ಸುದ್ದಿಲೈವ್/ಶಿವಮೊಗ್ಗ
ದಸರಾ ಮೆರವಣಿಗೆಯಲ್ಲಿ ಭಾಗಿಯಾಲು ಬಂದಿರುವ ಸಕ್ರೆಬೈಲಿನ ಮೂರು ಆನೆಗಳಿಗೆ ಇಂದು ನಗರದಲ್ಲಿ ತಾಲೀಮು ನಡೆಸಲಾಗಿದೆ.
ನಿನ್ನೆ ಸಂಜೆಯ ನಂತರ ಸಕ್ರೆಬೈಲಿನಿಂದ ಮೂರು ಆನೆಗಳಾದ ಬಾಲಣ್ಣ, ಸಾಗರ ಹಾಗೂ ಬಹದ್ದೂರು ಶಿವಮೊಗ್ಗ ನಗರಕ್ಕೆ ತರಲಾಗಿತ್ತು. ಮೂರು ಆನೆಗಳಿಗೆ ಕೋಟೆ ರಸ್ತೆ, ಗಾಂಧಿ ಬಜಾರ್ ದುರ್ಗಿಗುಡಿ ಮೂಲಕ ಮತ್ತೆ ವಾಪಾಸ್ ಕೋಟೆಯ ವಾಸವಿ ರಸ್ತೆಗೆ ಕರೆತರಲಾಗಿದೆ.
ವಾಹನ, ಜನದಟ್ಟಣೆ ಕಡಿಮೆ ಇರುವುದು ಮತ್ತು ಆನೆಗಳಿಗೆ ನಗರದ ಗಿಜಿಗುಡುವ ವಾತಾವರಣಕ್ಕೆ ಹೊಂದಾಣಿಕೆ ಮಾಡಿಸುವ ಸಲುವಾಗಿ ಬೆಳಗ್ಗೆ ತಾಲೀಮು ನಡೆಸಲಾಗಿದೆ. ಆನೆಗಳು ಸಾಗುವ ಹಾದಿಯಲ್ಲಿ ಜನರ ನಿಯಂತ್ರಣಕ್ಕೆ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿತ್ತು. ಸಕ್ರೆಬೈಲಿನ ವೈದ್ಯ ಡಾ.ವಿನಯ್ ಸಹ ಆನೆಗಳು ತಾಲೀಮಿನಲ್ಲಿ ಪಾಲ್ಗೊಂಡಿದ್ದರು