ನೆಹರೂ ರಸ್ತೆಯಲ್ಲಿರುವ ಅಂಗಡಿಗಳ ಕಳ್ಳತನ



ಸುದ್ದಿಲೈವ್/ಶಿವಮೊಗ್ಗ

ನಗರದ ನೆಹರೂ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ಕಳ್ಳತನವಾಗಿದೆ. ಅಂಗಡಿಯ ಮೇಲಂತಸ್ಥಿನ ಶೆಟ್ಟರ್‌ನ ಕೀ ಹಾಕುವ ಕೊಂಡಿಯನ್ನ‌ಜಖಂಗೊಳಿಸಿ 75700 ಕ್ಯಾಶ್ ಮತ್ತು ಸಿಸಿ ಕ್ಯಾಮೆರಾದ ಎರಡು ಹಾರ್ಡ್ ಡಿಸ್ಕ್  ಕದ್ದುಕೊಂಡು ಹೋಗಿರುವ ಘಟನೆ ವರದಿಯಾಗಿದೆ. 


ನೆಹರೂ ರಸ್ತೆಯಲ್ಲಿರುವ ಫ್ಯಾಶನ್ ರೆಡಿಮೇಡ್ ಬಟ್ಟೆ ಅಂಗಡಿಯ ಮೇಲಂತಸ್ಥಿನ ಶೆಟರ್ ಮುರಿದು ಕಳ್ಳತನ ಮಾಡಲಾಗಿದೆ. ಅಂಗಡಿಯ ಹಿಂದಿನ ದಿನದ ವ್ಯಾಪಾರ ಮತ್ತು ಅಂದಿನ ವ್ಯಾಪಾರ ಸೇರಿ ಒಟ್ಟು 75700 ರೂ. ಮತ್ತು ಮೇಲಂತಸ್ಥಿನಲ್ಲಿದ್ದ  ಡಿವಿಆರ್ ಸಹ ಕಳುವಾಗಿದೆ. ಈ ಅಂಗಡಿಯ ಜೊತೆಗೆ ಪಕ್ಕದ ವಿಡಿಯೋ ಟ್ರಾನಿಕ್ಸ್ ಅಂಗಡಿಯ 650 ಕ್ಯಾಶ್ ಸಹ ಕಳ್ಳತನವಾಗಿದೆ. ಇಲ್ಲಿನ ಸಿಸಿ ಟಿವಿಯ ಹಾರ್ಡ್ ಡಿಸ್ಕ್ ಕಳ್ಳತನ ಮಾಡಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close