ಶ್ರೀಗಂಧ ಕಳ್ಳನ ಬಂಧನ



ಸುದ್ದಿಲೈವ್/ಹಣಗೆರೆ

ಹಣಗೆರೆ ವನ್ಯಜೀವಿ ವಲಯ ಸಿರಿಗೆರೆ ವ್ಯಾಪ್ತಿಯಲ್ಲಿ ದಿನಾಂಕ 5 9 2024 ರಂದು ಅಕ್ರಮ ಶ್ರೀಗಂಧ ಮರಗಳ ಕಡಿತಲೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣದ ಮೂರನೇ ಆರೋಪಿ ವಿಜಯ ಕುಮಾರ ಬಿನ್ ಉಮೇಶ ನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. 

ಪ್ರಕರಣ ದಾಖಲಾದ ನಂತರ ತಲೆಮರಿಸಿಕೊಂಡಿದ್ದ ಈ ವಿಜಯ ಕುಮಾರನನ್ನು ಸಾಗರ ತಾಲೂಕು ಬೆಟ್ಟೆ ಮಲ್ಲಪ್ಪದ ಸಮೀಪ ಹೆಬ್ಬಲು ಗ್ರಾಮದ ಉಮೇಶ್ ಎಂಬುವರ ಮನೆಯಲ್ಲಿ ಬೆಳಗಿನ ಜಾವ ನಾಲ್ಕು ಗಂಟೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿಸಿದ ಆರೋಪಿಯನ್ನು ಘನ ನ್ಯಾಯಾಲಯದ ಸುಪರ್ದಿಗೆ ಒಪ್ಪಿಸಲಾಯಿತು.

ಸದರಿ ಕಾರ್ಯಾಚರಣೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಸನ್ನ ಕೃಷ್ಣಪಟಗಾರ ರವರ ಮಾರ್ಗದರ್ಶನದಂತೆ ವಲಯ ಅರಣ್ಯ ಅಧಿಕಾರಿ ಅರವಿಂದ್ ಪಿ ರವರ ನೇತೃತ್ವದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಶಿವಕುಮಾರ್ ಸುರವನ್ನೇ Dyrfo, ಕುಮಾರ್ ನಾಯ್ಕ್ Dyrfo, ಕೊಟ್ರೇಶ್ ದಾನಮ್ಮನವರ್ BFO, ಬಸವರಾಜ ಜೆ BFO, ಲಕ್ಷ್ಮಣ್ ಇಬ್ರಾಹಿಂಪುರ್ BFO, ಶಿವರಾಜ್ ಡಿ BFO, ಸಂತೋಷ್ ಭಾಗಿಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close