ಸುದ್ದಿಲೈವ್/ಶಿವಮೊಗ್ಗ
2019 ರಲ್ಲಿ ಪರೀಕ್ಷೆಯ ಹಿನ್ನಲೆಯಲ್ಲಿ ಶಿವಮೊಗ್ಗದ ಬಾಪೂಜಿ ನಗರದಲ್ಲಿ ಟ್ಯೂಷನ್ ಮುಗಿಸಿಕೊಂಡು ವಾಪಾಸ್ ಭದ್ರಾವತಿಗೆ ಬೈಕ್ ನಲ್ಲಿ ಹೋಗುವಾಗ ಮೂವರು ಅಪರಿಚಿತರಿಂದ ನಡೆದ ರಾಬರಿ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆಯನ್ನ ಪ್ರಕಟಿಸಿದೆ.
2019 ರಲ್ಲಿ ಮೊಹಮ್ಮದ್ ಖಾಲೀದ್ (21) ವಾಪಾಸ್ ಭದ್ರಾವತಿಗೆ ಶಿವಮೊಗ್ಗದಿಮದ ವಾಪಾಸ್ ಹೋಗುವಾಗ ರಾಷ್ಟ್ರೀಯ ಹೆದ್ದಾರಿ 206 ರಲ್ಲಿರುವ ಪಾಪಣ್ಣನ ಕ್ಯಾಂಟೀನ್ ಮುಂದೆ ದ್ವಿ ಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಮೂವರು ಅಪರಿಚಿತ ವ್ಯಕ್ತಿಗಳು ಬಂದು ಅವರನ್ನು ತಡೆದು ಅಡ್ಡಗಟ್ಟಿ ನಿಲ್ಲಿಸಿ ನಗದು ಹಣ, ಮೊಬೈಲ್ ಫೋನ್ ಮತ್ತು ವಾಚ್ ಅನ್ನು ಕಿತ್ತು ಕೊಂಡು ಹೋಗಿದ್ದರು. ಪ್ರಕರಣವು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಭದ್ರಾವತಿ ನಗರ ವೃತ್ತ ಸಿಪಿಐ ರಾಘವೇಂದ್ರ ಕಾಂಡಿಕೆ, ಪ್ರಕರಣದ ತನಿಖೆ ಪೂರೈಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ, ಸರ್ಕಾರಿ ಅಭಿಯೋಜಕರಾಗಿ ವಾದ ಮಂಡಿಸಿದ್ದರು,
ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ* (ಪೀಠಾಸೀನ ಭದ್ರಾವತಿ)ಯಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ ಆರೋಪಿತರಾದ 1) ಸಯ್ಯದ್ ಇಬ್ರಾಹಿಂ, 23 ವರ್ಷ, ಶಿವಮೊಗ್ಗ ಟೌನ್, 2) ಮೊಹಮ್ಮದ್ ಮುಸ್ತಫಾ, 22 ವರ್ಷ, ಶಿವಮೊಗ್ಗ ಟೌನ್, 3) ಮೊಹಮ್ಮದ್ ಅಲ್ಲಾಭಕ್ಷಿ, 22 ವರ್ಷ, ಶಿವಮೊಗ್ಗ ಟೌನ್ ಇವರುಗಳಿಗೆ 05 ವರ್ಷ 01 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.