಲನ ಶ್ರೀರಂಗನಾಥ ದೇವಸ್ಥಾನ, ಚಿಕ್ಕಪೇಟೆ, ನಾಮದೇವ ಗಲ್ಲಿ, ಮುಖ್ಯರಸ್ತೆ ಮಾರ್ಗವಾಗಿ ಖಾಸಗಿ ಬಸ್ ನಿಲ್ದಾಣ ವೃತ್ತ ಪುನಃ ಚಾಮರಾಜಪೇಟೆ ಮಾರ್ಗವಾಗಿ ಕಾನುಕೇರಿ ಮಠದ ವರೆಗೆ ನಡೆಯಿತು. ಪಥಸಂಚನ ಸಾಗುವ ಮಾರ್ಗದಲ್ಲಿ ಸಾರ್ವಜನಿಕರು ಭಾರತಮಾತೆ ಮತ್ತು ಭಗವಧ್ವಜಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. 

ಕಾರ್ಯಕ್ರಮದಲ್ಲಿ ಶಿವಮೊಗ್ಗ ವಿಭಾಗ ಪ್ರಚಾರಕರಾದ ನವೀನ್ ಸುಬ್ರಹ್ಮಣ್ಯ  ನೀಡಿ ಮಾತನಾಡಿ, ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ರ್ಮಾಣ ಸಾಧ್ಯ ಎನ್ನುವ ಧ್ಯೇಯದೊಂದಿಗೆ ಆರ್‌ಎಸ್‌ಎಸ್ ಕಳೆದ ನೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ೧೯೨೫ರಲ್ಲಿ ವಿಜಯದಶಮಿಯ ದಿನದಂದು ಡಾ. ಹೆಗಡೆವಾರ್ ಅವರು ಹುಟ್ಟುಹಾಕಿದ ಸಂಘ ಇಂದಿಗೂ ನಿರಂತರವಾಗಿ ರಾಷ್ಟ್ರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಗಾಂಧಿ ಹತ್ಯೆಯ ತರುವಾಯ ಕೆಲ ರಾಷ್ಟ್ರನಾಯಕರು ಸಂಘದ ಬಗ್ಗೆ ಅಪಸ್ವರ ಎತ್ತಿದಾಗಲು ನನಗೆ ದೇಶಭಿಮಾನದ ಮುಖ್ಯವಾಗಿದೆ ಎಂದು ನುಡಿದ್ದರು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. 

ಪ್ರಸ್ತುತ ಭಾರತ ಜಗತ್ತಿನ ಶಕ್ತಿಶಾಲಿ ರಾಷ್ಟ್ರವನ್ನಾಗಿ ಬದಲಾಗುತ್ತಿದೆ. ಪ್ರಾಚೀನ ಕಾಲದಿಂದಲೂ ದೇಶದ ಉತ್ಪನ್ನಗಳಿಗೆ ಜಾಗತಿಕವಾಗಿ ಬೇಡಿಕೆ ಇತ್ತು. ಇಲ್ಲಿನ ಕೌಶಲ್ಯಗಳನ್ನು ಹತ್ತಿಕ್ಕುವ ಹುನ್ನಾರವನ್ನು ಬ್ರಿಟೀಷರು ಮಾಡಿದ್ದರು. ಆದರೆ, ಆಯುರ್ವೇದ, ಆಧ್ಯಾತ್ಮ ಸೇರಿದಂತೆ ಹಲವು ವಿಷಯಗಳನ್ನು ಮಂಡಿಸುವ ಮೂಲಕ ದೇಶ ಜಾಗತಿಕವಾಗಿ ನೇತೃತ್ವ ವಹಿಸುತ್ತಿದೆ. ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿರುವುದು ದೇಶದ ಅಸ್ಮಿತೆಯ ಭಾಗವಾಗಿ ಮಾರ್ಪಟ್ಟಿದೆ. ವಿಶ್ವವಿದ್ಯಾಲಯಗಳ ಕ್ಯಾಪಸ್‌ನಲ್ಲಿ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಮೂಡಿಸಲು ಸಂಘದ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯು ಶ್ರಮಿಸುತ್ತಿದೆ ಎಂದ ಅವರು, ಯಾವ ಧರ್ಮ ತನ್ನದೇ ಸತ್ಯ ಎಂದು ಬಿಂಬಿಸಲು ಯತ್ನಿಸುತ್ತದೆಯೋ ಅಂತಹ ಧರ್ಮಗಳಿಂದ ರಾಷ್ಟ್ರದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಸರ್ವರನ್ನು ಒಗ್ಗೂಡಿಸಿಕೊಂಡು ಒಳಿತನ್ನು ಬಯಸುವುದು ಹಿಂದೂ ಧರ್ಮ ಮಾತ್ರವಾಗಿದೆ. ಸಮಾಜದಲ್ಲಿನ ಅಸಮಾನತೆಯನ್ನು ತೊಲಗಿಸಿ, ಎಲ್ಲಾ ಜಾತಿಯವರನ್ನು ಒಗ್ಗೂಡಿಸಿಕೊಂಡು ರಾಷ್ಟ್ರದ ಶಕ್ತಿಯನ್ನಾಗಿ ಮಾಡುವ ಕೆಲಸ ಆರ್‌ಎಸ್‌ಎಸ್ ಮಾಡುತ್ತಿದೆ ಎಂದರು. 

ಪಥಸಂಚಲನದಲ್ಲಿ ಆರ್‌ಎಸ್‌ಎಸ್ ತಾಲೂಕು ಸಂಘ ಚಾಲಕ ನಾಗರಾಜ ಗುತ್ತಿ, ತಾಲೂಕು ಕಾರ್ಯವಾಹ ಸೋಮಣ್ಣ ಕಾರೆಕೊಪ್ಪ, ಜಿಲ್ಲಾ ಕಾರ್ಯವಾಹ ಶ್ರೀಧರ ನಿಸರಾಣ , ಪ್ರಮುಖರಾದ ಅಚ್ಯುತ್‌ರಾವ್, ಸುಧಾಕರ್ ಭಾವೆ, ಮಹೇಶ್ ಗೋಖಲೆ, ರವಿ ಶೇಟ್, ಎಂ.ಎಸ್. ಕಾಳಿಂಗರಾಜ್, ಎಂ.ಕೆ. ಯೋಗೇಶ್, ರಂಗನಾಥ ಮೊಗವೀರ್, ಡಾ.ಎಚ್.ಇ. ಜ್ಞಾನೇಶ್, ಪ್ರಕಾಶ್ ತಲಕಾಲಕೊಪ್ಪ, ವೀರೇಶ್ ಮೇಸ್ತಿç, ಜಾನಕಪ್ಪ ಒಡೆಯರ್, ಲೋಕೇಶ್ ಕಕ್ಕರಸಿ, ಈಶ್ವರಪ್ಪ ಚನ್ನಪಟ್ಟಣ, ವಿನಯ್ ಶೇರ್ವೆ, ಆಶೀಕ್ ನಾಗಪ್ಪ, ವಿಜೇಂದ್ರಗೌಡ ಜಡೆ, ಮಹೇಶ್ ಖಾರ್ವಿ, ನಿರಂಜನ, ಚಂದನ್, ಮೋಹನ್, ವಿಘ್ನೇಶ್ ತಲಕಾಲಕೊಪ್ಪ, ದರ್ಶನ್ ಜಿಂಗಾಡೆ, ಎಂ.ಪಿ. ಶರತ್, ಗಣೇಶ್ ಓಂ ಪಿಕಲ್, ಸಾತ್ವಿಕ್ ಸೇರಿದಂತೆ ಮತ್ತಿತರರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close