ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ವಿದ್ಯುತ್ ವ್ಯತ್ಯಯ



ಸುದ್ದಿಲೈವ್/ಶಿವಮೊಗ್ಗ/ಭದ್ರಾವತಿ

ಶಿವಮೊಗ್ಗ ನಗರದ ಗಾಂಧಿಬಜಾರ್, ಭರಮಪ್ಪನಗರ, ಎಂ.ಕೆ.ಕೆ ರಸ್ತೆಗಳಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಅ.25 ರಂದು ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಈ ಕೆಳಕಂಡ ಬಡಾವಣೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.‌ 

ಗಾಂಧಿಬಜಾರ್, ಭರಮಪ್ಪನಗರ, ಎಂ.ಕೆ.ಕೆ.ರಸ್ತೆ, ನಾಗಪ್ಪಕೇರಿ, ಉಪ್ಪಾರಕೇರಿ, ತಿರುಪಳಯ್ಯನ ಕೇರಿ, ಸಾವರ್ಕರ್ ನಗರ, ಪೆನ್ಷನ್‌ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಓ.ಬಿ.ಎಲ್ ರಸ್ತೆ, ಮಹಾರಾಜ ರಸ್ತೆ, ಅಶೋಕರಸ್ತೆ, ತುಳುಜಾ ಭವಾನಿ ರಸ್ತೆ, ಉರ್ದು ಬಜಾರ್  ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. 

ನಾಳೆ ಭದ್ರಾವತಿಯಲ್ಲಿ ವಿದ್ಯುತ್ ವ್ಯತ್ಯಯ

ಭದ್ರಾವತಿ ಅ 24   ಮಂ.ವಿ.ಸ.ಕಂ, ನಗರ ಉಪವಿಭಾಗ,  ನಗರ/ಗ್ರಾಮೀಣ ಉಪವಿಭಾಗಗಳ ವಾಪ್ತಿಯಲ್ಲಿ ವಿದ್ಯುತ್ ಮಾರ್ಗ ಸ್ಥಳಾಂತರಿಸುವ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಅ 24 ರ ಗುರುವಾರವಾರ ಬೆಳಿಗ್ಗೆ 10:00 ರಿಂದ ಸಂಜೆ 06.00 ಘಂಟೆಯವರೆಗೆ ಬೊಮ್ಮನಕಟ್ಟಿ, ಬೊಮ್ಮನಕಟ್ಟೆ ಗೃಹ ಮಂಡಳಿ ಬಡಾವಣೆ, 2ನೇ ವಿಭಾಗ, ತಿಮ್ಲಾಪುರ ರಸ್ತೆ, ಮೂಲೆಕಟ್ಟೆ, ಕಂಬದಾಳು ಹೊಸೂರು ಪಂಚಾಯಿತಿಯ ವ್ಯಾಪ್ತಿ, ಹಿರಿಯೂರು ಪಂಚಾಯಿತಿಯ ವ್ಯಾಪ್ತಿ, ಅರಳೀಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಲು ಮೆಸ್ಕಾಂ ಪ್ರಕಟಣೆ ಕೋರಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close