ಬೆಳ್ಳಂಬೆಳಿಗ್ಗೆನೆ ನಡೆದ ಯೋಗ ದಸರಾ ಮತ್ತು ಸೈಕಲ್ಥಾನ್


 

ಸುದ್ದಿಲೈವ್/ಶಿವಮೊಗ್ಗ

ಅದ್ಧೂರಿ ದಸರಾದ ನಾಲ್ಕನೇ ದಿನವಾದ ಭಾನುವಾರ ಬೆಳ್ಳಂಬೆಳಿಗ್ಗೆನೇ ಕೆಲವು ಚಟುವಟಿಕೆಗಳು ನಡೆದಿದೆ. ಕುವೆಂಪು ರಂಗ ಮಂದಿರದಲ್ಲಿ ಇಂದು ಬೆಳಿಗ್ಗೆ 6 ಗಂಟೆಗೆ ಯೋಗ ದಸರಾ ನಡೆದಿದೆ.

ಯೋಗ ದಸರಾಕ್ಕೆ ಇಂದು ಬೆಳಿಗ್ಗೆ ಪಾಲಿಕೆ ಆಯುಕ್ತರು, ಶಾಸಕ ಚೆನ್ನಬಸಪ್ಪ ಭಾಗಿಯಾಗಿದ್ದಾರೆ.  ಹಿರಿಯ ವೈದ್ಯರಾದ ಡಾ.ಎನ್ ಎಲ್ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಕಪಾಲ್ಭಾರತಿ, ಸೂರ್ಯನಮಸ್ಕಾರ ವಿವಿಧ ಭಂಗಿಗಳನ್ನ ಮಾಡುವ ಮೂಲಕ ಯೋಗ ದಸರಾ ನಡೆದಿದೆ.

ನಂತರ ಪರಿಸರ ದಸರಾ ಅಂಗವಾಗಿ ಸೈಕಲ್ ಥಾನ್ ನಡೆದಿದೆ. ನೆಹರೂ ಕ್ರೀಡಾಂಗಣದಿಂದ ಆರಂಭಗೊಂಡ ಸೈಕಲ್ ಥಾನ್ ರಾಷ್ಟ್ರಪ್ರಶಸ್ತಿ ಪುರಸ್ಕೃತ,  ಪರಿಸರ ತಜ್ಞರಾದ ಮಹಾದೇವ ಸ್ವಾಮಿ ಸೈಕಲ್ ಥಾನ್ ಗೆ ಚಾಲನೆ ನೀಡಿದ್ದಾರೆ. ಶಾಸಕರು, ಉಪನ್ಯಾಸಕ ಪರಿಸರ ನಾಗರಾಜ್ ಸೇರಿ 150 ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಮಾಜಿ ಶಾಸಕ ಹೆಚ್ ಎಂ ಚಂದ್ರಶೇಖರಪ್ಪ ಭಾಗಿಯಾಗಿದ್ದರು. 

ನೆಹರೂ ಕ್ರೀಡಾಂಗಣ, ಉಷಾ ನರ್ಸಿಂಗ್ ಹೋಮ್ ವೃತ್ತ, ವಿನೋಬ ನಗರ ಚೌಕಿ, ಆಲ್ಕೊಳ ವೃತ್ತ, ಸಾಗರ ರಸ್ತೆ, ಬಸ್ ನಿಲ್ದಾಣ, ಬಿಹೆಚ್ ರಸ್ತೆ, ಕರ್ನಾಟಕ ಸಂಘ, ವೀರಭದ್ರ ಚಲನಚಿತ್ರ ಮಂದಿರ ವೃತ್ತದ ಮೂಲಕ ಪಾಲಿಕೆಗೆ ಸೈಕಲ್ಥಾನ್ ಮುಕ್ತಾಯಗೊಂಡಿದೆ. 


ರಾಗಿಗುಡ್ಡದ ಮುಖ್ಯರಸ್ತೆಯಲ್ಲಿ ಪರಿಸರ ದಸರಾದ ಅಂಗವಾಗಿ ಸಸಿಯನ್ನೂ ನಡೆಲಾಗಿದೆ. ಪರಿಸರ ರಮೇಶ್ ಮತ್ತು ಶಾಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.‌ ನೆಟ್ಟಗಿಡವನ್ನ ಜಾನುವಾರುಗಳಿಂದ ರಕ್ಷಿಸಲು ಗ್ರೀನ್ ಮೆಶ್ ಸಹ ಅಳವಡಿಸಲಾಗಿದೆ.


ಇಂದು ಸಂಜೆ 6 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆಯಲಿದೆ.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close