ಪ್ರಜಾಪ್ರಭುತ್ವವನ್ನ ಅಸ್ಥಿರಗೊಳಿಸುತ್ತಿರುವ ಕೋಮುವಾದಿ ಶಕ್ತಿಗಳ ವಿರುದ್ದ ದಲಿತ ಸಂಘರ್ಷ ಸಮಿತಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಜನಾಂದೋಲ ನಡೆಸಿದೆ.
ಜನತೆಯ ನೆನ್ಮದಿ ಕೆಡೆಸಿ ಗೋದ್ರಾ, ಪುಲ್ವಾಮಾದಂತಹ ದಾಳಿ ನಡೆಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಮಾಡಿರುವುದಾದರೂ ಏನು ಎಂದು ಪ್ರಶ್ನಿಸಿರುವ ದಲಿತ ಸಂಘರ್ಷ ಸಮಿತಿ, ಸಿಎಎ, ಎನ್ ಆರ್ ಸಿ, ಎಡಬ್ಲೂಎಸ್ ನಂತಹ ಜನ ವಿರೋಧಿ ಕಾನೂನನ್ನ ಜಾರಿಗೆ ತಂದಿತು.
2023 ರಲ್ಲಿ ಜನವಿರೋಧಿಯಾಗಿದ್ದ ಬಿಜೆಪಿಯನ್ನ ತಿರಸ್ಕರಿಸಿದ ಜನ ಕಾಂಗ್ರೆಸ್ ಗೆ ಬಹುಮತ ನೀಡಿದ್ದರು. ಆದರೆ ಬಿಜೆಪಿ ಜೆಡಿಎಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಲೋಕಸಭೆ ಚುನಾವಣೆಯಲ್ಲಿ ಮುಖಭಂಗವಾಗಿತ್ತು. ಅಹಿಂದ ಶಕ್ತಿಗಳು ಮುನ್ನೆಲೆಗೆ ಬಂದ ಪರಿಣಾಮ ಕೋಮುವಾದಿ, ಜಾತಿವಾದಿ ಶಕ್ತಿಗಳನ್ನ ಸಹಿಸದ ಬಿಜೆಪಿ ಬಹುಮತವಿರುವ ಕಾಂಗ್ರೆಸ್ ಸರ್ಕಾರವನ್ನ ಅಸ್ಥಿತಮರಗೊಳಿಸುವ ಹುನ್ನಾರ ನಡೆಸಿದೆ.
ಮೂಡಾ ಹಗರಣವನ್ನ ಹುಟ್ಟುಹಾಕಿದೆ. ಸಿದ್ದರಾಮಯ್ಯನವರನ್ನ ತೇಜೋವಧೆ ಮಾಡಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಸಂಚು ಬಯಲಾಗುತ್ತಿದೆ. ಈ ಎರಡೂ ಮೈತ್ರಿಪಕ್ಷಗಳು ಹಾದಿರಂಪ ಬೀದಿ ರಂಪ ಮಾಡುವುದನ್ನ ನಿಲ್ಲಿಸಬೇಕು ಎಂದು ಡಿಸಿ ಮೂಲಕ ರಾಷ್ಟ್ರಪತಿಗಳಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಲಾಯಿತು.