ಸುದ್ದಿಲೈವ್/ಭದ್ರಾವತಿ
ಭದ್ರಾವತಿಯ ಸುಲ್ತಾನ್ ಮಟ್ಟಿಯಲ್ಲಿ ವಿಷ ಸೇವಿಸಿದ ವ್ಯಕ್ತಿ ಮೆಗ್ಗಾನ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷತನದಿಂದ ಸತ್ತಿರುವ ಕುರಿತು ಅವರ ಸಹೋದರ ಆರೋಪಿಸಿದ್ದಾರೆ.
ಸುಲ್ತಾನ್ ಮಟ್ಟಿದ ಸ್ವಾಮಿನಾಥನ್ (55) ವರ್ಷದ ವ್ಯಕ್ತಿ ರೈತ ಕೂಲಿ ಕಾರ್ಮಿಕನಾಗಿದ್ದು, ಕೂಲಿ ಕಾರ್ಮಿಕರಾದ ಸ್ವಾಮಿ ನಾಥನ್ ಅಧಿಕ ಸಾಲ ಮಾಡಿದ ಪರಿಣಾಮವಾಗಿ ಮೊನ್ನೆದಿನ ಆಸ್ಪತ್ರೆಗೆ ಕರತರಾಗಿತ್ತು.
ವಿಷ ಸೇವಿಸುವವರಿಗೆ ಉಪ್ಪು ನೀರು ಕುಡಿಸಿ ವಾಂತಿ ಮಾಡಿಸಲಾಗುತ್ತದೆ. ಆದರೆ ಈ ಉಪ್ಪೇ ಖಾಲಿಅಗಿದ್ದರ ಪರಿಣಾಮ ಉಪ್ಪು ತರುವುದನ್ನ ತಡಮಾಡಿದ ಹಿನ್ನಲೆಯಲ್ಲಿ ಸ್ವಾಮಿನಾಥನ್ ಅಸುನೀಗಿದ್ದಾನೆ.
ಮೊನ್ನೆ ಸಂಜೆ 7 ಗಂಟೆಗೆ ಸ್ವಾಮಿನಾಥನ್ ಅವರನ್ನ ಮೆಗ್ಗಾನ್ ಗೆ ಕರೆತರಲಾಗಿತ್ತು. ಉ್ಪು ಖಾಲಿಯಾಗಿದ್ದು ತರುವುದಾಗಿ ಹೇಳಿದ ಸಿಬ್ಬಂದಿ ರಾತ್ರಿ 8-30 ಸುಮಾರಿಗೆ ಬಂದಿದ್ದಾನೆ. ಉಪ್ಪು ಇಲ್ಲದ ಕಾರಣ ಸಹೋದರ ಸತ್ತಿದ್ದಾನೆ. ಮೆಗ್ಗಾನ್ ವೈದ್ಯರು ಮತ್ತು ಸಿಬ್ಬಂದಿಗಳ ನಿರ್ಲಕ್ಷತನದಿಂದ ಸ್ವಾಮಿನಾಥನ್ ಸಾತ್ತಿರುವುದಾಗಿ ಸಹೋದರ ಆರೋಪಿಸಿದ್ದಾರೆ.