ಸುದ್ದಿಲೈವ್/ಶಿವಮೊಗ್ಗ
ಭೂ ಹಕ್ಕು ಒತ್ತಾಯಿಸಿ ಅ.21 ರಿಂದ ಸಾಗರದಲ್ಲಿ 12 ರೈತ ಸಂಘಟನೆಯೊಂದಿಗೆ ಆರಂಭಗೊಳ್ಳುತ್ತಿರುವ ಪ್ರತಿಭಟನೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಸಾಗರದಲ್ಲಿ ಸೋಮವಾರದಿಂದ ಸಾಗರ ಉಪವಿಭಾಗಾಧಿಕಾರಿ ಕಚೇರಿಯ ಮುಂದೆ ನಡೆಯುತ್ತಿರುವ ಅಹೋರಾತ್ರಿ ಧರಣಿಯನ್ನ ನಡೆಸುವುದಾದರೆ ನಡೆಸಿ ಸರ್ಕಾರ ಮಾಡುವ ಕೆಲಸ ಮಾಡಲಿದೆ ಎಂದು ಹೇಳಿದರು. ನ್ಯಾಯಾಲಯದಲ್ಲಿ ಐಎ ಸಲ್ಲಿಕೆ ಮತ್ತು ಅರಣ್ಯ ಸಮಿತಿ ರಚಿಸಲು ಕಾಂಗ್ರೆಸ್ ಸರ್ಕಾರ ಕ್ರಮ ಜರುಗಿಸಿದೆ ಎಂದರು.
ಅ. 21 ರಂದು ಸಾಗರದಲಗಲಿ ಪಾರೆಸ್ಟ್ ವಿರುದ್ಧ ಸಂಘ ಸಂಸ್ಥೆಗಳು ನಡೆಸುತ್ತಿದೆ. ಶರಾವತಿ ಮೈನ್ ಅಜೆಂಡಾವಾಗಿದೆ. ಸುಪ್ರೀಂ ಕೋರ್ಟ್ ಗೆ ಹೋಗಿ ಮನವಿ ಮಾಡಿಕೊಳ್ಳುವ ಕೆಲಸ ಮಾಡಿರಲಿಲ್ಲ ಎಂಬುದು ಸಂಘ ಸಂಸ್ಥೆಗಳ ಆರೋಪವಾಗಿದೆ. ನಾವು ಮನವಿ ಮಾಡಿದ್ದೇವೆ. ಸರ್ಕಾರದ ಮೇಲೆ ಭರವಸೆ ಇಡುವಂತೆ ಮನವಿ ಮಾಡಿಕೊಂಡರು.
ನಾನು ಹೋರಾಟದಿಂದ ಬಂದಿದ್ದೇನೆ. ಸುಪ್ರೀಂ ಕೋರ್ಟ್ ನಲ್ಲಿ ಬೆಸ್ಟ್ ಲಾಯರ್ ಕೈಯಲ್ಲಿ 9500 ಎಕರೆ ಭೂಮಿಯನ್ನ ಸಾಗುವಳಿ ಪತ್ರ ದೊರಕಿಸುವಂತೆ ಮಾಡಲು ಹೋರಾಡುತ್ತಿದ್ದೇವೆ. ವಕೀಲ ಕಿರಣ್ ಕುಮಾರ್ ಜೊತೆ ಮಾತನಾಡಿದ್ದೇವೆ. ಏಕಾಏಕಿ ಈ ವಿಷಯದಲ್ಲಿ ವೇಗವಾಗಿ ಹೋಗಲು ಸಾಧ್ಯವಿಲ್ಲ. ಹಾಗಾಗಿ ತಾಳ್ಮೆಯಲ್ಲಿ ಸಾಗಬೇಕಿದೆ. ಪ್ರತಿಭಟನೆ ನಡೆಸುವುದು ಅವರ ಹಕ್ಕು ಆದರೆ ವಾಸ್ತವತೆ ರೈತರಿಗೆ ಅರ್ಥವಾಗಲಿ ಎಂದು ಹೇಳುತ್ತಿರುವುದಾಗಿ ಹೇಳಿದರು.
ಸಿದ್ದರಾಮಯ್ಯ ಮತ್ತು ಡಿಕೆಶಿ ಅಧಿಕಾರಕ್ಕೂ ಮೊದಲು ಭರವಸೆ ನೀಡಿದ್ದಾರೆ. ಸಮಿತಿ ರಚಿಸಲಾಗುತ್ತಿದೆ. ಸಿಎಂ ಕಚೇರಿಯ ಹಿರಿಯ ಅಧಿಕಾರಿ ತ್ರಿಲೋಕ್ ಅವರಿಗೆ ಜವಬ್ದಾರಿ ವಹಿಸಬೇಕಿತ್ತು. ಈಗ ವರ್ಗಾವಣೆ ಆಗಿದ್ದಾರೆ. ಸಮಿತಿ ರಚನೆಗೆ ಕಸರತ್ತು ನಡೆಯುತ್ತಿದೆ ಎಂದರು.
ಕಸ್ತೂರಿ ರಂಗನ ವರದಿಯನ್ನ ರಾಜ್ಯ ಸರ್ಕಾರ ತಿರಸ್ಕರಿಸಿದೆ. ಕೇಂದ್ರ ಜಾರಿಗೆ ಮಾಡಿದರೆ ಹೋರಾಟ ಅನಿವಾರ್ಯವಾಗಿದೆ. ಯಾರು ಯಾರಿಗೆ ನೋಟೀಸ್ ನೀಡಲಾಗಿದೆ ಪರಿಶೀಲಿಸಲಾಗುವುದು ಮೂರು ಎಕರೆ ಕಡಿಮೆ ಇರುವರಿಗೆ ನೋಟೀಸ್ ನೀಡುವುದಿಲ್ಲ. ಕೋರ್ಟ್ ನಲ್ಲಿ ವ್ಯಾಜ್ಯ ಇದ್ದರೆ. ನೋಟೀಸ್ ಬರಲಿದೆ. ಅದನ್ನ ನ್ಯಾಯಾಲಯದಲ್ಲಿಯೇ ಬಗೆಹರಿಸಿಕೊಳ್ಳಬೇಕಿದೆ ಎಂದರು.
ಲೋಕಾಯುಕ್ತ ಮತ್ತು ಕೋರ್ಟ್ ನಲ್ಲಿ ಪ್ರಕರಣವಿದ್ದರೆ ನೋಟೀಸ್ ನೀಡಲಾಗುತ್ತಿದೆ. ರೈತರ ಪ್ರತ್ಯೇಕ ರಾಜ್ಯದ ಬೇಡಿಕೆ ಈಡೇರಲ್ಲ ಎಂದ ಸಚಿವರು ಎಲ್ಲವೂ ಏಕಾಏಕಿ ಸಂಭವಿಸಿಲ್ಲ. ನ್ಯಾಯಾಲಯಕ್ಕೆ ಐಎ ಹಾಕಲು 6-7 ತಿಂಗಳು ತೆಗೆದುಕೊಂಡಿದೆ. ಸಮಯಬೇಕು ಎಂದರು.
ಅರಣ್ಯ ಸಮಿತಿ ರಚನೆಗೆ ಮಾರ್ಚ್ ನಲ್ಲಿ ಸಭೆ ನಡೆಸಲಾಗಿದೆ. ರಚನೆ ಮಾಡಲಾಗುವುದು ಎಂದ ಸಚಿವರು 45 ಟಿಎಂಸಿ ಕುಡಿಯುವ ನೀರಿಗೆ ಬೇಕು. 35 ಟಿಎಂಸಿ ಪಂಪ್ ಲಿಫ್ಟ್ ಮಾಡಲು ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿದೆ. ಇದನ್ನ ಮುಂಬರುವ ವರ್ಷದಲ್ಲಿ ಸರಿಪಡಿಸಲಾಗುವುದು ಎಂದರು.