ಬನ್ನಿ ಕಡೆಯುವ ಮಂಟಪದ ಮೇಲೆ ರಾಜಕಾರಣಿಗಳ ಶಕ್ತಿ ಪ್ರದರ್ಶನಕ್ಕೆ ಬ್ರೇಕ್ ಹಾಕಿ-ಸಾಮಾನ್ಯ ನಾಗರೀಕ ಒಕ್ಕೂಟ ಆಗ್ರಹ


ಸುದ್ದಿಲೈವ್/ಶಿವಮೊಗ್ಗ

ನಾಡ ದಸರಾದಲ್ಲಿ ದೇವಿಯ ಮತ್ತು ಬನ್ನಿ ಕಡಿಯುವ ಮಂಟಪದ ಮೇಲೆ  ರಾಜಕಾರಣಿಗಳ ಶಕ್ತಿ ಪ್ರದರ್ಶನಕ್ಕೆ ನಿರ್ಭಂಧಿಸುವಂತೆ ಆಗ್ರಹಿಸಿ ಇಂದು ಸಾಮಾನ್ಯ  ನಾಗರೀಕರ ಒಕ್ಕೂಟ ಇಂದು ಡಿಸಿಗೆ ಮನವಿ ಸಲ್ಲಿಸಿದೆ.‌

ಶಿವಮೊಗ್ಗ ದಸರಾ ಹಾಗೂ ಬನ್ನಿ ಕಡಿಯುವ ಸಂದರ್ಭದಲ್ಲಿ ಲಕ್ಷಾಂತರ ಜನ ಫ್ರೀಡಂ ಪಾರ್ಕ್ ನಲ್ಲಿ ಜಮಾವಣೆಯಾಗಿ ದೇವತೆಗಳ ದರ್ಶನ ಹಾಗೂ ಬನ್ನಿ ಕಡೆಯುವ ದೃಶ್ಯವನ್ನ ನೋಡಲು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಪ್ರತಿ ವರ್ಷವೂ ಬನ್ನಿ ಮಂಟಪವು ಅಲಂಕಾರದೊಂದಿಗೆ ಸಿಂಗಾರಗೊಂಡು ಅದ್ಭುತವಾಗಿ ಕಾಣುತ್ತಿರುತ್ತದೆ ಬನ್ನಿ ಮಂಟಪವನ್ನು ವೀಕ್ಷಣೆ ಮಾಡಲೆಂದು ಫ್ರೀಡಂ ಪಾರ್ಕ್ ನಲ್ಲಿ ಜನ‌ ಸೇರಿರುತ್ತಾರೆ.  

ಸೇರುವಂತಹ ಎಲ್ಲರೂ ಸಹ ಜನಜಂಗುಳಿಯಲ್ಲಿ ಕಾತುರದಿಂದ ಕಾಯುತ್ತಿರುತ್ತಾರೆ. ಆದರೆ ಪ್ರತಿ ವರ್ಷ ರಾಜಕಾರಣಿಗಳು ಹಾಗೂ ಅವರ ಹಿಂಬಾಲಕರು ವೇದಿಕೆ ಮೇಲೆ ಹೋಗಿ ನಿಂತುಕೊಂಡು ಜನರಿಗೆ  ಕೈಬೀಸಿ ಫೋಸುಕೊಡುವವರೆ ಹೆಚ್ಚಾಗಿದ್ದಾರೆ.  

ನಾ ಮುಂದೆ ತಾ ಮುಂದೆ ಎಂದು ಹಾತೊರೆದು ಶಕ್ತಿ ಪ್ರದರ್ಶನ ಮಾಡುವುದರಿಂದ ನೆರೆದಿರುವ ಜನಕ್ಕೆ ಬೇಸರ ಉಂಟಾಗುವಂತೆ ಮಾಡಿ ರಾಜಕೀಯ ವ್ಯಕ್ತಿಗಳು ಧಾರ್ಮಿಕ ಕಾರ್ಯಕ್ರಮದ ವೈಭವವನ್ನು ಕುಂಠಿತಗೊಳಿಸುತ್ತಿದ್ದಾರೆ. ಶಿವಮೊಗ್ಗ ದಸರಾ ಬನ್ನಿ ಕಾರ್ಯಕ್ರಮಕ್ಕೆ ತನ್ನದೇ ಆದ ಇತಿಹಾಸವಿದೆ ಈ ಕಾರ್ಯಕ್ರಮವು ಸಾರ್ವಜನಿಕ ಧಾರ್ಮಿಕ ಕಾರ್ಯಕ್ರಮವಾಗಿದ್ದು, ರಾಜಕೀಯ ವೇದಿಕೆ ಅಲ್ಲ. ಹಾಗಾಗಿ ಫ್ರೀಡಂ ಪಾರ್ಕ್‌ಲ್ಲಿ ನೂರಾರು ಉತ್ಸವ ದೇವತೆಗಳ ಮುಂದೆ ಲಕ್ಷಾಂತರ ಭಕ್ತಾದಿಗಳ ಮುಂದೆ ಎಲ್ಲಾ ಪಕ್ಷದ ರಾಜಕೀಯ ಮುಖಂಡರು ಅವರ ಹಿಂಬಾಲಕರು ತೋರುವ ಪ್ರದರ್ಶನ ಹಾಸ್ಯಸ್ಪದ ಹಾಗೂ ಶಿವಮೊಗ್ಗದ ಇತಿಹಾಸಕ್ಕೆ ಮುಜುಗರ ಉಂಟಾಗುವ ವಿಚಾರವಾಗಿದೆ ಎಂದು ಖಂಡ ತುಂಡವಾಗಿ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ. 

ಕ್ಷೇತ್ರದ ಜನಪ್ರತಿನಿಧಿಗಳಾದ ಲೋಕಸಭಾ ಸದಸ್ಯರು, ಮಂತ್ರಿ, ವಿಧಾನಸಭೆ ಶಾಸಕರು, ವಿಧಾನ ಪರಿಷತ್ ಶಾಸಕರು, ಸೂಡಾ ಅಧ್ಯಕ್ಷರಿಗೆ ಹಾಗೂ ಉನ್ನತ ದರ್ಜೆಯ  ಕಾರ್ಯಾಂಗ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪುರೋಹಿತರನ್ನು, ಹೊರತುಪಡಿಸಿ ಯಾರಿಗೂ ಅವಕಾಶ ಮಾಡಿಕೊಡದೆ ಸೇರುವಂತಹ ಲಕ್ಷಾಂತರ ಭಕ್ತಾದಿಗಳ ಬೇಡಿಕೆಯನ್ನು ಈಡೇರಿಸಿ ಧಾರ್ಮಿಕ ಕಾರ್ಯಕ್ರಮವನ್ನು ಈ ಬಾರಿ ಯಶಸ್ವಿಗೊಳಿಸ ಕೊಡಬೇಕೆಂದು ಒಕ್ಕೂಟ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ವಕೀಲರಾದ ಸುರೇಶ್ ಬಾಬು ,ವಕೀಲರಾದ ನಿರಂಜನ್, ತಿಪ್ಪೇಶ್, ಮೋಹನ್ ,ಯಶವಂತ್ ಶೆಟ್ಟಿ, ಕಾರ್ತಿಕ್,ವಿಶ್ವನಾಥ್ ,ರಾಜು, ಸಿದ್ದು, ಗುರು, ಇತರರಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close