ಭದ್ರಾವತಿಯಲ್ಲಿ ಸಾಲು ಸಾಲು ಓಸಿ ಆಟ-ದೂರು ದಾಖಲು


ಸುದ್ದಿಲೈವ್/ಭದ್ರಾವತಿ

ಭದ್ರಾವತಿಯಲ್ಲಿ ಕಳೆದ ಐದು ದಿನಗಳ ಅವಧಿಯಲ್ಲಿ ವಿವಿಧ ಪೊಲೀಸ್ ಠಾಣೆಯಲ್ಲಿ ಸಾಲು ಸಾಲು ಓಸಿ ವಿರುದ್ಧ ಎಫ್ಐಆರ್‌ ದಾಖಲಾಗಿದೆ. ಹೊಳೆಹೊನ್ನೂರು ಸೇರಿದರೆ ಏಳು ಎಫ್ಐಆರ್ ದಾಖಲಾಗಿದೆ. 

ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದೇ ದಿನ ಎರಡು ಓಸಿ ಆಟದ ಬಗ್ಗೆ ಎಫ್ಐಆರ್ ದಾಖಲಾಗಿದೆ. ಸಂತೆ ಮೈದಾನದಲ್ಲಿ ದಾಳಿ ನಡೆಸಿದ ಖಾಕಿ ಪಡೆ ಓಸಿ ಆಡಿಸುತ್ತಿದ್ದ ವಿಶ್ವನಾಥನ ವಿರುದ್ದ ಎಫ್ಐಆರ್ ದಾಖಲಿಸಿದೆ. 

ಅದೇ ಠಾಣೆ ವ್ಯಾಪ್ತಿಯಲ್ಲಿ ಬರುವ ಪ್ರಾವಿಜನ್ ಸ್ಟೋರ್ ಬಳಿ ಅಬ್ದುಲ್ ಖಾದರ್ ಚೀಟಿಯಲ್ಲಿ ಓಸಿ ಬರೆಯುತ್ತಿದ್ದ ಈತನ ವಿರುದ್ಧವೂ ದೂರು ದಾಖಲಾಗಿದೆ. ನ್ಯೂಟೌನ್, ಪೇಪರ್ ಟೌನ್ ಹಾಗೂ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಓಸಿ ದಾಳಿ ನಡೆದಿದೆ. 

ವೀರಾಪುರದ ದೇವಸ್ಥಾನದ ಬಳಿ ಓಸಿ ಆಡಿಸುತ್ತಿದ್ದ, ಪ್ರದೀಪ್ ಬಿನ್ ಕೆ. ಕರುಣಾಕರ, ವಿರುದ್ಧ ಓಸಿ ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ. ವೇಲೂರು ಶೆಡ್ ನ ರಣಧೀರ ಪಡೆ ವೃತ್ತದಲ್ಲಿ ಕುಮಾರ್ ಎಂಬಾತನ ವಿರುದ್ಧ ನ್ಯೂ ಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close