ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಮ್ಯೂಸಿಕಲ್ ನೈಟ್ಸ್ ಆರಂಭಕ್ಕೂ ಮುನ್ನ ಫ್ರೀಡಂ ಪಾರ್ಕ್ ನಲ್ಲಿ ನೋಡಲು ನೆರೆದಿದ್ದ ಸಾರ್ವಜನಿಕರಿಂದ ಪಾಲಿಕೆ, ಅಧಿಕಾರಿಗಳು ಮತ್ತು ಪೋಲಿಸರ ವಿರುದ್ಧ ದಿಕ್ಕಾರ ಕೂಗಲಾಗಿದೆ.
ದಸರಾ ಅಂಗವಾಗಿ ಇಂದು ಫ್ರೀಡಂ ಪಾರ್ಕ್‌ನಲ್ಲಿ ಪಾಲಿಕೆವತಿಯಿಂದ ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗಾಯಕ ರಾಜೇಶ್ಕೃಷ್ಙನ್, ಡಾ.ಶಮಿತಾ ಮಲ್ನಾಡು ತಂಡದವರಿಂದ ಗಾಯನ ಕಾರ್ಯಕ್ರಮ ನಡೆಯಬೇಕಿತ್ತು. ಕಾರ್ಯಕ್ರಮದ ಆರಂಭಕ್ಕೂ ಮುಂಚೆ ಮಳೆ ಬಿದ್ದಿದೆ.
ಮಳೆ ಬೀಳುವ ವೇಳೆ ಜನ ಛತ್ರಿ, ಚೇರುಗಳನ್ನ ತಲೆ ಮೇಲೆ ಹಿಡಿದು ಕಾರ್ಯಕ್ರಮ ನೋಡಲು ಜನ ಸೇರಿದ್ದರು. ಮಳೆ ಬೀಳುವ ಸಂಭವ ಇದ್ದರೂ ಜನರಿಗೆ ರಕ್ಷಣೆಗೆ ಪೆಂಡಾಲ್ ನಿರ್ಮಿಸದ ಅಧಿಕಾರಿಗಳು ಕೇವಲ ವಿಐಪಿಗಳಿಗೆ ಪೆಂಡಾಲ್ ನಲ್ಲಿ ಕೂರಿಸೊರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮಳೆಯಿಂದ ರಕ್ಷಣೆ ಕೊಡದ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರಿಗೆ ದಿಕ್ಕಾರ ಕೂಗಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಅಧ್ಯಕ್ಷ ಮಧು ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
ಶಾಸಕರಿಗೆ ಜಯಘೋಷಣೆ
ಮಳೆಯಲ್ಲೆ ನಿಂತು ಮ್ಯೂಸಿಕಲ್ ನೈಟ್ ವೀಕ್ಷಿಸುತ್ತಿದ್ದ ಜನರಿಗೆ ಶಾಸಕ ಚನ್ನಬಸಪ್ಪ ಅವರು ವೇದಿಕೆಗೆ ಆಗಮಿಸಿ ಸಾರ್ವಜನಿಕರಿಗೆ ಒಳ ಪ್ರವೇಶಕ್ಕೆ ಅನುಮತಿ ನೀಡಿದರು. ಜನರು ಸಂತಸದಿಂದ ಶಾಸಕರಿಗೆ ಚಪ್ಪಾಳೆ ಹೊಡೆಯುವ ಮೂಲಕ ಅಭಿನಂದಿಸಿದರು.