ಸುದ್ದಿಲೈವ್/ಶಿವಮೊಗ್ಗ
ಗಜಗಾಂಭೀರ್ಯದಿಂದ ಅಂಬಾರಿ ಹೊತ್ತ ಸಾಗರದ ಆನೆ ಬನ್ನಿಮಂಟಪದತ್ತ ಸಾಗಿದೆ. ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಏ ವೃತ್ತ, ನೆಹರೂ ರಸ್ತೆ, ದುರ್ಗಿಗುಡಿ, ಜೈಲ್ ವೃತ್ತ, ಜೈಲ್ ರಸ್ತೆ ಮೂಲಕ ಫ್ರೀಡಂ ಪಾರ್ಕ್ ಬಳಿ ಅಂಬಾರಿ ಮೆರವಣೆಗೆ ಫ್ರೀಡಂ ಪಾರ್ಕ್ ಕಡೆ ಸಾಗಿ ಬಂದಿದೆ.
ಬನ್ನಿ ಮಂಟಪದಲ್ಲಿ ಅಂಬುಕಡಿಯುವ ದೃಶ್ಯ ಕಣ್ಣು ತುಂಬಿಸಿಕೊಳ್ಳಲು ಜನ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದಾರೆ. ಈ ಹಾರಿ 2-15 ಗಂಟೆಯಲ್ಲಿ ಕೋಟೆ ಶಿವಪ್ಪ ನಾಯಕ ಅರಮನೆಯಿಂದ ಫ್ರೀಡಂ ಪಾರ್ಕ್ ಗೆ ಮೆರವಣಿಗೆ ಸಾಗಿ ಬಂದಿದೆ.
ಮೆರವಣೆಗೆಯ ಉದ್ದಕ್ಕೂ ಶಾಸಕರು, ಸಚಿವರು ಪಾಲಿಕೆ ಆಯುಕ್ತರು, ಪಾಲಿಕೆ ವೈದ್ಯರು ಅಧಿಕಾರಿಗಳು ಸಾಗಿ ಬಂದಿದ್ದಾರೆ. ಮೆರವಣಿಗೆಗೆ ಅಲ್ಲಲ್ಲಿ ಜನ ಮನೆಯ ಮುಂದೆ ನೀರು ಹಾಕಿ ರಂಗೋಲಿ ಹಾಕಿರುವ ದೃಶ್ಯ ಕಂಡು ಬಂದಿದೆ.
ಮಳೆ
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಶಿವಮೊಗ್ಗ ನಗರದಲ್ಲಿ ಮಳೆಯ ಆತಂಕ ಇಂದು ಸಹ ಹೆಚ್ಚಿಸಿದೆ. ಮಳೆ ಬರುವ ಮುನ್ನ ಅಂಬು ಕಡಿಯುವ ನಿರೀಕ್ಷೆ ಇದೆ. ಆದರೆ ಮಳೆ ಈಗಾಗಲೇ ಸಣ್ಣಕ್ಕೆ ಸುರಿಯುತ್ತಿರುವುದರಿಂದ ಕಾರ್ಯಕ್ರಮ ಕುತೂಹಲದತ್ತ ಸಾಗಿದೆ.