ತಿಪ್ಪೇಸಾರಿದ ಸಚಿವ ತಿಮ್ಮಾಪೂರ


ಸುದ್ದಿಲೈವ್/ಶಿವಮೊಗ್ಗ

ಅಧಿಕಾರಿಗಳ ಚೆನ್ನಾಗಿ ಕೆಲಸ ಮಾಡುತ್ತಿರುವುದರಿಂದ ಕಳ್ಳಭಟ್ಟಿ ಸರಾಯಿ ಕಡಿಮೆ ಆಗಿದೆ ಎಂದು ಅಬಕಾರಿ ಸಚಿವ ಆರ್.ಬಿ ತಿಮ್ಮಾಪೂರ ಅಭಿಪ್ರಾಯಪಟ್ಟಿದ್ದಾರೆ. 

ಖಾಸಗಿ ಕಾರ್ಯಕ್ರಮಕ್ಕೆ ತೀರ್ಥಹಳ್ಳಿಗೆ ಬಂದ ಸಚಿವರು ಕಾರ್ಯನಿಮಿತ್ತ ಶಿವಮೊಗ್ಗದ ಅಬಕಾರಿ ಇಲಾಖೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿ, ಸಿಎಲ್ ಟು ಇದ್ದಾರೆ.  ಕೆಲವರು ಎಂಎಸ್ ಐ ಎಲ್ ನಲ್ಲಿ ಮದ್ಯ ಖರೀದಿ ಮಾಡಿ ಹೊರಗಡೆ  ತೆಗೆದುಕೊಂಡು ಹೋಗಿ ಅವರು ಕುಡಿಯುತ್ತಾರೆ. ಪೊಲೀಸರು ಇಲಾಖೆ ಕೂಡ ಗಮನಿಸಬೇಕಿದೆ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ. 

ದಿನಸಿ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡಿದವರ  ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿರುವ ಸಚಿವರು ಸಾರ್ವಜನಿಕ ಸ್ಥಳಗಳಲ್ಲಿ ಮಧ್ಯಪಾನ ಮಾಡುವಂತಿಲ್ಲ. ಇದನ್ನ ತಡೆಗಟ್ಟಲು ಇಲಾಖೆ ಸಮರ್ಥವಿದೆ ಎಂದು ತಿಳಿಸಿದರು.  

ಇಲಾಖೆಯಲ್ಲಿ ಬಡ್ತಿ ವಿಚಾರದಲ್ಲಿ ಕೆಲವರ ಅಸಮಾಧಾನವಿರುವ ಬಗ್ಗೆ ಮಾತನಾಡಿದ ಅವರು, ಇಲಾಖೆಯ ಏಳುನೂರು ಮಂದಿಗೆ ಬಡ್ತಿ ನೀಡಿದ್ದೇನೆ. ಹಂತ ಹಂತವಾಗಿ ಎಲ್ಲರಿಗೂ ಬಡ್ತಿ ನೀಡಲಾಗುವುದು. ಕಾನೂನು ಚೌಕಟ್ಟಿನಲ್ಲಿ ಬಡ್ತಿ ಹಂಚಲಾಗುವುದು ಎಂದರು. 

ಎಂಆರ್ ಪಿ ಗಿಂತ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ಮಾಡುವ ಅಂಗಡಿಯ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ ತಿಪ್ಪೆ ಸಾರಿದರು. ಪ್ರತಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಎಂ ಆರ್ ಪಿ ಗಿಂತ ಹೆಚ್ಚಿನ ಹಣ ಪಡೆಯುತ್ತಿದ್ದಾರೆ ಎಂಬ ಕೂಗು ಅನಾದಿ ಕಾಲದಿಂದಲೂ ಕೇಳಿ ಬರುತ್ತಿದೆ. ಈ ಬಗ್ಗೆ ಇಲಾಖೆ ಕ್ರಮ ಕೈಗೊಂಡಿರುವ ಬಗ್ಗೆ ಉದಾಹರಣೆಯೂ ಇಲ್ಲ. ಈ ನಡುವೆಯೂ ಕ್ರಮಕೈಗಳ್ಳುವ ಬಗ್ಗೆ ಮಾತನಾಡಿ ಸಚಿವರು ಅಚ್ಚರಿ ಮೂಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close