ದಸರ ಅಂಗವಾಗಿ ಇಂದು ವಿವಿಧ ಕಾರ್ಯಕ್ರಮಗಳು


 ಸುದ್ದಿಲೈವ್/ಶಿವಮೊಗ್ಗ

ನವರಾತ್ರಿಯ ಮೂರನೇ ದಿನವಾದ ಇಂದು ನಗರದಲ್ಲಿ ದಸರಾ ಆಚರಣೆಗಾಗಿ ಹಲವು ಕಾರ್ಯಕ್ರಮ ಜರುಗಲಿದೆ. ಬೆಳಿಗ್ಗೆ 8:00ಗೆ ವೀರಭದ್ರೇಶ್ವರ ಸಿನಿಮಾ ಮಂದಿರದಲ್ಲಿ ಚಲನಚಿತ್ರ ದಸರಾ ನಿಮಿತ್ತ ಟಗರುಪಲ್ಯ ಸಿನಿಮಾ ಉಚಿತ ಪ್ರದರ್ಶನಗೊಳ್ಳಲಿದೆ. 

ನಂತರ 9:00: ಸೈನ್ಸ್ ಮೈದಾನದಲ್ಲಿ ರಂಗದಸರಾ ಉದ್ಘಾಟನೆ. ಅಲ್ಲಿಂದ ರಂಗಮಂದಿರದವರೆಗೆ ಮೆರವಣಿಗೆ. ನಂತರ ಸಭಾ ಕಾರ್ಯಕ್ರಮ. 10:00: ನೆಹರು ಮೈದಾನದಲ್ಲಿ 14 ವರ್ಷದೊಳಗಿನ  ಶಾಲಾ ಬಾಲಕ- ಬಾಲಕಿಯರ ಜಿಲ್ಲಾ ಕ್ರೀಡಾಕೂಟ.

10:00ಗೆ ಅಂಬೇಡ್ಕರ್ ಭವನದಲ್ಲಿ  ಚಲನಚಿತ್ರ ರಸಗ್ರಹಣ ಶಿಬಿರ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನ ರಾಷ್ಟ್ರೀಯ ಪ್ರಶಸ್ತಿ‌ ಪುರಸ್ಕೃತ ನಿರ್ದೇಶಕ   ಡಿ. ಸತ್ಯಪ್ರಕಾಶ್ ನೆರವೇರಿಸಲಿದ್ದಾರೆ. 

ಮಧ್ಯಾಹ್ನ 2:00 ಗೆ ಪಾಲಿಕೆ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಯುವ ಸಂಸತ್ ಕಾರ್ಯಕ್ರಮ ಜರುಗಲಿದೆ. ಸಂಜೆ 5:00 ಗೆ ಅಂಬೇಡ್ಕರ್ ಭವನದಲ್ಲಿ   ಮಕ್ಕಳ ದಸರಾ. ಜಾನಪದ ಹಾಡು, ನೃತ್ಯ. ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನ ರಾಷ್ಟ್ರೀಯ ಚೆಸ್ ಪಟು ಸಮರ್ಥ ಪೂಜಾರ್ ನೆರವೇರಿಸಲಿದ್ದಾರೆ. 

ನಂತರ ಕುವೆಂಪು ರಂಗಮಂದಿರದಲ್ಲಿ 5:30: ರಂಗ ದಸರಾ ಮತ್ತು ರಂಗಚಲನಚಿತ್ರ ಪ್ರದರ್ಶನ ನಡೆಯಲಿದ್ದು, ಇದರ ಉದ್ಘಾಟನೆಯನ್ನ ‌ನೀನಾಸಂ ಪ್ರಾಧ್ಯಾಪಕ ಮಂಜು ಕೊಡಗು ಅವರಿಂದ ನೆರವೇರಲಿದೆ. ಸಂಜೆ 7:30ಕ್ಕೆ  ರಂಗಗೀತೆಗಳ ಗಾಯನ. 50 ವಿದ್ಯಾರ್ಥಿಗಳಿಂದ  ಏಕಕಾಲದಲ್ಲಿ ಹಾಡಲಿದ್ದಾರೆ.  ನಂತರ ಸಾರ್ವಜನಿಕರಿಂದಲೂ ರಂಗಗೀತೆಗಳ ಗಾಯನ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close