Girl in a jacket

ಮಳೆಗೆ ಸಭೆ-ಅಧಿಕಾರಿಗಳ ವಿರುದ್ಧ ಆಕ್ರೋಶ



ಸುದ್ದಿಲೈವ್/ಶಿವಮೊಗ್ಗ

ಶುಕ್ರವಾರ ಸಂಜೆ ತಾಲೂಕಿನಾದ್ಯಂತ ಸುರಿದ ಮಹಾಮಳೆಯಿಂದಾಗಿ ಭಾರಿ ನಷ್ಟವುಂಟಾದ ಹಿನ್ನಲೆಯಲ್ಲಿ ಸೋಮವಾರ ನಗರಸಭೆ ವತಿಯಿಂದ ಮುಂದೆ ಅನಾಹುತಾವಾಗದಂತೆ ಎಚ್ಚರಿಕೆ ವಹಿಸಲು ವಿವಿಧ ಇಲಾಖೆಗಳ ಮತ್ತು ಸಾರ್ವಜನಿಕರ ಸಭೆಯನ್ನು ನಗರಸಭೆ ಪ್ರಭಾರ ಅಧ್ಯಕ್ಷ ಎಂ. ಮಣಿ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.

ಅಧಿಕಾರಿಗಳು ಸೊಂಬೆರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸವನ್ನು ಮಾಡದೇ ಸಾರ್ವಜನಿಕ ರಿಂದ ನಗರಸಭೆ ಸದಸ್ಯರನ್ನು ದೂಷಿಸುವಂತೆ ಮಾಡುತ್ತಾರೆ ಎಂದು ಅಧ್ಯಕ್ಷ ಎಂ.ಮಣಿ ಅಕ್ರೋಶ ವ್ಯಕ್ತಪಡಿಸಿದರು.ನಗರದಲ್ಲಿ ರಸ್ತೆಗಳಲ್ಲಿ ಅಗಿರುವ ಗುಂಡಿಗಳನ್ನು ಮುಚ್ಚಲು ಹಣಕಾಸಿನ ಮುಂಗಡ ಅಯೋಜನೆ ಎನ್ನುತ್ತಾರೆ. ತಮಗೆ ಒಂದು ಲಕ್ಷ ಹಣ ಕೊಡಿ ನಗರದಾದ್ಯಂತ ಅಗಿರುವ ಗುಂಡಿಗಳನ್ನು ಮುಚ್ಚಿಸುವುದಾಗಿ ತಿಳಿಸಿದರು. ತಮ್ಮ ಕಛೇರಿಯಲ್ಲಿ ಕೆಟ್ಟು ನಿಂತಿರುವ ಜೆ.ಸಿ.ಬಿ. ಯನ್ನು ಸರಿಪಡಿಸಬಹುದು, ಅದರೆ ಅಧಿಕಾರಿಗಳನ್ನು ಸರಿಪಡಿಸಲಾಗುವುದಿಲ್ಲ ಎಂದರು.

  ಸದಸ್ಯ ಬಿಕೆ. ಮೋಹನ್ ಮಾತನಾಡಿ, ನಗರದ ಪ್ರತಿ ಚರಂಡಿಯಲ್ಲಿ ನೀರು ಹರಿಯಲು ಸಾಧ್ಯವಾಗದ ರೀತಿ ಹೂಳು ತುಂಬಿದೆ. ಇದರೊಂದಿಗೆ ಓ.ಎಫ್. ಸಿ. ವೈರ್ ಗಳ ಅಡ್ಡಿಯಿಂದಾಗಿ ಚರಂಡಿಯಲ್ಲಿ ಕಸ ಸಿಕ್ಕಿ ಹಾಕಿಕೊಂಡಿರುತ್ತದೆ. ಅದರೆ ಸಂಬಂಧಿಸಿದ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ, ಅದರಿಂದ ಸಮಸ್ಯೆ ಹೆಚ್ಚಿದೆ ಎಂದರು. ಪ್ರತಿಬಾರಿ ಮಳೆಯಿಂದ ಸಮಸ್ಯೆಯಾದಾಗ ಸಭೆ ನಡೆಸುತ್ತೇವೆ ಅದರೆ ಅಧಿಕಾರಿಗಳು ಸ್ಪಂದಿಸದೆ ಸಾರ್ವಜನಿಕರು ನೋವನ್ನು ಅನುಭವಿಸುತ್ತಾರೆ. ಈಗಲಾದರು ಸಮಸ್ಯೆಗೆ ಪರಿಹಾರ ಕಂಡು ಹಿಡಿಯಿರಿ ಎಂದರಲ್ಲದೆ, ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿಗಳು ಮೌಕಿಕ ಅದೇಶ ನೀಡಿದ ಕೂಡಲೇ ಹಣದ ಲೆಕ್ಕಚಾರವನ್ನು ಬದಿಗೊತ್ತಿ ಗುಂಡಿಗಳನ್ನು ಅಲ್ಲಿನ ಮಹಾನಗರಪಾಲಿಕೆ ತುರ್ತು ಕ್ರಮ ಕೈಗೊಳ್ಳುವ ಮೂಲಕ ಜನರ ಜೀವ ಹಾನಿಯಾಗದಂತೆ ಕಾಪಾಡಿತು. ಅದರೇ ಇಲ್ಲೆಕಿಲ್ಲ ಎಂದು ಪ್ರಶ್ನಿಸಿದರು. 

 ಕಳೆದ ವರ್ಷ ತಾವು ತಮ್ಮ ವಾರ್ಡಿಗೆ ಸಂಬಂಧಿಸಿದಂತೆ ಮಳೆನೀರು ಸರಾಗವಾಗಿ ಹರಿಯಲು ಲೋಕೋಪಯೋಗಿ ಇಲಾಖೆಗೆ ಅರ್ಜಿಯೊಂದನ್ನು ಕೊಟ್ಟಿದ್ದರು ಸಹಾ ಇದುವರೆವಿಗೆ ಕ್ರಮ ಜರುಗಿಸದ ಕಾರಣ ಇತ್ತಿಚೆಗೆ ಪುನ: ಸಮಸ್ಯೆ ಯಾಯಿತು ಎಂದು ಸದಸ್ಯೆ ಅನುಸುಧಾ ಮೋಹನ್ ಪಳನಿ  ಅಧಿಕಾರಿಗಳ ಮೇಲೆ  ಹರಿಹಾಯ್ದರು. 

ಸದಸ್ಯ ಚನ್ನಪ್ಪ ಮಾತನಾಡಿ ಬಿಹೆಚ್. ರಸ್ತೆಯ ಮುಖ್ಯ ಬಸ್ ನಿಲ್ದಾಣದ ಬಳಿ ನಿರ್ಮಿಸಿರುವ ರಾಜಾಕಾಲುವೆ ಕಾಮಗಾರಿ ಅರ್ದಕ್ಕೆ ನಿಂತಿದ್ದು ಮಳೆ ನೀರು ಯಾವಕಡೆಯು ಹರಿಯದೇ ಅಲ್ಲಿರುವ ಮನೆಗಳಿಗೆ ನುಗ್ಗುವುದು ಎಂದು ಅರೋಪಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಬಸವರಾಜ್ ಮಾತನಾಡಿ ಭೂನಗುಡಿ ಹಳೇ ಸಂತೇಮೈದಾನದಿಂದ ತರೀಕೆರೆ ರಸ್ತೆ ಕಡೆ ಬರುವ ಒಳಚರಂಡಿ ವೈಜ್ಞಾನಿಕವಾಗಿದೆ. ಕೂಡಲೇ ದುರಸ್ತಿ ಮಾಡಲು ಇಲಾಖೆಯಲ್ಲಿ ಹಣ ಬಿಡುಗಡೆಯಾಗಬೇಕು. ಎಂದಾಗ ಸದಸ್ಯರು ಸಾರ್ವಜನಿಕರು ಬಸವರಾಜ್ ಮೇಲೆ ಅಕ್ರೋಶಗೊಂಡರಲ್ಲದೆ, ಮೇಲಿಂದ ನೀರು ಹರಿಯುವ ಚರಂಡಿ ದೊಡ್ಡದಾಗಿದ್ದು, ತರೀಕೆರೆ ರಸ್ತೆಯ ಬಳಿ ಕೂಡುವ ಚರಂಡಿ ಗಾತ್ರ ಚಿಕ್ಕದಾಗಿದೆ ಎಂಬ ನಿದರ್ಶಣ ಕೊಟ್ಟರು. ಇದು ವೈಜ್ಞಾನಿಕವೇ ಎಂದು ಪ್ರಶ್ನಿಸಿದರು.

 ನಗರಸಭೆ ಇಂಜಿನಿಯರ್ ಗಳಾದ ಶಿವಪ್ರಸಾದ್ ಮತ್ತು ಪ್ರಸಾದ್ ಮಾತನಾಡಿ ನೀರು ಸರಾಗವಾಗಿ ಹರಿಯಲು ಚರಂಡಿಗಳಲ್ಲಿನ ಹೂಳನ್ನು ತೆಗೆಸಲು ಮಂಗಳವಾರ ದಿಂದಲೇ ಕ್ರಮ ಕೈಗೊಳುವುದರ ಜೊತೆಗೆ ಭೂತನಗುಡಿ ಮತ್ತು ಹಳೇ ಸಂತೇಮೈದಾನದಿಂದ ತರೀಕೆರೆ ರಸ್ತೆ ಕೂಡು ಚರಂಡಿ ನೀರು ಸೂಕ್ತವಾಗಿ ನದಿ ಸೇರಲು ಡೆಕ್ ಗಳ ನಿರ್ಮಾಣ ಗಳ ಬಗ್ಗೆ ತುರ್ತು ಗಮನ ಹರಿಸುವುದಾಗಿ ಭರವಸೆ ನೀಡಿದರು. 

 ವಾಸವಿ ಸ್ಟೋರ್ಸ್ ಮಾಲೀಕ ರಘು ಮಾತನಾಡಿ ಅಂದು ಚರಂಡಿ ನಿರ್ಮಾಣ ಕಾರ್ಯ ಸಂದರ್ಭದಲ್ಲಿ ಇದ್ದ ನೀಲಿ ನಕ್ಷೆಯಂತೆ ಕಾಮಗಾರಿ ನಡೆಸಿಲ್ಲ ಎಂದರು. ಕಡೆಯಲ್ಲಿ ನಗರಸಭಾ ಅಧ್ಯಕ್ಷರು, ಸಂಬಂಧಿಸಿದ ಇಲಾಖಾ ಅಭಿಯಂತರರು, ಸದಸ್ಯರು ವಾರ್ಡ್ ಭೇಟಿಯನ್ನು ಮಂಗಳವಾರ ದಂದು ಮಾಡುವ ಭರವಸೆಯಿತ್ತರು. ನಗರಸಭಾ ಸದಸ್ಯರು, ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಭಿಯಂತರರು, ಮೆಸ್ಕಾಂ  ಇಲಾಖೆ ಅಧಿಕಾರಿಗಳು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು