Girl in a jacket

ಅಸಮರ್ಪಕ ಕುಡಿಯುವ ನೀರು ಸರಬರಾಜು-ನಾಳೆ ಪ್ರತಿಭಟನೆ


ಸುದ್ದಿಲೈವ್/ಶಿವಮೊಗ್ಗ

ಎಲ್ಲಡೆ ಧಾರಕಾರ ಮಳೆಯಾಗಿದ್ದರೂ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಕುಡಿಯುವ ನೀರಿನ ಸಮಸ್ಯೆಗೆ ಹೊಳೆಹೊನ್ನೂರು ತತ್ತರಿಸಿದ್ದು ಗ್ರಾಮಸ್ಥರಿಗೆ ಹಬ್ಬದ ದಿನದಂದೆ ನೀರು ಸರಬರಾಜುವಾಗದ ಕಾರಣ ಅಧಿಕಾರಿಗಳ ವಿರುದ್ಧ ಶಾಪ ಹಾಕುತ್ತಿದ್ದಾರೆ. 

ಹೊಳೆಹೊನ್ನೂರಿನಲ್ಲಿ ಕುಡಿಯುವ ನೀರಿನ ಘಟಕವಿದ್ದು ಅದರಲ್ಲಿ ಹಾವು ಚೇಳು ಹುಳ ಉಪ್ಪಟೆಗಳು ಕಾಣಿಸಿಕೊಂಡಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳ ನಿರ್ಲಕ್ಷದಿಂದ ಸಮಸ್ಯೆ ಉಲ್ಬಣವಾಗುತ್ತಿದೆ ಎಂದು ದೂರಲಾಗಿದೆ. ನೀರು ಸರಬರಾಜುವಾಗದ ಹಿನ್ನಲೆಯಲ್ಲಿ ನಾಳೆ ಪಟ್ಟಣ ಪಂಚಾಯಿತಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಲಿದ್ದಾರೆ. 

ಹಳೆ ಬ್ರಿಡ್ಜ್ ನ ಬಲಭಾಗದಲ್ಲಿ ಇರುವ ಶುದ್ಧ ನೀರಿನ ಘಟಕದಿಂದ ಹೊಳೆಹೊನ್ನೂರಿನಲ್ಲಿ ಎರಡು ದಿನಕ್ಕೊಮ್ಮೆ ನೀರು ಸರಬರಾಜುವಾಗುತ್ತಿದೆ. ಮೂರು ವರ್ಷದ ಕೆಳೆಗೆ ಈ ಶುದ್ದನೀರಿನ ಘಟಕವನ್ನ ಢಣಕರಾಯನಪುರದ ನದಿ ತಡದಲ್ಲಿ ನಿರ್ಮಿಸಲು ತಡೆಗೋಡೆ ನಿರ್ಮಿಸಿ ಕೈಬಿಡಲಾಗಿತ್ತು. 

ಆದರೆ ಈ ಶುದ್ಧ ನೀರಿನ ಘಟಕ ಎಲ್ಲೂ ಶಿಫ್ಟ್ ಆಗದೆ ಅಲ್ಲೇ ಉಳಿದುಕೊಂಡಿದ್ದು ಕುಡಿಯುವ ನೀರಿನ ಘಟಕದಲ್ಲಿ ದಟ್ಟವಾದ ಕಾಡು ಬೆಳೆದುಕೊಂಡಿದೆ. ಘಟಕದ ನೀರಿನ ಬಾವಿಯಲ್ಲಿ ಹಾವು ಮತ್ತು ಇತರೆ ಕೀಟಗಳು ವಾಸ ಮಾಡಲು ಆರಂಭಿಸಿವೆ. ಇಲ್ಲಿಂದ ಟ್ಯಾಂಕಿಗೆ ನೀರು ಏರಿಸಿ ಅಲ್ಲಿಂದ ಪಟ್ಟಣಕ್ಕೆ ನೀರು ಸರಬರಾಜಾಗುತ್ತದೆ. 


ಆದರೆ ಕಳೆದ ನಾಲ್ಕು ದಿನಗಳಿಂದ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ದಸರಾ ಹಬ್ಬದಂದು ನೀರಿಲ್ಲದೆ ಜನ‌ ಕಾಲಕಳೆಯವಂತೆ ಮಾಡಿದೆ. ಅಧಿಕಾರಿಗಳು ಪರಸ್ಪರ ಕಚ್ಚಾಟದಲ್ಲಿ ತೊಡಗಿಕೊಂಡ ಕಾರಣ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು. ನಾಳೆ ಪಟ್ಟಣ ಪಂಚಾಯಿತಿಯ ಎದುರು ಪ್ರತಿಭಟಿಸಲಾಗುತ್ತಿದೆ ಎಂದು ಎಚ್ಚರಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live