ಸಲಗ, ಭಾಸ್ಕರ್, ವಿಜಿಗುರು ಹಾಗೂ ಕತ್ತೆಕಾರ್ತಿಕ್ ಕಡೆಯ ಹುಡುಗರ ವಿರುದ್ಧ ಎಫ್ಐಆರ್


ಸುದ್ದಿಲೈವ್/ಶಿವಮೊಗ್ಗ

ಸಲಗ, ಭಾಸ್ಕರ್, ವಿಜಿಗುರು, ಕತ್ತೆ ಕಾರ್ತಿಕನ ಕಡೆ ಹುಡುಗರು ಬಂದು ಜೈಸನ್ ಎಂಬುವನ ಮೇಲೆ ಅಟ್ಯಾಕ್ ಮಾಡಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ರಾಗಿಗುಡ್ಡದ ನಿವಾಸಿ ಜೈಸನ್ ಎಂಬುವರು ತಂದೆಯ ಕಾರ್ಯಕ್ಕೆ ಶಿವಮೊಗ್ಗಕ್ಕೆ ಬಂದಿದ್ದು ತನ್ನ ಸ್ನೇಹಿತನಿಗೆ ಸ್ಟ್ರೋಕ್ ಆಗಿರುವ ಬಗ್ಗೆ ತಿಳಿದು ಸಾಗರ ರಸ್ತೆಯ ಬಳಿಯಿರುವ ಮನೆಗೆ ತೆರಳಿ ಮಾತನಾಡಿಸಿಕೊಂಡು ಅದೇ ರಸ್ತೆಯಲ್ಲಿರುವ ಟೀ ಅಂಗಡಿಗೆ ತೆರಳಿ ಟೀಕುಡಿಯವಾಗ ವಿಕೇಶ್ ಮತ್ತು ಸ್ನೇಹಿತರು ಬಂದಿದ್ದು, ನಂತರ ನಾಲ್ವರು ಸಿಗರೇಟ್ ಸೇದುವಾಗ ಮೂರರಿಂದ ನಾಲ್ಕು ಬೈಕ್ ನಲ್ಲಿ ಬಂದ 6-8 ಜನ ಯುವಕರು ಏಕಾಏಕಿ ಜೈಸನ್ ಮೇಲೆ ಅಟ್ಯಾಕ್ ಮಾಡಿದ್ದಾರೆ. 

ಅಲ್ಲಿಂದ ತಪ್ಪಿಸಿಕೊಂಡು ಹೋದ ಜೈಸನ್ ಗೆ ಎರಡು ಜನ ಬೈಕ್ ನಲ್ಲಿ ಬಂದು ತಡೆದು ಪೈಪ್ ಮತ್ತು ದೊಣ್ಣೆಯಲ್ಲಿ ಅಟ್ಯಾಕ್ ಮಾಡಿದ್ದಾರೆ. ಹೊಡೆತ ಬಿದ್ದ ಕಾರಣ ಜೈಸನ್ ನೆಲಕ್ಕೆ ಬಿದ್ದಿದ್ದಾರೆ. ನಂತರ ಬಂದ ಸಲಗ ಮತ್ತು ಆತನ ಕಡೆ ಹುಡುಗರು ಡಿಸ್ಕವರ್ ಬೈಕ್ ನಲ್ಲಿ ಎತ್ತಿಕೊಂಡು ವಾಜಪೇಯಿ ಲೇಔಟ್ ಬಳಿ ಕರೆದುಕೊಂಡು ಹೋಗಿದ್ದಾರೆ.

ಅಲ್ಲಿ ಜೈಸನ್ ಗೆ ಚೆನ್ನಾಗಿ ಥಳಿಸಿ  ಹಣ ಮತ್ತು ಮೊಬೈಲ್ ಕಿತ್ತುಕೊಂಡು ಜೋಗಿರುವುದಾಗಿ ಜೈಸನ್ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ತಾಯಿಗೆ ಕರೆ ಮಾಡಿದ ಜೈಸನ್ ನನ್ನ ಮೆಗ್ಗಾನ್ ಗೆ ದಾಖಲಿಸಲಸಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಅ.21 ರಂದು ಕಾರ್ತಿಕ್ ಯಾನೆ ಕತ್ತೆ ಕಾರ್ತಿಕ್ ಅವರ ಹುಟ್ಟುಹಬ್ಬವಿದ್ದ ದಿನವೇ ಈ ಅಟ್ಯಾಕ್ ನಡೆದಿದೆ.

ಸಲಗ-ಭಾಸ್ಕರ್-ವಿಜಿಗುರು-ಹಾಗೂ-ಕತ್ತೆಕಾರ್ತಿಕ್-ಕಡೆಯ- ಹುಡುಗರ-ವಿರುದ್ಧ-ಎಫ್ಐಆರ್

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close