ಗೌರವಪೂರ್ಣ ಬೀಳ್ಕೊಡಿಗೆ



ಸುದ್ದಿಲೈವ್/ಶಿವಮೊಗ್ಗ

ದಸರಾವನ್ನ ಯಡವಟ್ಟಾಗದಂತೆ ಯಶಸ್ವಿಯಾಗಿ ನಡೆಸಿಕೊಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಹಾಗೂ ಅಂಬಾರಿ ಹೊತ್ತ ಆನೆಗಳಾದ ಸಾಗರ್, ಬಾಲಣ್ಣ ಮತ್ತು ಬಹದ್ದೂರ್‌ಗೆ ಪಾಲಿಕೆಯ ವತಿಯಿಂದ ಇಂದು ಗೌರವ ಪೂರ್ಣ ಬೀಳ್ಕೊಡುಗೆ ನಿಡಲಾಯಿತು. 

ಇಡೀ ತಂಡಕ್ಕೆ ಪಾಲಿಕೆಯಿಂದ ಗೌರವ ಸಮರ್ಪಣೆ ಮಾಡಲಾಯಿತು. ಮೊಟ್ಟಮೊದಲ ಬಾರಿಗೆ 3 ಗಂಡು ಆನೆಗಳು ದಸರಾ ಉತ್ಸವಕ್ಕೆ ಬಂದು ಯಶಸ್ವಿಯಾಗಿ ದಸರಾ ಉತ್ಸವವನ್ನ ಪೂರ್ಣಗೊಳಿಸಿದ್ದಾರೆ.  

ಉತ್ಸವ ಸಮಿತಿಯ ಸಂಪೂರ್ಣ ಜವಾಬ್ದಾರಿ ಹೊತ್ತ ಉತ್ಸವ ಸಮಿತಿ ಕಾರ್ಯದರ್ಶಿ ಸುಧೀರ್ ಕೆ ಆಚಾರ್ಯ ಆಯುಕ್ತಾರಾದ ಕವಿತಾ ಯೋಗಪ್ಪನವರ್ ಹಾಗೂ ಪ್ರಮುಖವಾಗಿ ಶಾಸಕ ಚನ್ನಬಸಪ್ಪನವರ ಮಾರ್ಗದರ್ಶನಕ್ಕೆ ನಾಗರಿಕರ ಪ್ರಶಂಸೆ ಗೆ ಪಾತ್ರವಾಗಿದೆ.

ಆನೆಗಳ ಶಾಪ ತಟ್ಟದೆ ಇರುತ್ತಾ?

ಕೊರೋನ ನಂತರದ ದಸರಾಗಳಲ್ಲಿ ಅರಣ್ಯ ಇಲಾಖೆ  ಎರಡು ಬಾರಿ ಮುಗ್ಗರಿಸಿದೆ. ಇದನ್ನ ಕೇಳಿದ್ದಕ್ಕೆ ಡಿಎಫ್ಒ ವನ್ಯಜೀವಿ ವಿಭಾಗದ ಅಧಿಕಾರಿ ಮಾಧ್ಯಮಗಳ ಮೇಲೆ ಎಗುರಿಬಿದ್ದಿದ್ದರು. ಕಳೆದ ವರ್ಷ ದಸರಾ ಮೆರವಣಿಗೆಯಲ್ಲಿ ಭಾಗಿಯಾಗಬೇಕಿದ್ದ ಕುಂತಿ ಆನೆ ಮರಿಯೊಂದಕ್ಕೆ ಜನ್ಮ ನೀಡಿತ್ತು. 

ಆನೆಗಳು ಗರ್ಭಿಣಿಯಾದರೆ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಗೊತ್ತಾಗೊಲ್ವಾ ಎಂಬ ಪ್ರಶ್ನೆಯೂ ಆಗ ಎದುರಾದಾಗ ಇಲ್ಲ ಗೊತ್ತಾಗೊಲ್ಲ ಎಂದು ನಾಜೂಕಾಗಿಯೇ ಅಧಿಕಾರಿಗಳು ನುಣಚಿಕೊಂಡಿದ್ದರು. ಆದರೆ ಜನರು ಇದನ್ನೆಲ್ಲಾ ಸೂಕ್ಷ್ಮವಾಗಿಯೇ ಗಮನಿಸಿದ್ದರು.‌ ಅಧಿಕಾರಿಗಳ ಯಡವಟ್ಟಿನಿಂದಲೇ ಗರ್ಭಿಣಿ ಆನೆಗೆ ತಾಲೀಮು ನೀಡಲಾಗಿದೆ ಎಂದು ಜನ ಶಾಪಹಾಕಿದ್ದರು‌. 

ಇದಕ್ಕೂ ಮುನ್ನಾ ಇನ್ನೇನು ಸಾಗರ ಎಂಬ ಆನೆ ಅಂಬಾರಿ‌ಹೋರಬೇಕು, ಎನ್ನುವಷ್ಟರಲ್ಲಿ ಆತ ಭೇದಿ ಮಾಡಿಕೊಂಡಿತ್ತು. ಇವೆಲ್ಲಾ ಅಧಿಕಾರಿಗಳ ಯಡವಟ್ಟಿನಿಂದ ಆಗಿದ್ದು ಬಿಟ್ಟರೆ ಬೇರೆಯವರ ಕೈವಾಡ ಇಲ್ಲಿ ಕಾಣಿಸುತ್ತಾ? 

ಇದಕ್ಕೂ ಮೊದಲು ದಸರಾ ಆನೆಗಳನ್ನ ಶಿವಮೊಗ್ಗದಿಂದ ಸಕ್ರೆಬೈಲಿನ ವರೆಗೆ ನಡೆಸಿಕೊಂಡು ಹೋದ ಘಟನೆಯೂ ನಡೆದಿತ್ತು. ಆದರೆ ಒಂದೇ ಒಂದು ಪ್ರಶ್ನೆಗೆ ಅಧಿಕಾರಿ ಮೂಗಿನ ತುದಿಯ ಕೋಪವನ್ನ ಮಾಧ್ಯಮಗಳ ಮೇಲೆ ಹಾಕಿದ್ದರು. ಮಾಧ್ಯಮಗಳ ಮೇಲೆ ಕೋಪ ತೋರಿಸಿದ್ರೆ ನಡೆದ ಸತ್ಯವನ್ನ ತಡೆಯಲಾಗುತ್ತದಾ?ಆನೆಗಳ ಶಾಪ ಇಲಾಖೆಗೆ ತಟ್ಟದೆ ಇರುತ್ತದಾ?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close