ಸುದ್ದಿಲೈವ್/ಶಿವಮೊಗ್ಗ
ಜಿಲ್ಲಾ ಬಂಜಾರ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಿರುವ ಬಗ್ಗೆ ಪರ ಮತ್ತು ವಿರುದ್ಧ ಹೇಳಿಕೆಗಳು ಹೊರಬೀಳುತ್ತಿದೆ. ಒಂದು ಬಣ ಸಂಘಕ್ಕೆ ಆಡಳಿತಾಧಿಕಾರಿ ನೇಮಕವನ್ನ ಸ್ವಾಗತಿಸಿದರೆ ಇನ್ನೊಂದು ಬಣ ಖಂಡಿಸಿದೆ.
ಸಂಘದ ಅಧ್ಯಕ್ಷರಾಗಿದ್ದ ಅಶೋಕ್ ನಾಯ್ಕ್ ಪರವಾದ ಬಣ ಇಂದು ಸುದ್ದಿಗೋಷ್ಠಿ ನಡೆಸಿ ವಿರೋಧದ ಬಣಕ್ಕೆ ಸವಾಲು ಹಾಕಿದೆ. ಸಂಘದ ಅಧ್ಯಕ್ಷರ ನೃತೃತ್ವದಲ್ಲಿ ನಾಲ್ಕುವರ್ಷ ಯಾವುದೇ ಭ್ರಷ್ಠಾಚಾರ ನಡೆಸಿಲ್ಲ. 12 ಕೋಟಿ ಹಣ ವ್ಯಯವಾಗಿರುವುದರಲ್ಲಿ ಯಾವುದೇ ಭ್ರಷ್ಠಾಚಾರವಾಗಿಲ್ಲ. ಆರೋಪ ಸಾಭೀತಾದರೆ ಅವರು ಹೇಳಿದಂತೆ ಕೇಳುವುದಾಗಿ ನಾನ್ಯಾನಾಯ್ಕ್ ಸವಾಲುಹಾಕಿದ್ದಾರೆ.
ಸರ್ಕಾರ ಬದಲಾಗುತ್ತಿದ್ದಂತೆ ದ್ವೇಷದ ರಾಜಕಾರಣ ನಡೆಯುತ್ತಿದೆ. ಭವನ ನಿರ್ಮಾಣ ಮಾಡಿದ ಗುತ್ತಿಗೆದಾರನಿಗೆ 1.80 ಕೋಟಿ ಹಣ ಪಾವತಿ ಮಾಡಬೇಕಿದೆ. ವಿರೋಧ ಮಾಡಿದ ಶಶಿಕುಮಾರ್, ರೇಣುನಾಯ್ಕ, ವಕೀಲ ವೇಮಾನಾಯ್ಕ್ ಅವರು ಸಂಘದ ಪದಾದಿಕಾರಿಗಳಾದ ನೋಂದಣಿ ಹಣವನ್ನ ದುರುಪಯೋಗ ಮಾಡಿಕೊಂಡಿರುವುದಾಗಿ ಭೋಜ್ಯನಾಯ್ಕ್ ಆರೋಪಿಸಿದರು.
ಕಳ್ಳತನ ಮಾಡಿಕೊಂಡು ಹೋದವರು ಮಾಜಿ ಶಾಸಕ ಅಶೋಕ ನಾಯ್ಕ್ ವಿರುದ್ಧ ಮಾತನಾಡುತ್ತಾರೆ. ಅಶೋಕ್ ನಾಯ್ಕ ಶ್ರಮದಿಂದ ಭವ್ಯ ನಿರ್ಮಾಣವಾಗಿದೆ. 58 ಹಳ್ಳಿಯ ತಾಂಡಗಳಿಗೆ 50 ಸಾವಿರ ದೇಣಿಗೆ ನೀಡಿದವರಿಗೆ 50% ಡಿಸ್ಕೌಂಟ್ ನೀಡಲಾಗಿದೆ. 5000 ರೂ.ಗೆ ಅಜೀವ ಸದಸ್ಯತ್ವ ನೀಡಲಾಗಿದೆ. ಇದನ್ನೆಲ್ಲಾ ದುರುಪಯೋಗ ಪಡಿಸಿಕೊಂಡು ವಿರೋಧಿ ಬಣ ಆರೋಪ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಈ ಮೂವರನ್ನ ಸಂಘದಿಂದ ಹೊರ ಹಾಕಲಾಗಿತ್ತು. ಚುನಾವಣೆ ವೇಳೆ ಇವರನ್ನೂ ಕರೆಯಿಸಿ ಮಾತುಕತೆ ಮೂಲಕ ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ನಡೆಸಲಾಗಿತ್ತು. ಅಶೋಕ ನಾಯ್ಕ್ ರನ್ನ ಯಾರು ವಿರೋಧಿಸುತ್ತಿದ್ದಾರೋ ಅವರೊಂದಿಗೆ ಸಭೆ ನಡೆಸಲು ಯತ್ನಿಸಿದರು ಇವರುಗಳು ಸಭೆಗೆ ಹಾಜರಾಗದೆ ಮಾಧ್ಯಮಗಳ ಮುಂದೆ, ಅಧಿಕಾರಿಗಳಿಗೆ ಅರ್ಜಿ ಬರೆಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂಷಿಸಿದರು.
ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ, ತರಬೇತಿ ಕೇಂದ್ರ ನಿರ್ಮಿಸಲು ಸಧ್ಯ ಇರುವ ಸಮುದಾಯ ಭವನದಲ್ಲಿ ಸ್ಥಳಗಳನ್ನ ನಿಗದಿ ಪಡಿಸಲಾಗಿದೆ. ಸದಸ್ಯತ್ವ ಶುಲ್ಕ ಹೆಚ್ಚಳದ ಬಗ್ಗೆ ಸಹಕಾರ ನಿಬಂಧಾಧಿಕಾರಿಗಳಿಗೆ ನಿಡಲಾದರೂ ಡಿಆರ್ ನೀಡಿಲ್ಲ. ತಪಾಸಣೆ ವೇಳೆ ಈ ಹೆಚ್ಚಳದ ಬಗ್ಗೆ ಸೂಕ್ತ ದಾಖಲಾತಿ ನೀಡಿಲ್ಲವೆಂಬ ಕಾರಣ ನೀಡಿ ಆಡಳಿತಾಧಿಕಾರಿಗಳನ್ನ ನೇಮಿಸಲಾಗಿದೆ ಎಂಬ ವಿಷಯವನ್ನ ಮತ್ತೋರ್ವ ಸದಸ್ಯ ನಾಗೇಶ್ ನಾಯ್ಕ ಸ್ಪಷ್ಟಪಡಿಸಿದರು.
ಇವುಗಳ ಬಗ್ಗೆ ಕೋರ್ಟ್ ನಲ್ಲಿ ಎದುರಿಸಲಾಗುತ್ತದೆ. ಆಡಳಿತ ಅಧಿಕಾರಿ ನೇಮಕ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.