ಗ್ರಾಪಂ ನೌಕರರ ಪ್ರತಿಭಟನೆ-ಭರವಸೆ ಮೂಡಿಸಿದ ಸಂಸದರ ಭೇಟಿ

 


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲ ಪಂಚಾಯತ್ ಆವರಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿವೆ. ಐದನೇ ದಿನದ ಪ್ರತಿಭಟನೆಯಲ್ಲಿ ಸಂಸದ ರಾಘವೇಂದ್ರ ಭೇಟಿಯಾಗಿ ಭರವಸೆಗಳನ್ನ ಮೂಡಿಸಿದ್ದಾರೆ.

ಆರ್.ಡಿ.ಪಿ.ಆರ್. ಕುಟುಂಬದ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದೈದು ದಿನಗಳಿಂದ ಹೋರಾಟ ನಡೆಯುತ್ತಿದೆ. ಈ ವೇಳೆ ಸಂಸದರ ಭೇಟಿ ಮಹತ್ವಪಡೆದುಕೊಂಡಿದೆ. ಉಂಟಾಗಿರುವ ಸಮಸ್ಯೆ ನಿವಾರಿಸುವ ಭರವಸೆಗಳನ್ನ ನೀಡಿದ್ದಾರೆ.

ಈ ನಡುವೆ ಮಧ್ಯಮಗಳಿಎ ಮಾತನಾಡಿದ ಸಮಸದರು,  ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಎರಡು ಸಭೆ ನಡೆಸಿದ್ದಾರೆ. ಅವರ ಜೊತೆ ನಾನು ಕೂಡ ಮಾತನಾಡುತ್ತೇನೆ. ಗ್ರಾ.ಪಂ. ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ತಲುಪಿಸುವುದು ಗ್ರಾ.ಪಂ. ನೌಕರರು. ಅವರ ಬೇಡಿಕೆ ಈಡೇರಿಸಬೇಕಾಗಿರುವುದು ಜನಪ್ರತಿನಿಧಿಗಳ ಮುಖ್ಯ ಕರ್ತವ್ಯವೆಂದಿದ್ದಾರೆ.

ಕೆಲವು ಗ್ರಾಮಗಳಲ್ಲಿ ಮಳೆಯಿಂದ ಅನಾಹುತವಾಗಿದ್ದು, ಅಲ್ಲಿಯೂ ಸೇವೆ ನೀಡುವುದು ಗ್ರಾಪಂ ಅಧಿಕಾರಿಗಳು ಮತ್ತು ನೌಕರರಾಗಿದ್ದಾರೆ. ಮುಂದಿನ 24 ಗಂಟೆಗಳ ಅವಧಿಯಲ್ಲಿ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುತ್ತೇನೆ ಎಂದು ಸಂಸದರು ಭರವಸೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close