Girl in a jacket

ಸಾಗರ ನಗರ ಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯ ಜಟಾಪಟಿ-ಇಂದು ಬಿಜೆಪಿಯಿಂದ ಸುದ್ದಿಗೋಷ್ಠಿ


ಸುದ್ದಿಲೈವ್/ಶಿವಮೊಗ್ಗ

ಸಾಗರ ನಗರ ಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಪ್ರಕಟವಾದ ಮೀಸಲಾತಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ನೀಡಿರುವ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯ ತಿಕ್ಕಾಟ ಮುಂದುವರೆದಿದೆ. 

ಲಲಿತಾರವರು ನ್ಯಾಯಾಲಯದ ಮೂಲಕ ಮೀಸಲಾತಿಗೆ ತಡೆಯಾಜ್ಞೆ ತಂದಿರುವ ವಿಚಾರದಲ್ಲಿ ಕಾಂಗ್ರೆಸ್ ಮಹಿಳಾ ಘಟಕ ನಿನ್ನೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಲಲಿತಮ್ಮನವರ ಬೆನ್ನಿಗೆ ನಿಂತಿತ್ತು. ಇಂದು ಬಿಜೆಪಿ ಮಹಿಳಾ‌ ಮೋರ್ಚಾ ಅಧ್ಯಕ್ಷೆ ಗಾಯಿತ್ರಿ ಮಲ್ಲಪ್ಪ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಆರೋಪವನ್ನ ಅಲ್ಲಗೆಳೆದಿದ್ದಾರೆ. 

ಸಾಗರದ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲಾತಿ ಜಾರಿಯಾದ ನಿರ್ಧಾರ ಸರಿಯಾಗಿತ್ತು. ಕಾರಣ ಮಹಿಳೆಗೆ ಅಧ್ಯಕ್ಷಸ್ಥಾನ ಸಿಕ್ಕರೆ ಒಬ್ಬ ಮಹಿಳೆಯೆ ತಡೆಯಾಜ್ಞೆ ತಂದರೆ ಎಷ್ಟು ಸರಿ ಎಂದು ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಗಾಯಿತ್ರಿ ಮಲ್ಲಪ್ಪ ಪ್ರಶ್ನಿಸಿದರು.  

ಮಹಿಳಾ ಮೀಸಲಾತಿ ಜಾರಿಗಾಗಿ ಅನೇಕ ಹೋರಾಟ ನಡೆದಿದೆ. ಅನೇಕ ವರ್ಷಗಳೇ ಮೀಸಲಾತಿಗಾಗಿ ಕಾಯಲಾಗಿತ್ತು.  ಮಹಿಳೆಗೆ ಸಿಕ್ಕ ಹಕ್ಕನ್ನ ಮಹಿಳೆಯೇ ತಿರಸ್ಕರಿಸಿ ತಡೆಯಾಜ್ಞೆ ತಂದಿರುವುದು ದುರಾದೃಷ್ಟಕರ ಎಂದು ಅವರು ತಿಳಿಸಿದರು. 

ಮತ್ತೋರ್ವ ಸಾಗರ ನಗರಸಭೆಯ ಬಿಜೆಪಿ ಸದಸ್ಯೆ ಮಧುರಾ ಶಿವಾನಂದ್ ಮಾತನಾಡಿ, ಸಭೆ ನಡೆದಾಗ ಕಾಂಗ್ರೆಸ್ ಮಹಿಳೆಯ ಮೀಸಲಾತಿಯನ್ನ ತಿರಸ್ಕರಿಸಿರುವುದು ಪಕ್ಷದ ನಿಲುವೆ ಅಥವಾ ವೈಯುಕ್ತಿ ವಿಷಯವೇ ಎಂದಾಗ ಸದಸ್ಯೆಯ ವೈಯುಕ್ತಿಕ ಎಂದು ಕಾಂಗ್ರೆಸ್ ಪಕ್ಷದವರೇ ಸ್ಪಷ್ಟಪಡಿಸಿದ್ದರು.  

ಸಭೆಯಲ್ಲಿ ನಗರ ಸಭೆ ಸೆಕ್ಷನ್ ಅಡಿಯಲ್ಲಿರುವ ಕಾಯ್ದೆ ಪ್ರಕಾರ ಸ್ವ ಇಚ್ಚಾಶಕ್ತಿಯಿಂದ ನ್ಯಾಯಾಲಯಕ್ಕೆ ಹೋದ ಸದಸ್ಯರಿಗೆ ಸಭೆಯಲ್ಲಿ ಭಾಗಿಯಾಗುವಂತಿಲ್ಲ ಎಂಬ ಕಾರಣಕ್ಕೆ ಲಲಿತಮ್ಮನವರನ್ನ ಅಧಿಕಾರಿಗಳೇ ತಡೆಹಿಡಿದಿದ್ದರು. ನಮ್ಮ ಅಧ್ಯಕ್ಷರು ಯಾವುದೇ ಕಾರಣಕ್ಕೂ ಅವರಿಗೆ ಅಗೌರವ ತೋರಿಲ್ಲ ಎಂದರು. 

ಈ ವಿಷಯವನ್ನ ಕಾಂಗ್ರೆಸ್ ತಿರುಚಿದೆ. ಜಾತಿಯನ್ನ ಒಳಗೆ ತರುವ ಪ್ರಯತ್ನ ನಡೆದಿದೆ ಎಂದು ದೂರಿದರು. ನಗರಸಭೆಯಲ್ಲಿ ಒಟ್ಟು 30 ಜನರ ಸದಸ್ಯರಿದ್ದರು, 31 ಜನರ ಸದಸ್ಯರಲ್ಲಿ  17 ಜನ‌ಸದಸ್ಯರು ಬಿಜೆಪಿಯವರಿದ್ದಾರೆ. 4 ಜನ ಸ್ವಾತಂತ್ರ್ಯ ಪಕ್ಷದಿಂದ ಆಯ್ಕೆಯಾಗಿದ್ದಾರೆ. 9 ಜನ ಕಾಂಗ್ರೆಸ್ ನವರಿದ್ದಾರೆ. ನಗರಸಭೆಯಲ್ಲಿ ಅಧ್ಯಕ್ಷರಿಲ್ಲದೆ ಎರಡುವರ್ಷ ಕಳೆದಿದೆ. ಅಭಿವೃದ್ದಿ ಕೆಲಸ ನಡೆದಿಲ್ಲ.  ಕಾಂಗ್ರೆಸ್ ಗೆ ಬಹುಮತವಿಲ್ಲವಿದ್ದರೂ ಎಲ್ಲದಕ್ಕೂ ಅಡ್ಡಿ ಪಡಿಸುತ್ತಿದೆ ಎಂದು ದೂರಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು