ಎರೆಡೆರಡು ಬಾರಿ ಹೆಜ್ಜೇನು ಕಡಿತ


ಸುದ್ದಿಲೈವ್/ಹೊಸನಗರ

ಎರಡೆರಡು ಬಾರಿ ಹೆಜ್ಜೇನು ದಾಳಿಗೆ 6 ಜನ ಗಾಯಗೊಂಡು ಓರ್ವ ಗಂಭೀರಗೊಂಡ ಘಟನೆ ತಾಲೂಕಿನ ಚಿಕ್ಕಪೇಟೆ ನಗರದಲ್ಲಿ ನಡೆದಿದೆ.

ಶನಿವಾರ ಬೆಳಿಗ್ಗೆ ಚಿಕ್ಕಪೇಟೆ ಸೇತುವೆ ಬಳಿ ಇರುವ ಬಾಷಾ ಎಂಬುವವರ ಮನೆ ಸಮೀಪ ಹೆಜ್ಜೇನು ದಾಳಿ ಮಾಡಿದೆ. ಬಾಷಾ, ಅವರ ಪತ್ನಿ ಆಸ್ಮಾ, ಇಬ್ಬರು ಮಕ್ಕಳಾದ ಆರೀಫ್ ಮತ್ತು ಅನೀಫ್ ಮೇಲೆ ಹೆಜ್ಜೇನು ದಾಳಿ ಮಾಡಿದೆ. ಕೂಡಲೇ ನಗರ ಆಸ್ಪತ್ರೆಗೆ ಸಾಗಿಸಿ ನಾಲ್ವರಿಗೆ ಚಿಕಿತ್ಸೆ ಕೊಡಿಸಲಾಯಿತು.

ಮತ್ತೆ ದಾಳಿ:

ಸಂಜೆ 5 ಗಂಟೆ ವೇಳೆಗೆ ಅದೇ ಜಾಗದಲ್ಲಿ ಹೆಜ್ಜೇನು ದಾಳಿ ನಡೆಸಿದೆ. ಬೆಳಿಗ್ಗೆ ದಾಳಿಗೆ ಒಳಗಾಗಿದ್ದ ಬಾಷಾ ಅವರ ಪುತ್ರ ಆರೀಫ್ ಮೇಲೆ, ಪಕ್ಕದ ಮನೆ ಯಾಸಿನ್ ಮೇಲೆ ಮತ್ತೆ ಹೆಜ್ಜೇನು ದಾಳಿ ನಡೆಸಿದೆ. ಇದೇ ವೇಳೆ ಹಾಸಿಗೆ ರಿಪೇರಿಗೆ ಶಿವಮೊಗ್ಗದ ಮಂಜುನಾಥ ಬಡಾವಣೆ ನಿವಾಸಿ ಹುಸೇನ್ ಸಾಬ್ (68) ಮತ್ತು ಅವರ ಮಗ ಬಾಬಾ ಸಾಬ್ ಎಂಬುವವರ ಮೇಲೆ ಕೂಡ ಹೆಜ್ಜೇನು ದಾಳಿ ನಡೆಸಿದೆ. ವೃದ್ಧ ಹುಸೇನ್ ಸಾಬ್ ಮೇಲೆ ತೀವ್ರ ದಾಳಿಯಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಕೂಡಲೇ ನಗರ ಆಸ್ಪತ್ರೆಗೆ ಸೇರಿಸಲಾಯಿತು. ಬಾರೀ ಪ್ರಮಾಣದಲ್ಲಿ ಜೇನು ಕಚ್ಚಿದ ಕಾರಣ ಸ್ಥಳೀಯರ ಸಹಕಾರದಿಂದ ಅವರ ದೇಹದಿಂದ 500 ಕ್ಕು ಹೆಚ್ಚು ಮುಳ್ಳು ಹೊರತೆಗೆಯಲಾಗಿದೆ. ಬಳಿಕ ಹೊಸನಗರ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾದಲ್ಲಿ ಇಡಲಾಗಿದೆ.


ಒಂದೇ ಜಾಗದಲ್ಲಿ ಎರಡು ಬಾರಿ ಹೆಜ್ಜೇನು ದಾಳಿ ನಡೆಸಿರುವುದು ಸ್ಥಳೀಯರಲ್ಲಿ ಆತಂಕ, ಭಯಕ್ಕು ಕಾರಣವಾಗಿದೆ.

ಚಿತ್ರ:  ಹೆಜ್ಜೇನು ದಾಳಿಗೆ ಒಳಗಾಗಿ ಗಂಭೀರಗೊಂಡಿರುವ ಶಿವಮೊಗ್ಗ ಮಂಜುನಾಥ ಬಡಾವಣೆ ನಿವಾಸಿ ಹುಸೇನ್ ಸಾಬ್



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close