ಸುದ್ದಿಲೈವ್/ಶಿವಮೊಗ್ಗ
ಕಾರಾಗೃಹದಲ್ಲಿ ಗಾಂಜಾ ಓಡಾಟ ನಿರ್ಬಂಧವಾದ ಬೆನ್ನಲ್ಲೇ ಹೊಸಮಾರ್ಗವನ್ನ ಖೈದಿಗಳು ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಿರುವ ಅನುಮಾನ ಶುರುವಾಗಿದೆ.
ಚಿಕಿತ್ಸೆಗಾಗಿ ಬಂದ ವಿಚಾರಣಾಧೀನ ಖೈದಿಯನ್ನ ಭೇಟಿಯಾದ ಕುಟುಂಬಸ್ಥರು ಗಾಂಜಾ ಪಾಸ್ ಮಾಡಿ ಗಾಂಜಾ ಪಾಸ್ ಮಾಡಿದನ್ನ ಗಮನಿಸಿದ ಡಿಎಆರ್ ಪೊಲೀಸರು ತಪಾಸಣೆ ನಡೆಸಿದಾಗ ಧಮ್ಕಿ ಹಾಕಿ ನಂತರ ಘಟನೆಯಿಂದ ಪಾರಾಗಲು ಆರೋಪಿಯು ತಲೆ ತಲೆ ಚಚ್ಚಿಕೊಳ್ಳುವ ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅನಾರೋಗ್ಯದ ಹಿನ್ನಲೆಯಲ್ಲಿ ಮೂರು ಜನ ಸಜಾಬಂದಿ ಹಾಗೂ ಓರ್ವ ವಿಚರಣಾಧೀನ ಖೈದಿಯನ್ನ ಮೆಗ್ಗಾನ್ ಗೆ ಡಿಎಆರ್ ಪೊಲೀಸರು ವಾಹನದಲ್ಲಿ ಕರೆ ತಂದಿದ್ದಾರೆ. ವಿಚಾರಣಾಧೀನ ಖೈದಿಯಾಗಿ ಶೇಖ್ ಅಹಮದ್‌ನನ್ನ ಕರೆತಂದಾಗ ಆತನ ಹೆಂಡತಿಯು ಮತ್ತೋರ್ವ ಅಪ್ರಾಪ್ತ ಬಾಲಕಿಯೊಂದಿಗೆ ಹಿಂಬಾಲಿಸಿಕೊಂಡು ಬಂದಿದ್ದಾರೆ.
ಹಿಂಬಾಲಿಸಿಕೊಂಡು ಬಂದವರು ಯಾರು ಎಂದು ಡಿಎಆರ್ ಪೊಲೀಸರು ಪ್ರಶ್ನಸಿದಾಗ ಹೆಂಡತಿ ಎಂದು ಹೇಳಿದ್ದಾನೆ. ಭೇಟಿಯಾಗಲು ಕೋರಿದ್ದಾನೆ. ಆರೋಗ್ಯ ತಪಾಸಣೆ ನಡೆಸಿ ನಂತರ ಭೇಟಿ ಎಂದು ಪೊಲೀಸರು ತಿಳಿಸಿದ್ದಾರೆ.
ತಪಾಸಣೆ ನಡೆಸುವ ಮಧ್ಯದಲ್ಲಿಯೇ ವಿಚಾರಣಾಧೀನ ಹೆಂಡತಿ ಮುಸ್ಕಾನ್ ಅಪ್ರಾಪ್ತ ಬಾಲಕಿಯ ಮೂಲಕ 50 ಗ್ರಾಂ ಗಾಂಜಾವನ್ನ ಪಾಸ್ ಮಾಡಿಸುವುದನ್ನ ಡಿಎಆರ್ ಪೊಲೀಸ್ ಬಸವರಾಜ್ ಗಮನಿಸಿ ಆತನನ್ನ ಪೊಲೀಸ್ ಓಪಿಗೆ ಕರೆದುಕೊಂಡು ಹೋಗುತ್ತಾರೆ. ವಿಚಾರಣಾಧೀನ ಖೈದಿ ಇಲ್ಲೇಕೆ ಕರೆದುಕೊಂಡು ಬಂದೆ ಎಂದು ಬಸವರಾಜ್ ಮೇಲೆ ಶೇಖ್ ಅಹಮದ್ ಆವಾಜ್ ಹಾಕಿದ್ದಾನೆ.
ಆತನ ಪ್ಯಾಂಟ್ ತಪಸಾಣೆ ಮಾಡಲು ಮುದಾದಾಗ ಶೇಖ್ ಅಹಮದ್ ಪ್ಯಾಂಟನ್ನೇ ಸಡಿಲಗೊಳಿಸಿಕೊಂಡ ಪರಿಣಾಮ ಅದು ಬಲ ಕಾಲಿನ ಪ್ಯಾಂಟಿನ ತೋಳಿನಿಂದ ಕೆಳಕ್ಕೆ ಬಿದ್ದಿದೆ. ಕವರ್ ನಲ್ಲಿದ್ದ ಗಾಂಜಾ ಪತ್ತೆಯಾಗಿದೆ. ಮುಂದೆ ಮತ್ತೆ ತೊಂದರೆ ಉಂಟಾಗಲಿದೆ ಎಂದು ಶೇಖ್ ಅಹಮದ್ ಆಸ್ಪತ್ರೆಯ ಗೋಡೆಗೆ ತಲೆ ಜಜ್ಜಿಕೊಂಡು ರಕ್ತಗಾಯ ಮಾಡಿಕೊಂಡಿದ್ದಾನೆ. ಆತನ ಹುಚ್ಚಾಟವನ್ನ ಪೊಲೀಸರು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಈತನನ್ನ ಮತ್ತು ಆತನ ಹೆಂಡತಿ ಅಪ್ರಾಪ್ತೆ ಬಾಲಕಿಯನ್ನ ದೊಡ್ಡಪೇಟೆ ಪೋಲಿಸ್ ಠಾಣೆಗೆ ಕರೆದುಕೊಂಡು ಹೋದಾಗಲೂ ಶೇಖ್ ಅಹಮದ್ ತಲೆ ಜಜ್ಜಿಕೊಳ್ಳಲು ಆರಂಭಿಸಿದ್ದಾನೆ. ನಂತರ ಪೊಲೀಸರೆ ಬಿಡಿಸಿ ದೂರು ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಇಂತಹ ಪ್ರಕರಣಗಳು ನಡೆದಿದೆ. ಈ ವೇಳೆ ಡಿಎಆರ್ ಪೊಲೀಸರು ಸಸ್ಪೆಂಡ್ ಆಗಿರುವ ಉದಾಹರಣೆಯೂ ಇದೆ.
ಇಂತಹ ಪ್ರಯತ್ನಗಳು ಹಿಂದಿನಿಂದ ನಡೆದಿದೆ. ಈ ಅಂಶ ಗಮನಿಸಿದರೆ ಗಾಂಜಾ ಸೇದಲು ಖೈದಿಗಳು ಹೊಸ ಮಾರ್ಗವನ್ನೇ ಕಂಡುಕೊಂಡಿರುವಂತೆ ಕಾಣುತ್ತಿದೆ. ಡಿಎಆರ್ ಪೊಲೀಸ್ ಕಾನ್ ಸ್ಟೇಬಲ್ ಬಸವರಾಜ್ ಈ ವಿಚಾರದಲ್ಲಿ ಖಡಕ್ ಕರ್ತವ್ಯನಿರ್ವಹಿಸಿದ್ದಾರೆ.