ಸುದ್ದಿಲೈವ್/ಮುಂಬೈ
ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಉದ್ಯಮಿ ರತನ್ ಟಾಟಾ (86) ನಿಧನರಾಗಿದ್ದಾರೆ. ವಯೋಸಜಹ ಕಾಯಿಲೆಯಿಂದ ಬಳಲುತ್ತಿದ್ದ ರತನ್ ಟಾಟಾ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಸೋಮವಾರ ದಾಖಲಾಗಿದ್ದರು.
1991 ರಲ್ಲಿ ಟಾಟಾ ಸನ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷರಾಗಿದ್ದರು. ತಮ್ಮ ಸಂಸ್ಥೆಯನ್ನ 100 ಬಿಲಿಯನ್ ಡಾಲರ್ ಮೌಲ್ಯದ ಜಾಗತಿಕ ದರ್ಜೆಯ ಸಾಮ್ರಾಜ್ಯವನ್ನಾಗಿ ವಿಸ್ತರಿಸಿದ್ದರು.
2012 ಡಿಸೆಂಬರ್ ನಲ್ಲಿ ಟಾಟಾ ಸನ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷತೆಯಿಂದ ನಿವೃತ್ತರಾಗಿದ್ದರು. ನಿವೃತ್ತರಾದರೂ ಗೌರವಾಧ್ಯಕ್ಷ ಸ್ಥಾನದಲ್ಲಿ ಮುಂದು ವರೆದಿದ್ದರು. 1937 ರಲ್ಲಿ ಮುಂಬೈನಲ್ಲಿ ರತನ್ ಟಾಟಾ ಜನಿಸಿದ್ದರು.ತಮ್ಮ 10 ನೇ ವಯಸ್ಸಿನಲ್ಲೇ ಪೋಷಕರನ್ನ ಕಳೆದುಕೊಂಡರು.
ನಂತರ ಅಜ್ಜಿ ನವಾಜ್ ಭಾಯಿ ಟಾಟಾ ಅವರ ಪಲನೆಯಲ್ಲಿ ಬೆಳದ ರತನ್ ಟಾಟಾ ಕಾರ್ನಲ್ ವಿವಿಯಿಂದ ವಾಸ್ತುಶಿಲ್ಪ ಪದವಿ ಪಡೆದರು, ಹಾರ್ವರ್ಡ್ ವಿವಿಯಲ್ಲಿ ಮ್ಯಾನೇಜ್ ಮೆಂಟ್ ಪೂರ್ಣಗೊಳಿಸಿದರು. ತಮ್ಮ ತಾತಾ ಜಮ್ಶೆಡ್ ಟಾಟಾ 100 ವರ್ಷಗಳ ಹಿಂದೆ ಆರಂಭಿಸಿದ ಸಂಸ್ಥೆಯನ್ನ ಸಮರ್ಪಕವಾಗಿ ನಿಭಾಯಿಸಿ 3800 ಕೋಟಿ ಸಮರ್ಪಕವಾಗಿ ನಿಭಾಯಿಸಿದ್ದರು. ದೇಶದ ಪರವಾದ ಚಿಂತನೆಯನ್ನ ಬೆಳೆಸಿದರು.