ಸುದ್ದಿಲೈವ್/ಶಿವಮೊಗ್ಗ
ನಟ ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ 3 ವರ್ಷ ಕಳೆದಿದೆ. 3 ನೇ ವರ್ಷದ ಪುಣ್ಯ ಸ್ಮರಣೆ ಹಿನ್ನಲೆಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಿಂದ ಹಲವೆಡೆ ವಿವಿಧ ಕಾರ್ಯಕ್ರಮ ನಡೆಸಿದ್ದಾರೆ.
ನಗರದ ವಿದ್ಯಾನಗರದಲ್ಲಿ ಪುನೀತ್ ರಾಜಕುಮಾರ್ ಅವರ ೩ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸುಮಾರು ೨೦೦೦ ಜನಗಳಿಗೆ ಉಚಿತ ಬಾಡೂಟವನ್ನು ವೀರಕೇಸರಿ ಸಂಘಟನೆ ಹಮ್ಮಿಕೊಂಡಿದೆ.
ಸಂಘದ ಅಧ್ಯಕ್ಷರಾದ ಪುನೀತ್‌ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದಸ್ಯರಾದ ಅಕ್ಷಯ್ ಸಂತೋಷ್ ಪವನ್ ಅರುಣ್ ರಂಜೇಶ್ ಸಂಗಡಿಗರಿಂದ ಉತ್ತಮವಾಗಿ ಕಾರ್ಯಕ್ರಮದ ವ್ಯವಸ್ಥೆ ಮಾಡಲಾಗಿತ್ತು.
ವಿನೋಬ ನಗರದ ಬಸ್ ನಿಲ್ದಾಣದ ಯುವಕರಿಂದ ಫ್ರೀಡಂ ಪಾರ್ಕ್ ಬಳಿ ಅಪ್ಪು ಪುಣ್ಯ ಸ್ಮರಣೆ ನಡೆದಿದೆ. ಗೋಪಾಲಗೌಡ ಬಡಾವಣೆಯಲ್ಲಿ ಅಪ್ಪು ಅಭಿಮಾನಿ ಬಳಗದಿಂದ ಬಾಲಾಜಿ ಕನ್ವಷನಲ್ ಹಾಲ್ ನಲ್ಲಿ ಇಂದು ಸಂಜೆ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಗಿದೆ. ಇದರಿಂದ ಅಗಲಿದ ನಾಯಕನ ಸ್ಮರಣೆಯಲ್ಲಿ ಅಪ್ಪು ಅಭಿಮಾನಿಗಳು ಮಿಂದಿದ್ದಾರೆ.