ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಬೆಳ್ಳಂಬೆಳಿಗ್ಗೆ ಸುರಿದ ಮಳೆಯ ಅನಾಹುತಗಳು ಈಗಲೂ ನಷ್ಟ ಕಷ್ಟಗಳ ಲೆಕ್ಕಚಾರಗಳು ಹೊರ ಬೀಳುತ್ತಿವೆ. ಇಂದು ಬೆಳಿಗ್ಗೆ ವಿನೋಬನಗರದ ವಿಕಾಸ ಶಾಲೆ ಹಿಂಭಾಗದ ಇಬ್ಬರು ವೃದ್ಧರ ರಕ್ಷಣೆ ನಡೆದಿದೆ.
ಶಿವಮೊಗ್ಗ ನಗರದ ಪೋಲಿಸ್ ಚೌಕಿ ವಿನೋಬನಗರದ ಚೌಕಿ ಬಳಿಯ ವಿಕಾಸ ಶಾಲೆ ಹಿಂಭಾಗದ ರಸ್ತೆಯಲ್ಲಿರುವ ವೆಂಕಟಸ್ವಾಮಿ ಎಂಬುವರಿಗೆ ಸೇರಿದ ಮನೆಯಲ್ಲಿ ನೀರು ನುಗ್ಗಿದೆ. ಇದರಿಂದ ವೃದ್ಧ ದಂಪತಿಗಳು ಮನೆಯೊಳಗೆ ಸಿಲುಕಿಕೊಂಡು ಒದ್ದಾಡುವಂತಾಗಿತ್ತು.
ಅದರಂತೆ ಶಿವಮೊಗ್ಗ ಅಗ್ನಿಶಾಮಕ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಯಿಂದ ವೃದ್ಧ ದಂಪತಿಗಳನ್ನ ರಕ್ಷಿಸಿದ್ದಾರೆ.
ಪಾಸಿಟಿವ್ ಮೈಂಡ್ ಆಸ್ಪತ್ರೆಯ ಬೆಂಕಿನಗರದಲ್ಲಿ ನಗರದಲ್ಲಿ ಒಂದು ಮನೆಯೊಳಗೆ ಡ್ರೈನೇಜ್ ನೀರು ನುಗ್ಗಿ ಅವಾಂತರಗೊಳಿಸಲಾಗಿತ್ತು. ಅಗ್ನಿಶಾಮಕದಳದವರು ರಕ್ಷಿಸಿದ್ದಾರೆ.
ಅದರಂತೆ ಸಾಗರ ರಸ್ತೆಯಲ್ಲಿರುವ ಫೆನ್ಸಿಂಗ್ ತಯಾರಿಸುವ ಎಸ್ ಎಸ್ ಇಂಡಸ್ಟ್ರೀಸ್ ಒಳಗೆ ನೀರು ನುಗ್ಗಿ 67 ಲಕ್ಷ ರೂ ಮೌಲ್ಯದ ಉಪಕರಣ ಮತ್ತು ಇತರೆ ಸಾಮಾಗ್ರಿಗಳನ್ನ ಹಾಳು ಉಂಟು ಮಾಡಿದೆ.