ಸುದ್ದಿಲೈವ್/ಶಿವಮೊಗ್ಗ
ಕೂಡಲಿ ಶ್ರೀ ಶೃಂಗೇರಿ ಶಾರದಾ ಪೀಠದಲ್ಲಿ ಕಳೆದ ತೊಂಬತ್ತು ದಿನಗಳಿಂದ ಋಗ್ವೇದ ಘನಪಾರಾಯಣ ನಡೆಸಿದ ವೇದಭ್ರಹ್ಮಶ್ರೀ ಚಂದ್ರಮೌಳಿ ಘನಪಾಠಿ ಅವರಿಗೆ ಶಿವಮೊಗ್ಗ ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ನಿನ್ನೆ ನಡೆದ ನಾಗರಿಕ ಸನ್ಮಾನ ಸಮಾರಂಭದಲ್ಲಿ ಶ್ರೀ ಶಾರದಾ ಫೌಂಡೇಶನ್ ವತಿಯಿಂದ ಹತ್ತು ಲಕ್ಷ ರೂಪಾಯಿಗಳ ಗೌರವ ಧನ ನೀಡಿ ಶ್ರೀ ಶೃಂಗೇರಿ ಶಾರದಾ ಪೀಠದ ಪೀಠಾಧೀಶರಾದ ಶ್ರೀ ಅಭಿನವ ಶಂಕರ ಮಹಾಸ್ವಾಮಿಗಳು ಆಶೀರ್ವದಿಸಿದರು.
ಸಭೆಯಲ್ಲಿ ಮಾತನಾಡಿದ ಶ್ರೀಗಳು ಭಾರತೀಯ ಶ್ರೀಮಂತ ಪರಂಪರೆಯ ಮತ್ತು ಸನಾತನ ಧರ್ಮದ ಸಾರವಾದ ವೇದಗಳನ್ನು ಅನಿವಾರ್ಯವಾಗಿ ರಕ್ಷಿಸಬೇಕಾದ ಮತ್ತು ಅದನ್ನು ವಿದ್ಯಾರ್ಥಿಗಳಿಗೆ ಕಲಿಸಲೇಬೇಕಾದ ಅನಿವಾರ್ಯತೆಯನ್ನು ಮಾರ್ಮಿಕವಾಗಿ ತಿಳಿಸಿದರು.
ಉತ್ತಮ ಆಹಾರಕ್ಕಾಗಿ ಶ್ರೇಷ್ಠ ಬೀಜಗಳನ್ನು ರಕ್ಷಿಸದಿದ್ದರೆ ಭವಿಷ್ಯದಲ್ಲಿ ಹೇಗೆ ಆಹಾರ ಸತ್ವಯುತ ಮತ್ತು ಶಕ್ತಿಯುತವಾಗಿ ಇರಲಾರದೊ ಹಾಗೆಯೇ ವೇದಗಳು ಭಾರತೀಯ ಪರಂಪರೆಯ ರಕ್ಷಣೆಗೆ ಅನಿವಾರ್ಯವಾ ಭೌತಿಕ ಆಹಾರವೆಂದು ಹೇಳಿದರು.
ಸಭೆಗೂ ಮುನ್ನ ನಡೆದ ಘನಪಾಠಿಗಳ ಮೆರವಣಿಗೆಯಲ್ಲಿ ಮತ್ತು ನಂತರ ನಡೆದ ಸಭೆಯಲ್ಲಿ ಅಪಾರ ಸಂಖ್ಯೆಯ ವೇದಾಭಿಮಾನಿಗಳು ಹಾಜರಿದ್ದರು.