ಸುದ್ದಿಲೈವ್/ಶಿವಮೊಗ್ಗ
ರೈಲು ಹತ್ತುವ ಆತುರದಲ್ಲಿ ರೈಲು ಪ್ಲಾಟ್ ಫಾರಂನಲ್ಲಿ ಜಾರಿ ಬಿದ್ದ ರಭಸಕ್ಕೆ ವ್ಯಕ್ತಿಯೋರ್ವನ ಕಾಲು ಟ್ವಿಸ್ಟ್ ಆಗಿರುವ ಘಟನೆ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ನಡೆದಿದೆ.
ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಎರಡು ದಿನ ಹಿಂದೆ ಶಿಕಾರಿಪುರದ ಫಯಾಜ್ ಖಾನ್ ಎಂಬುವವರು ಜನಶತಾಬ್ದಿ ರೈಲು ಹತ್ತಲು ಬಂದಾಗ ಘಟನೆ ನಡೆದಿದೆ. ಪ್ಲಾಟ್ ಫಾರಂ ನಲ್ಲಿ ಬಿದ್ದ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ರೈಲ್ವೆ ಪೊಲೀಸರು ದಾಖಲಿಸಿದ್ದಾರೆ. ಎರಡನೇ ಫಾಟ್ ಫಾರ್ಂನಿಂದ ಹೊರಡುವ ಜನಶತಾಬ್ದಿಯನ್ನ ಹಿಡಿಯಲು ಅವರಸರದಲ್ಲಿ ಹೋಗುವಾಗ ಈ ಘಟನೆ ನಡೆದಿದೆ.
ಬಿದ್ದ ರಭಸಕ್ಕೆ ಫಯಾಜ್ ಖಾನ್ ಅವರ ಒಂದು ಕಾಲು ತಿರುಚಿದೆ.