ಸುದ್ದಿಲೈವ್/ಶಿವಮೊಗ್ಗ
ಬಿಜಾಪುರ ಜಿಲ್ಲೆಯ ಸಾವಿರಾರು ರೈತರ ಪಹಣಿಯಲ್ಲಿ ರೈತರ ಹೆಸರಿನ ಬದಲಿಗೆ ವಕ್ಫ್‌ಬೋರ್ಡ್ ಹೆಸರು ನಮುದಾಗಿರುವುದು ರೈತರಲ್ಲಿ ಆತಂಕ ಉಂಟುಮಾಡಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಜಾತ್ಯತೀತದ ಬಗ್ಗೆ ಬೊಗಳೆ ಬಿಡುವ ಸಚಿವ ಜಮೀರ್ ಅಧಿಕಾರಿಯೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಪಹಣಿ ಬದಲಾಗಿರುವುದು ಕಂಡು ಬಂದಿದೆ, ಅಧಿಕಾರಿಗಳನ್ನು ಹೇದರಿಸಿ ಪಹಣಿ ಬದಲಿಸಲಾಗಿದೆ ಎಂದು ಆರೋಪ ಮಾಡಿದರು.
ಈ ಭಾಗದಲ್ಲಿ ಅನೇಕ ಮುಸ್ಲಿಂಮರ ಆಸ್ತಿಕೂಡ ವಕ್ಫ್ ಆಸ್ತಿಯಾಗಿ ಬದಲಾಗಿದೆ, ಈ ರೀತಿ ಪಹಣಿಯನ್ನು ತಪ್ಪಾಗಿ ನಮೂದಿಸಿರುವ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಗುಡುಗಿದರು.
ಈ ಹಿಂದೆ ಯಾವ್ಯಾವ ದೇವಸ್ಥಾನದ ಆಸ್ತಿಗಳಿದ್ದವು ಅದನ್ನು ಉಳುವವನೆ ಹೊಲದೊಡೆಯ ಎಂಬುವುದಾಗಿ ನಮ್ಮ ಸರ್ಕಾರ ಮಾಡಿತ್ತು. ಈ ಕೂಡಲೆ ಸರ್ಕಾರ ಮಧ್ಯಪ್ರವೇಶಿಸಬೇಕು ಇಲ್ಲವಾದರೆ ಯಾರ ಆಸ್ತಿ ಯಾರು ಕಬಳಿಸುತ್ತಾರೆಂದು ಹೇಳಲು ಸಾಧ್ಯವಾಗದ ಸ್ಥಿತಿ ತಲುಪುವ ಆತಂಕ ವ್ಯಕ್ತಪಡಿಸಿದರು.
ಇದೇ ರೀತಿ ಶಿವಮೊಗ್ಗದ ಹಣಗೆರೆ ಕೂಡ ಹಿಂದೋಮ್ಮೆ ವಕ್ತ್ಫ್ ಆಸ್ತಿಮಾಡಲು ಹೊರಟಿದ್ದರು ಅದನ್ನು ನಾನು ತಡೆದಿದ್ದೆ ಎಂದು ನೆನಪಿಸಿಕೊಂಡ ಮಾಜಿ ಸಚಿವರು ದೀಪಾವಳಿಗೆ ರೈತರಿಗೆ ಜಮೀರ್ ನೀಡಿರುವ ಅತಿದೊಡ್ಡ ಕೊಡುಗೆಯಾಗಿದೆ ಸರ್ಕಾರಕ್ಕೆ ನಾಚಿಕೆ ಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜಾಪುರದ ರೈತರಿಗೆ ಆದ ಅನ್ಯಾವನ್ನು ಸರಿಪಡಿಸಬೇಕು ಇಲ್ಲವಾದರೆ ಬಿ ಜೆ ಪಿ ಹೋರಾಟ ನಡೆಸುತ್ತದೆ. 75 ನೇ ಇಸವಿಯಿಂದ ಇಲ್ಲಿಯ ವರೆಗು ಮಣ್ಣು ತಿಂತಿದ್ರಾ ಆಗಲೆ ಗೆಜೇಟ್ ನೋಟಿಪೀಕೇಷನ್ ಆಗಿದ್ದರೆ ಇಲ್ಲಿಯ ವರೆಗು ಏನ್ ಮಾಡುದ್ರಿ ಎಂದು ಪ್ರಶ್ನಿಸಿದರು.
ರೈತರ ರಕ್ಷಣೆಗೆ ಬರಬೇಕಿದ್ದ ಸಂಘಟನೆಗಳು ಸೆಕ್ಯೂಲರ್ ಮುಖವಾಡ ಧರಿಸಿಕೊಂಡಿರುವುದಾಗಿ ಅನುಮಾನ ವ್ಯಕ್ತಪಡಿಸಿದ ಆರಗ ಜ್ಞಾನೇಂದ್ರ
ಬೆಲಿಕೇರಿ ಬಂದರಿನಲ್ಲಿ ಸೀಜ್ ಮಾಡಿದ್ದ ಅಧಿರನ್ನು ಕದ್ದು ಸಾಗಿಸಿದ್ದ ಶಾಸಕರಿಗೆ ನಿನ್ನೆ ಶಿಕ್ಷೆ ಪ್ರಕಟವಾಗಿದೆ ಇದರಿಂದ ಕಾಂಗ್ರೇಸಿನ ಮುಖವಾಡ ಕಳಚಲು ಆರಂಭವಾಗಿದೆ. ಇಂತ ಬ್ರಷ್ಟರೆ ಕಾಂಗ್ರೇಸಿಗೆ ಬೇಕಾಗಿರೋದು ಎಂದು ದೂಷಿಸಿದರು.